ತಿಪಟೂರು ಹಾಸನ ಸರ್ಕಲ್ ನಲ್ಲಿ ಅದ್ದೂರಿಯಾಗಿ ನಡೆದ ತ್ರಿವಿಧ ದಾಸೋಹಿ ಡಾ//ಶಿವಕುಮಾರ ಮಹಾಸ್ವಾಮೀಜಿಗಳ 6ನೇ ವರ್ಷದ ಪುಣ್ಯ ಸ್ಮರಣೆ

Spread the love

ತಿಪಟೂರು ನಗರದ ಬಿ.ಹೆಚ್ ರಸ್ತೆ ಹಾಸನ ಸರ್ಕಲ್ (ಡಾ//ಶಿವಕುಮಾರ ಸ್ವಾಮೀಜಿ) ಸರ್ಕಲ್ ನಲ್ಲಿ ತ್ರಿವಿಧ ದಾಸೋಹಿ ಪದ್ಮಭೂಷಣ ,ಕರ್ನಾಟಕ ರತ್ನ ಡಾ//ಶಿವಕುಮಾರಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು

ಕೆರಗೋಡಿ ರಂಗಾಪುರ ಭೂ ಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು,ತಿಪಟೂರು ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀಶ್ರೀ ಕರಿಬಸವದೇಶೀಕೇಂದ್ರ ಮಹಾಸ್ವಾಮೀಜಿಗಳು,ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿಗಳು ಭೇಟಿ ನೀಡಿ ಡಾ// ಶ್ರೀಶ್ರೀ ಶಿವಕುಮಾರಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು

ತಿಪಟೂರು ಶಾಸಕ ಕೆ.ಷಡಕ್ಷರಿ,ಮುಖಂಡರಾದ ನಿಜಗುಣ,ರೇಣುಕಾರಾಧ್ಯ,ಬ್ಯಾಂಕ್ ಕುಮಾರಸ್ವಾಮಿ,ಮಾದಿಹಳ್ಳಿ,ಅಶೋಕ್ ಕುಮಾರ್,ದಿಬ್ಬದಹಳ್ಳಿ ಶ್ಯಾಮ್ ಸುಂದರ್,ಮಾದಿಹಳ್ಳಿ,ಗಂಗರಾಜು.ಮುಂತ್ತಾವರು ಉಪಸ್ಥಿತರಿದರು
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!