ತಿಪಟೂರು ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಆಹಾರ ಅರಸಿಬಂದ ಚಿರತೆ ಸೇರೆಯಾಗಿದ್ದು, ಬೋನಿನಲ್ಲಿ ಸೆರೆಯಾಗಿದ್ದ ಚಿರತೆ, ಅಗ್ನಿಅವಘಡದಲ್ಲಿ ಸಾವನ್ನಪ್ಪಿರುವ ಬಗ್ಗೆ ಕಲ್ಪತರು ಕ್ರಾಂತಿ ಡಾಟ್ ಕಾಂ ನಲ್ಲಿ ವರದಿ ಪ್ರಸಾರವಾಗಿತ್ತು,

ಕಲ್ಪತರು ಕ್ರಾಂತಿ ಸೇರಿದಂತೆ ಮಾಧ್ಯಮಗಳ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು,ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ,ಪತ್ರಿಕೆ ಬಳಗವು ಅರಣ್ಯ ಸಚಿವರ ಮಾನವೀಯ ನಡೆತೆ ಹಾಗೂ ಅರಣ್ಯ ಸಂಪತ್ತು,ವನ್ಯಜೀವಿಗಳ ಬಗೆಗಿನ ಕಾಳಜಿಗೆ ಅಭಿನಂದನೆ ಸಲ್ಲಿಸಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ










Leave a Reply