
ತಿಪಟೂರು ಕಲ್ಲೆಗೌಡನಪಾಳ್ಯ ಬಳಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ .ಕಳೆದ ಹಲವಾರುವ ದಿನಗಳಲ್ಲಿ ಕಲ್ಲೇಗೌಡನಪಾಳ್ಯ, ರಾಮಶೆಟ್ಟಿಹಳ್ಳಿ, ಈಡೇನಹಳ್ಳಿ ಭಾಗದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು,ಗ್ರಾಮಸ್ಥರಲ್ಲಿ ಭಯ ಆತಂಕ ಉಂಟುಮಾಡಿತ್ತು. ಆದರೆ ಕಲ್ಲೇಗೌಡನಪಾಳ್ಯ ರೇಷ್ಮೆ ಇಲಾಖೆ ಫಾರಂ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗೆ ಚಿರತೆ ಬಿದ್ದಿದ್ದೆ.

ಮೂರು ಚಿರತೆಗಳ ಪೈಕಿ ಒಂದು ಚಿರತೆ ಬೋನಿಗೆ ಬಿದ್ದಿದ್ದು ಇನ್ನೂ ಎರಡು ಚಿರತೆಗಳು ಹೊರಗೆ ಉಳಿದಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ,
ಉಪ ಅರಣ್ಯಸಂರಕ್ಷಣಾಧಿಕಾರಿ ಅನುಪಮ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್ ಡಿ.ವಲಯ ಅರಣ್ಯಾಧಿಕಾರಿ ಕೆ.ಎಲ್ ಮಧು.ಉಪ ಅರಣ್ಯಾಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕಿರುವ ಚಿರತೆ ಸ್ಥಳಾಂತರ ಮಾಡಿದ್ದು ಉಳಿದ ಚಿರತೆಗಳ ಹಿಡಿಯಲು ಕಾರ್ಯಚರಣೆ ನಡೆಸಲಾಗುತ್ತಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ




