
ಉಂಡೆ ಕೊಬ್ಬರಿ ಸೇರಿದಂತೆ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ. ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ರೈತಪರ ಸಂಘಟನೆಗಳಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನೆ ನಡೆಸಿದ ರೈತಪರ ಸಂಘಟನೆಗಳು ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಉಂಡೆಗೊಬ್ಬರಿಗೆ ಕೇವಲ ಒಂದು ರೂಪಾಯಿ ಬೆಂಬಲ ಬೆಲೆ ಹೆಚ್ಚು ಮಾಡುವ ಮೂಲಕ ಕೊಬ್ಬರಿ ಬೆಳೆಗಾರರು ಹಾಗೂ ರೈತರನ್ನ ಅವಮಾನಿಸಿದೆ ಕೇಂದ್ರ ಸರ್ಕಾರದ ರೈತ ನಿರ್ಲಕ್ಷ ಧೋರಣೆ ಖಂಡಿಸಿ ತಾಲೂಕಿನ ರೈತರು ಒಂದು ರೂಪಾಯಿ ಹಣ ಸಂಗ್ರಹಿಸಿ ಆಡಳಿತರೂಢ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳಿಗೆ ಮನಿ ಆರ್ಡರ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ತಿಮ್ಲಾಪುರ ದೇವರಾಜು ,ರೈತರ ಉತ್ಪಾದನಾ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಲೆಗಳು ಮಾತ್ರ ಕುಸಿತವಾಗುತ್ತಿರುವ ಕಾರಣ ರೈತ ಜೀವನ ನಡೆಸಲು ಕಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಪ್ರಕಾರ ಉತ್ಪಾದನಾ ವೆಚ್ಚ ಆಧರಿಸಿ ಬೆಂಬಲ ಬೆಲೆ ನೀಡಬೇಕು. ಕೇಂದ್ರದ ಆಡಳಿತರೂಢ ಬಿಜೆಪಿ ಸರ್ಕಾರ ರೈತರ ನಿರ್ಲಕ್ಷ್ಯ ಮಾಡುತ್ತಿದೆ.27 ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಹೇಳಿದ ಸರ್ಕಾರ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಜಾರಿಮಾಡದ ನಿರ್ಲಕ್ಷ್ಯ ಮಾಡುತ್ತಿದೆ. ಕಲ್ಪತರು ನಾಡಿನ ಜೀವನಾಡಿಯಾದ ಕೊಬ್ಬರಿ ಬೆಲೆ ಕುಸಿತವಾಗುತ್ತಿದ್ದು ಕನಿಷ್ಠ ಬೆಂಬಲ ಬೆಲೆ ನೀಡದೆ ಕೇವಲ ಒಂದು ರೂಪಾಯಿಯನ್ನ ಈ ವರ್ಷ ಹೆಚ್ಚಳ ಮಾಡಿ ರೈತರನ್ನ ಅವಮಾನ ಮಾಡಿರುವುದು ಖಂಡನೀಯ. ಕೇಂದ್ರ ಸರ್ಕಾರ ಕೂಡಲೇ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಾಲೇವಾಲ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಬೆಂಬಲವಿದೆ.ನಾವೂ ಸಹ ಅವರ ಹೋರಾಟ ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಮ ಮಾಡಿ ಬೆಂಬಲ ಸೂಚಿಸಿದ್ದೇವೆ.ಸರ್ಕಾರ ರೈತರನ್ನ ನಿರ್ಲಕ್ಷ್ಯ ಮಾಡಿದರೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳಿಗೆ ಪಾಠಕಲಿಸುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಪಟೂರು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ ಶಶಿಧರ್ ಮಾತನಾಡಿ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎನ್ನುವುದ ರೈತರ ನ್ಯಾಯಯುತ ಬೇಡಿಕೆ, ರೈತರ ಸಂಕಷ್ಟ ಅರಿಯತೆ ಸರ್ಕಾರ ಮೊಂಡುತನ ತೋರುತ್ತಿದೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕೇವಲ ಒಂದು ರೂಪಾಯಿ ಕೊಬ್ಬರಿ ಬೆಂಬಲ ಬೆಲೆ ನೀಡಿರುವುದು ತೀವ್ರ ಹಾಸ್ಯಾಸ್ಪದವಾಗಿದೆ, ಕೇಂದ್ರ ಸರ್ಕಾರದ ಧೋರಣೆಯನ್ನ ಖಂಡಿಸಬೇಕಾದ, ನಮ್ಮ ಜನಪ್ರತಿನಿಧಿಗಳು, ಕಣ್ಣು ಮುಚ್ಚಿ ಕೂತಿದ್ದಾರೆ, ನಮ್ಮ ಮತಗಳ ಮೂಲಕವೇ ಆಯ್ಕೆಯಾಗಿ ನಮ್ಮ ಪ್ರತಿನಿಧಿಯಾದ,ಕೇಂದ್ರ ರೈಲ್ವೆ ಹಾಗೂ ಜನಶಕ್ತಿ ಸಚಿವ ವಿ. ಸೋಮಣ್ಣನವರು ಸ್ವತಃ ರೈತರು ತೆಂಗು ಬೆಳೆಗಾರರು ಸಹ ಆಗಿರುವ ಕೇಂದ್ರ ಹುಕ್ಕು ಮತ್ತು ಕೈಗಾರಿಕಾ ಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ತೆಂಗು ಬೆಳೆಗಾರರ ಸಮಸ್ಯೆಯನ್ನು ಅರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕಿತ್ತು, ಆದರೆ ಅವರು ರೈತರ ಸಮಸ್ಯೆಗಳಿಗೆ ಧ್ವನಿಗೂಡಿಸುತ್ತಿಲ್ಲ, ಲೋಕಸಭಾ ಚುನಾವಣೆ ವೇಳೆ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಸಮಾವೇಶ ನಡೆಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ತೆಂಗು ಬೆಳೆಗಾರರ ಹಿತ ಮರೆತಿದ್ದಾರೆ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 15 ಸಾವಿರ ಕೊಬ್ಬರಿ ಧಾರಣೆ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಸಹ ತೆಂಗು ಬೆಳೆಗಾರರ ಬಗ್ಗೆ ಗಮನಹರಿಸುತ್ತಿಲ್ಲ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಬಂದ ಕೇಂದ್ರ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳಿದ್ದಾರೆ ಆದರೆ ತೆಂಗು ಬೆಳೆಗಾರರಿಗೆ ಒಬ್ಬ ಕೇಂದ್ರ ಮಂತ್ರಿಯಿಂದ ರೈತರ ಸಮಸ್ಯೆಗಳನ್ನ ಈಡೇರಿಸುವ ಭರವಸೆ ಇಲ್ಲ ಎನ್ನುವುದಾದರೆ ತೆಂಗು ಬೆಳೆಗಾರರ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ ಧೋರಣೆ ಕಾರಣ ಎನ್ನಬಹುದು. ರೈತರು ಒಗ್ಗಟ್ಟಿನಿಂದ ಹೋರಾಡಿ ಕನಿಷ್ಠ ಬೆಂಬಲ ಬೆಲೆಯನ್ನ ಪಡೆಯಬೇಕು ಎಂದು ಒತ್ತಾಯಿಸಿದರು


,ರೈತರ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ ಸಹ ಬೆಂಬಲ ನೀಡಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಭಾರತೀಯ ವೈದ್ಯಕೀಯ ಸಂಘದ ಮುಖಂಡರಾದ ಡಾ//ಅನೀಲ್ ಮಾತನಾಡಿ ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡದೆ. ನಿರ್ಲಕ್ಷ್ಯ ವಹಿಸಿದೆ,27ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದ್ದಾಗಿ ಹೇಳುವ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಲು ಮೀನಾಮೇಷ ಏಣಿಸುತ್ತಿದೆ. ಸರ್ಕಾರ ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಹಾಗೂ ತಿಪಟೂರು ಜನರ ಜೀವನಾಧಾರವಾದ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕ್ರಮತೆಗೆದುಕೊಳ್ಳಬೇಕು ,ವೈದ್ಯರು ಹಾಗೂ ರೈತರ ಮಕ್ಕಳೆ, ರೈತರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯೋಗಾನಂದ ಸ್ವಾಮಿ ಜಯಚಂದ್ರ ಶರ್ಮ ತಿಮ್ಲಾಪುರ ದೇವರಾಜು ರಂಗಪುರ ಚೆನ್ನಬಸವಣ್ಣ ತಿಪಟೂರು ಸೌಹಾರ್ದ ವೇದಿಕೆ ಅಧ್ಯಕ್ಷ ಅಲ್ಲಾಭಕಾಶ್ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಅನುಸೂಯಮ್ಮ,ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಕಸಾಪ ಅಧ್ಯಕ್ಷ ಬಸವರಾಜು.ಮುಖಂಡರಾದ ಶ್ರೀಕಾಂತ್ ಕೆಳಹಟ್ಟಿ,ರಾಜಣ್ಣ, ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂಗಮೇಶ್,ಜಯಾನಂದಯ್ಯ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ//ರಾಮೇಗೌಡ.ಪ್ರದಾನಕಾರ್ಯದರ್ಶಿ ಡಾ//ಮಧುಸೂಧನ್ .ಕುಮಾರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ// ಶ್ರೀಧರ್.ಮುಂತ್ತಾದವರು ಉಪಸ್ಥಿತರಿದರು
ವರದಿ: ಮಂಜುನಾಥ್ ಹಾಲ್ಕುರಿಕೆ













Leave a Reply