
ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ, ಆರೋಗ್ಯ ಇಲಾಖೆ, ತಿಪಟೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ) ಮತ್ತು ವೈಭವಿ ಆಸ್ಪತ್ರೆ ಇವರ ಸಹಯೋಗದಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಭಿರ ನಡೆಸಲಾಯಿತು

ಶಿಶುಅಭಿವೃದ್ಧಿಇಲಾಖೆ ಯೋಜನಾಧಿಕಾರಿಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಪೌಷ್ಠಿಕ ಮಕ್ಕಳನ್ನು ಬಡತನ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎನ್ನುವ ದೃಷ್ಠಿಯಿಂದಸರ್ಕಾರ ಗರ್ಭಿಣಿಯರುಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿಪೌಷ್ಠಿಕಆಹಾರ,ಹಾಲುಕೋಳಿಮಟ್ಟೆ ವಿತರಣೆ ನೀಡುತ್ತಿದ್ದು,ನಿಯಮಿತವಾಗಿ ಮಕ್ಕಳ ತಪಾಸಣೆ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಪರೀಕ್ಷೆ ಮಾಡುತ್ತಿದೆ, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ಡಾ// ರಾಧಿಕಮಾತನಾಡಿ ಆರೋಗ್ಯ ಇಲಾಖೆಯಿಂದಅನುಷ್ಠಾನಗೊಳ್ಳುತ್ತಿರುವ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮದಲ್ಲಿರಕ್ತಹೀನತೆ ಯಿಂದ ಬಳಲುತ್ತಿರುವ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ಹಾಗೂಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾllಶಿವಕುಮಾರ್ ಮಾತನಾಡಿ ನಮ್ಮ ಆರೋಗ್ಯ ಸಂಪಾದನೆಗೆ ನಾವು ಯಾವುದೇ ಕಂಪನಿಗಳಿಂದ ದೊರೆಯುವ ಔಷಧಿಗಳ ಮೊರೆಹೋಗುವ ಅಗತ್ಯವಿಲ್ಲ, ಕೇವಲ ಜಾಹಿರಾತುಗಳಿಗೆ ಮರುಳಾಗಿ ಆರೋಗ್ಯ ಹಾಳುಮಾಡಿಕೊಳ್ಳದೆ,ನಿಮ್ಮ ಮನೆಯಲ್ಲಿಯೇ ತಯಾರು
ಮಾಡುವ ಮೊಳಕೆ ಕಾಳುಗಳು ಹಾಗೂ ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಮೊಟ್ಟೆ ಯನ್ನ ಯಥೇಚ್ಛವಾಗಿಉಪಯೋಗಿಸಬೇಕೆಂದು ತಿಳಿಸಿದರು.

ತಿಪಟೂಟೂರು ವೈಭವಿ ಆಸ್ಪತ್ರೆಯ ವೈದ್ಯರಾದ ಡಾ//ಮಧುಸೂಧನ್ ಮಾತನಾಡಿ ತಾಯಿ ಹಾಲು ಅಮೃತಕ್ಕೆ ಸಮಾನ ತಾಯಿ ಹಾಲಿನಲ್ಲಿ ಹೆಚ್ಚು ಹೆಚ್ಚು ರೋಗ ನಿರೋಧಕಶಕ್ತಿಹೆಚ್ಚಿನ ಪ್ರಮಾಣದಲ್ಲಿಪೌಷ್ಠಿಕಾಂಶಗಳಿವೆ,ಮಗು ಹುಟ್ಟಿದ ಅರ್ಧಗಂಟೆಯೊಳಗೆ, ತಾಯಿ ಎದೆಹಾಲನ್ನು ಕೊಡಬೇಕು, ಹಾಗೂ ಮನೆಯಲ್ಲಿ ತಯಾರಿಸಿದ ಪೌಷ್ಠಿಕಆಹಾರ ನೀಡಬೇಕು.ತಾಯಿ ಹಾಗೂ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದ ಅವರು
ಆಪೌಷ್ಠಿಕ ಮಕ್ಕಳಿಗೆ ಐರನ್ ಮತ್ತು ಕ್ಯಾಲ್ಸಿಯಂ ಸಿರಪ್ ಗಳನ್ನು ಉಚಿತವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ//ರವಿ, ಡಾ// ರಂಗನಾಥ್, ಡಾ//ಮುಸ್ತಾಫ್ ಆರ್.ಬಿ.ಎಸ್.ಕೆ.
ವೈದ್ಯಾಧಿಕಾರಿಗಳಾದ ಡಾ//ರಾಜು ತಿಪಟೂರು ತಾಲ್ಲೂಕು, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ
ಎಂ.ಮಂಜುಳಾ ಸಹಾಯಕ ಶಿಶು ಅಭಿವೃದ್ದಿಯೋಜನಾಧಿಕಾರಿಗಳಾದ ಶ್ರೀಮತಿ ದೀಪ ಹೆಬ್ಬಳ್ಳಿ, ಶ್ರೀಮತಿ ಮೀನಾಕ್ಷಿ ಬಿ.ಬಟ್ಟೂರ, ಮೇಲ್ವಿಚಾರಕಿಯರಾದ ಶ್ರೀಮತಿ ಬಿ.ಎಸ್. ಪ್ರೇಮ, ಶ್ರೀಮತಿ ಮಂಜುಳಾದೇವಿ,ಭಾಗ್ಯಮ್ಮ,ಉಪಸ್ಥಿತರಿದರು ತಿಪಟೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಲಯನ್ ಡೇಟ್ ಸಿರಪ್‌ನ್ನು ಉಚಿತವಾಗಿ ಅಪೌಷ್ಠಿಕ ಮಕ್ಕಳಿಗೆ ವಿತರಿಸಿದರು.


