
ತಿಪಟೂರು ನಗರದ ಕೋಟೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರ ಸ್ವಾಮಿ,ಶ್ರೀಮಹಾಲಕ್ಷ್ಮಿಹಾಗೂ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾಕೈಂಕರ್ಯ ನೆರವೇರಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ಶ್ರೀವೆಂಕಟೇಶ್ವರಸ್ವಾಮಿಗೆ ರಜತ ಕಿರೀಟಧಾರಣೆ, ರಜತ ತ್ರಿಪುಂಡ್ರ ನಾಮಧಾರಣೆ ,ಸ್ವರ್ಣಪಾಧುಕೆಧಾರಣೆ ವಿಶೇಷ ಅಲಂಕಾರ ನೆರವೇರಿಸಲಾಯಿತು
ಏಕಾದಶಿಯಂದು ಉತ್ತರವೈಕುಂಠದ್ವಾರದ ವಿಶೇಷ ದರ್ಶನ ಹಾಗೂ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು ದ್ವಾದಶಿಯಂದು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಹೋಮ ಹವನ ವಿಶೇಷ ಪೂಜಾಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ,ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತ ಸಮೂಹ ಗೋವಿಂದ ನಾಮಸ್ಮರಣೆಗೊಂದಿಗೆ ಪೂಜೆಸಲ್ಲಿಸಿ ಕೃತಾರ್ಥರಾದರು.


ಶ್ರೀಕ್ಷೇತ್ರ ಭಕ್ತರು ಹಾಗೂ ದೇವಾಲಯ ಸಮಿತಿಯ ಅಶೋಕ್ ಮಾತನಾಡಿ ಭಕ್ತಪರಾದೀನ ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರ ಅಭಿಷ್ಠೆಗೋಸ್ಕರ 33ವರ್ಷಗಳ ಹಿಂದೆ ಕುಲಬಂಧುಗಳು ಸೇರಿ ಸಿಂಗ್ರಿ ನಂಜಪ್ಪ ನವರ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಆವರಣದಲ್ಲಿಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸ್ಥಾಪನೆ ಮಾಡಿದ್ದು,ಸರ್ವಜನರ ಅಭಿಲಾಷೆಯಂತೆ ಪೂಜಾಕೈಂಕರ್ಯಗಳು ನಡೆಯುತ್ತಿದ್ದು,ಶ್ರೀಕ್ಷೇತ್ರ ತಿಪಟೂರು ಜನರ ಆರಾಧ್ಯದೈವವಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಬಂದಿದೆ.33 ವರ್ಷಗಳಿಂದ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಸ್ವಾಮಿಯವರಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಹವನಗಳನ್ನ ಏರ್ಪಡಿಸಿದ್ದು, ಉತ್ತರ ವೈಕುಂಠ ದರ್ಶನ ಹಾಗೂ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು
ವರದಿ :ಮಂಜುನಾಥ್ ಹಾಲ್ಕುರಿಕೆ




Your Attractive Heading

