
ತುಮಕೂರು ಜಿಲ್ಲೆ ತಿಪಟೂರು ನಗರದ ಕೆ.ಆರ್ ಬಡಾವಣೆ ಶಂಕರಪ್ಪ ಲೇಹೌಟ್ ನಲ್ಲಿ ಗೃಹಿಣಿಯೊಬ್ಬರ ಮಾಗಲ್ಯ ಸರಕದ್ದು ಕಳ್ಳರು ಪಾರಾರಿಯಾಗಿದ್ದಾರೆ

ನಗರದ ಕೆ.ಆರ್ ಬಡಾವಣೆ ವಾಸಿಯಾದ ಅನಸೂಯರಾಜ್ ಎನ್ನುವ ಮಹಿಳೆ ಅಂಗಡಿಯಲ್ಲಿ ದಿನಸಿ ಕೊಳ್ಳಲು ಹೋಗಿದ್ದು,ಅಂಗಡಿಯಿಂದ ವಾಪಾಸ್ ಬರುವಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಕಳ್ಳರು ಮಹಿಳೆಯ ಮಾಂಗಲ್ಯ ಸರಕಸಿದುಕೊಂಡು ಪಾರಾರಿಯಾಗಿದ್ದಾರೆ.ತಕ್ಷಣ ಮಹಿಳೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ :ಮಂಜುನಾಥ್ ಹಾಲ್ಕುರಿಕ