
ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಹಾಗೂ ಶಾಸಕ ಕೆ.ಷಡಕ್ಷರಿ ಸೋದರ ದಿವಂಗತ ಕೆ.ರಾಜಶೇಖರ್,(ರಾಜು ಬೈಯಾ) ರವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 11.01.2025 ರಂದು ಶನಿವಾರ ತಿಪಟೂರು ನಗರದ ಈಡೇನಹಳ್ಳಿ ಗೇಟ್ ಬಳಿ ಇರುವ ಎಸ್ಎನ್ ಎಸ್ ಕನ್ವೆಷನ್ ಹಾಲ್ ನಲ್ಲಿ ಕೆ.ರಾಜಶೇಖರ್ ಅಭಿಮಾನಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಭಿರ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.

ತಿಪಟೂರು ನಗರದ ವೈಭವ್ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ತರಕಾರಿ ಪ್ರಕಾಶ್ , ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ರಾಜಶೇಖರ್ ಧಣಿವರಿಯದ ಜನ ನಾಯಕ, ತಮ್ಮ ಜೀವಿತಾವದಿಯುದ್ದಕ್ಕೂ ಜನಸೇವೆಯಲ್ಲಿ ಇದ್ದವರು, ಜನಸೇವೆ ಮೂಲಕ ಜನಮನಗೆದ್ದ ರಾಜುಬೈಯ್ ನಿಧನ ಅವರ ಅನುಯಾಯಿಗಳಿಗೆ ಅತೀವ ನೋವುಂಟು ಮಾಡಿದ್ದು, ಅವರ ಸೇವಾಕಾರ್ಯ ಮುಂದುವರೆಸಿ ,ರಾಜುಬೈಯ್ ಆತ್ಮಕ್ಕೆ ಶಾಂತಿಕೋರಬೇಕು ಎನ್ನುವ ದೃಷ್ಠಿಯಿಂದ ರಾಜುಬೈಯ್ ಅಭಿಮಾನಿಗಳು,ಪ್ರತಿವರ್ಷ ಪುಣ್ಯಸ್ಮರಣೆಯಂದು, ಆರೋಗ್ಯಶಿಭಿರ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದು.14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 11.01.2025ರಂದು ಶನಿವಾರ ತಿಪಟೂರು ನಗರದ ಎಸ್.ಎನ್.ಎಸ್ ಕನ್ವೆಷನ್ ಹಾಲ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನೇತ್ರತಪಾಸಣೆ,ಮತ್ತು ಶ್ರದ್ದಾ ಐಕೇರ್ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸಾ ಶಿಭಿರ ಆಯೋಜಿಸಿದ್ದು, ನಾಗರೀಕರು ಶಿಬಿರದ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು

ಕಾಂಗ್ರೇಸ್ ಮುಖಂಡ ಲೋಕನಾಥ್ ಸಿಂಗ್ ಮಾತನಾಡಿ ರಾಜುಬೈಯ್ ಪುಣ್ಯಸ್ಮರಣೆ ಅಂಗವಾಗಿ ತಿಪಟೂರಿನ ಶ್ರೀ ರಂಗ ಆಸ್ಪತ್ರೆ, ಕುಮಾರ್ ಆಸ್ಪತ್ರೆ ವೈಭವಿ ಮಕ್ಕಳ ಆಸ್ಪತ್ರೆ, ತಿಪಟೂರು ಹೆಲ್ತ್ ಸೆಂಟರ್ ಸೇರಿದಂತೆ ಅನುಭವಿ ತಜ್ಞ ವೈದ್ಯರ ತಂಡದೊಂದಿಗೆ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ.ಉಚಿತ ಹೃದಯ ರೋಗ ತಪಾಸಣೆ,ಅಪೆಂಡಿಕ್ಸ್ ಪರೀಕ್ಷೆ,ಕೀಲು ಮತ್ತು ಮೂಳೆ ಪರೀಕ್ಷೆ,ಕಿಡ್ನಿಕಲ್ಲು ಹಾಗೂ ಪ್ರೊಸೈಡ್ ಪರೀಕ್ಷೆ.ಸ್ತ್ರೀ ರೋಗ ಹಾಗೂ ಗರ್ಭಕೋಶ ಸಂಬಂದಿಸಿದ ಪರೀಕ್ಷೆಗಳು ಸೇರಿದಂತೆ ತಪಾಸಣೆ ಶಿಬಿರ ನಡೆಸಲಾಗುತ್ತದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಧರಣೇಶ್, ಅಣ್ಣಯ್ಯ,ಮಾದಿಹಳ್ಳಿ ರೇಣು. ಎಂ.ಎಸ್ ಯೋಗೆಶ್,ವಗ್ಗನಘಟ್ಟ ಯೋಗಾನಂದಸ್ವಾಮಿ,ಎಂ.ಸಿ ನಟರಾಜ್, ಶಂಕರಮೂರ್ತಿ,ಕುಮಾರ್.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ





