
ಪ್ರಯಾಣಿಕರ ಸೋಗಿನಲ್ಲಿ ಬಸ್ ಗಳಲ್ಲಿ ಪ್ರಯಾಣಿಕರ ಪರ್ಸ್, ಬ್ಯಾಗ್,ಹಾಗೂ ವಸ್ತುಗಳ ಕಳ್ಳವು ಮಾಡುತ್ತಿದ್ದ, ಐನಾತಿ ಕಳ್ಳರ ಹುಳಿಯಾರಯ ಪೊಲೀಸರ ಬಲೆಗೆ ಬಿದ್ದಿದ್ದಾರೆ,
ಪ್ರಯಾಣಿಕರು ಬಸ್ ಹತ್ತುವ ವೇಳೆ ಬಸ್ಸಿನಲ್ಲಿ ಪಿಕ್ ಪಾಕೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಬಂಧಿಸಿದ್ದು ಒಟ್ಟು ಸಮಾರು 10,05,000/- ಲಕ್ಷ ಬೆಲೆ ಬಾಳುವ ಚಿನ್ನದ ವಡವೆಗಳ ವಶ.
ದಿನಾಂಕ:-09-01-2025 ರಂದು ಬೆಳಗ್ಗೆ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ,
ಗೌಡನಕಟ್ಟೆ ಗ್ರಾಮದ ರಾಜೇಶ್ವರಿ ರವರು ಸಂಬಂಧಿಕರ ಮಗಳ ನಾಮಕರಣಕ್ಕೆ ಹೊಸದುರ್ಗದ
ಮಾಳಪ್ಪನಹಳ್ಳಿಗೆ ಹೋಗಲು ತಿಪಟೂರಿನಿಂದ ಹುಳಿಯಾರಿಗೆ ಬಂದು ಹುಳಿಯಾರಿನಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಾಳಪ್ಪನಹಳ್ಳಿಗೆ ಹೋಗಲು ಹುಳಿಯಾರು ಬಸ್ ಸ್ಟಾಪ್ ನಲ್ಲಿ ಬೆಳಗ್ಗೆ 10.45 ರ ಸಮಯದಲ್ಲಿ ಬಸ್ ಗೆ ಹತ್ತುವ ಸಮಯದಲ್ಲಿ ತಾನು ಬಗಲಿನಲ್ಲಿ ನೇತು ಹಾಕಿಕೊಂಡಿದ್ದ ಬ್ಯಾಗ್ ನಲ್ಲಿದ್ದ ಪರ್ಸನ್ನು ಆದರಲ್ಲಿದ್ದ ಚಿನ್ನದ ವಡವೆಗಳ ಸಮೇತ ಯಾರೋ ಕಳ್ಳರು ಪಿಕ್ ಪಾಕೆಟ್ ಮಾಡಿ ಕದ್ದಿರುತ್ತಾರೆ,

ಈಸಂಬಂಧ ಹುಳಿಯಾರು ಪೊಲೀಸ್ ಠಾಣಾ ಮೊ.ನಂ-35/2025 ಕಲಂ 303 (2) ಬಿ.ಎನ್.ಎಸ್-2023 ರರೀತ್ಯಾ ಪ್ರಕರಣ ದಾಖಲಾಗಿರುತ್ತೆ.ಈ ಕೇಸಿನ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ಅಶೋಕ್ ಕೆ.ವಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್
ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ, ತಿಪಟೂರುಉಪವಿಭಾಗದ ಡಿ.ಎಸ್.ಪಿ. ವಿನಾಯಕ ಎನ್ ಶೆಟಗೇರಿ ರವರ ಮಾರ್ಗ ಸೂಚನೆ ಮೇರೆಗೆ ತಂಡ ರಚಿಸಿದ್ದು,ದಿನಾಂಕ:-27/02/2025 ರಂದು ಈ ಕೆಳಕಂಡ ಆರೋಪಿತರುಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆಒಳಪಡಿಸಿದಾಗ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ 01 ಪ್ರಕರಣ ಹಾಗೂ ಕಿಬ್ಬನಹಳ್ಳಿ ಕ್ರಾಸ್ ಠಾಣಾವ್ಯಾಪ್ತಿಯ 01 ಪ್ರಕರಣಗಳಲ್ಲಿ ವರದಿಯಾಗಿದ್ದ ಕಳ್ಳತನಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆಗೆ ಒಳಪಡಿಸಿದಾಗ
ತಿಳಿದು ಬಂದಿರುತ್ತೆ. ಸದರಿ ಆರೋಪಿತರಿಂದ ಒಟ್ಟು 10,05,000/- ಲಕ್ಷ ಬೆಲೆ ಬಾಳುವ 134 ಗ್ರಾಂ ಚಿನ್ನದ,ವಡವೆಗಳನ್ನು ಅಮಾನತ್ತು ಪಡಿಸಿಕೊಂಡು ಕಾನೂನು ರಿತ್ಯಾ ಕ್ರಮ ಕೈಗೊಂಡಿರುತ್ತೆ.
ಆರೋಪಿಗಳ ಹೆಸರು ವಿಳಾಸ
- ಅಲುವೇಲಮ್ಮ ತಂದೆ ಲೇಟ್ ವೆಂಕಟೇಶಪ್ಪ, 25 ವರ್ಷ, ಕೂಲಿ ಕೆಲಸ, ಕೊರಟಗೆರೆ ಬೋವಿ
ಕಾಲೋನಿ ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ. ಹಾಗೂ ಇತರೆ ಆರೋಪಿಗಳನ್ನ ಬಂಧಿಲಾಗಿದ್ದು
ಆರೋಪಿಗಳ ಪತ್ತೆಕಾರ್ಯದಲ್ಲಿ ಶ್ರಮಿಸಿದ ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕರಾದ ನದಾಫ್ ಎಫ್.ಕೆ, ಹುಳಿಯಾರು ಪೊಲೀಸ್ ಠಾಣೆ ಪಿ.ಎಸ್.ಐ ಧರ್ಮಾಂಜಿ, ಮತ್ತುಸಿಬ್ಬಂದಿಗಳಾದ ದಕ್ಷಿಣಮೂರ್ತಿ ಕೆ.ವಿ, ಚೇತನ್ ಕೆ.ವಿ, ಪಾಂಡುರಂಗಯ್ಯ, ನಾಗಭೂಷಣ್, ರಂಗಸ್ವಾಮಿ
ಸಿಬ್ಬಂದಿಗಳ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಐ.ಪಿ.ಎಸ್ ರವರು ಅಭಿನಂದಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ