
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಪುಣ್ಯಕ್ಷೇತ್ರ ಹತ್ಯಾಳ್ ಶ್ರೀ ನರಸಿಂಹಸ್ವಾಮಿ ಬೆಟ್ಟ ಪ್ರತಿದಿನ ಸಾವಿರಾರು ಜನ ಭಕ್ತರು ಭೇಟಿ ನೀಡುವ ಕ್ಷೇತ್ರ,.ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂನು ಲಕ್ಷ ಭೇಟಿ ನೀಡುವ ಸ್ಥಳ ಅನೈರ್ಮಲ್ಯದ ತಾಣವಾಗಿ, ರೋಗರುಜಿನಗಳನ್ನ ಹರಡುವ ತಾಣವಾಗಿದ್ದು,ಕ್ಷೇತ್ರಕ್ಕೆ ಬರುವ ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದು, ಜೀವನ ಪಾವನಗೊಳಿಸಿಕೊಳ್ಳಲು,ಬರುತ್ತಾರೆ, ಅದರೆ ಭಕ್ತರ ಅಗತ್ಯಕ್ಕೆ ತಕ್ಕಂತ,
ಹತ್ಯಾಳ್ ಬೆಟ್ಟಕ್ಕೆ ಬರುವ ಭಕ್ತರು ಮೂಲಸೌಕರ್ಯಗಳ ಸೌಕರ್ಯವಿಲ್ಲದೆ ಪರದಾಡುವಂತ್ತಾಗಿದೆ.




ಪ್ರತಿವರ್ಷ ಲಕ್ಷಾಂತರ ರೂಪಾಯಿ ಹುಂಡಿಹಣ ಸಂಗ್ರಹವಾದರೂ ಹುಂಡಿಹಣ ಕ್ಷೇತ್ರದ ಅಭಿವೃದ್ದಿಗೆ ಬಳಕೆಯಾಗದೆ,ಸರ್ಕಾರದ ಕಿಸೆಸೇರುತ್ತಿದೆ
ನರಸಿಂಹಸ್ವಾಮಿದೇವಾಲಯದ ಪರಿವಾರದೈವ ಕೆಂಚರಾಯಸ್ವಾಮಿ ದೇವಾಲಯದ ವಾತವಾರಣ ಸಂಪೂರ್ಣ ಕಲೂಷಿತ ವಾತಾವರಣದಿಂದ ಕೂಡಿದೆ.
ದೇವಾಲಯದ ಸುತ್ತಲು ಸೂಕ್ತ ಸೌಚಾಲಯ ವ್ಯವಸ್ಥೆಇಲ್ಲದೆ,ಜನಪರದಾಡುವಂತ್ತಾಗಿದ್ದು ಬಯಲು ಮೂತ್ರಾಲಯ ಶೌಚಾಲಯ ಆಶ್ರಯಿಸುವಂತ್ತಾಗಿದೆ,
ದೇವಾಲಯಕ್ಕೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ ಮಾಸಾಂಹಾರಿಗಳೆ ಹೆಚ್ಚು,ಪ್ರತಿ ಶನಿವಾರ,ಭಾನುವಾರ,ಮಂಗಳವಾರಬುದವಾರ ಗುರುವಾರ ಶುಕ್ರವಾರ ಸೇರಿದಂತೆ,ಸೋಮವಾರ ಹೊರತುಪಡಿಸಿ, ಎಲ್ಲಾದಿನಗಳಲ್ಲಿ ಮರಿಸೇವೆ, ಹರಿಸೇವೆಗಳು, ನಡೆಯುತ್ತವೆ,ಆದರೇ ಹರಿಸೇವೆ ನಡೆಯುವ, ಜಾಗ ಮಾತ್ರಕೊಳಚೆ ತಾಣವಾಗಿದೆ, ಕೆಂಚರಾಯ, ಹಾಗೂ ನರಸಿಂಹ ಸ್ವಾಮಿಗೆ ಮಾಂಸಾಹಾರ ತಯಾರಿಸುವ ಜಾಗದಲ್ಲಿ ಕೊಳಚೆಯಾಗಿ ನಾರುತ್ತಿದ್ದು ಹಂದಿನಾಯಿಗಳ ಆಶ್ರಯತಾಣವಾಗಿದ್ದೆ, ಎಲ್ಲಂದರಲ್ಲಿ ಮಧ್ಯದ ಬಾಟಲ್ ಗಳು, ಪ್ಲಾಸ್ಟಿಕ್ ರಾಶಿ, ಉಂಡು ಬಿಸಾಕಿದೆ ಎಲೆ, ತಟ್ಟೆ ಪ್ಲೇಟ್ ಗಳ ಆವರಿಸಿವೆ,
ವರ್ಷದ ಬಹುತೇಕ ದಿನಗಳಲ್ಲಿ ದೇವರ ತಳಿಗೆ ನಡೆದರೆ ಶ್ರಾವಣ, ಕಾರ್ತಿಕ ಮಾಸದಲ್ಲಿ ಭಕ್ತರ ಸಂಖ್ಯೆ ಹೆಚ್ಚು,ಲಕ್ಷ ಲಕ್ಷ ಜನ ಸೇರುವ ಜಾಗದಲ್ಲಿ ,ಸರಿಯಾದ ಸ್ವಚ್ಚತೆ ಇಲ್ಲ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಇಲ್ಲ, ತಳಿಗೆ ಮನೆಗಳು ಕೊಚ್ಚೆಗುಂಡಿಯಂತ್ತಾಗಿದು, ಅಲ್ಲಿಯ ವ್ಯವಸ್ಥೆ ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಲ್ಲ.


ಮಾಸಾಂಹಾರ ಸಂಸ್ಕೃತಿಯನ್ನೇ ಅಣಕಿಸುವ ವ್ಯವಸ್ಥೆ :ಅಧಿಕಾರಿಗಳ ವರ್ತನೆ ಮಾಂಸಾಹಾರದ ಬಗೆಗಿದ ದಾಷ್ಟ್ಯಹಾಗೂ ನಿರ್ಲಕ್ಷ್ಯದ ಸಂಕೇತದಂತೆ ಕಾಣುತ್ತಿದೆ, ಮಾಂಸಾರದ ಹಕ್ಕನೇ ಅಣಕಿಸುವಂತೆ ಅಧಿಕಾರಿಗಳು, ನಡೆದುಕೊಳುತ್ತಿದ್ದಾರೆ, ಮನುಷ್ಯರು ಕೂರಲು ನಿಲ್ಲಲು ಸಾಧ್ಯವಾಗದ, ಸ್ಥಳದಲ್ಲಿ ಮಾಂಸಾಹಾರ ತಯಾರಿಸಿ ,ದೇವರಿಗೆ ಅರ್ಪಿಸಿ ತಾವೂ ಊಟಮಾಡುವಂತ ಸ್ಥಿತಿ ಭಕ್ತರಿಗೆ ಇದೆ, ಸೊಳ್ಳೆ ನೊಣಗಳು ಜುಮ್ ಎನ್ನುತ್ತಿದರೆ, ಕೊಳೆತ ಆಹಾರ ಪದಾರ್ದಗಳ ವಾಸನೆಯಲ್ಲಿ ಮೂಗುಮುಚ್ಚಿಕೊಂಡು ಊಟ ಮಾಡುವ ದಯಾನೀಯ ವ್ಯವಸ್ಥೆಯನ್ನ ಬೆಟ್ಟದಲ್ಲಿ ಕಾಣಬಹುದಾಗಿದೆ.
ಬೆಟ್ಟಕ್ಕೆ ಬರುವ ಅಧಿಕಾರಿಗಳಿಗೆ ಹುಂಡಿ ಮೇಲೆ ಮಾತ್ರಕಣ್ಣು: ಶ್ರೀಕ್ಷೇತ್ರ ಹತ್ಯಾಳು ಬೆಟ್ಟಕ್ಕೆ ಬರುವ ಅಧಿಕಾರಿಗಳು ನರಸಿಂಹಸ್ವಾಮಿ ದೇವಾಲಯಕ್ಕೆ ಮಾತ್ರ ಭೇಟಿ ನೀಡಿ ಕೈತೊಳೆದುಕೊಂಡರೆ, ಉಪವಿಭಾಗಾಧಿಕಾರಿಗಳು ಅಧ್ಯಕ್ಷರಾಗಿರು ಮುಜರಾಯಿ ದೇವಾಲಯದಲ್ಲಿ ಹುಂಡಿ ಹಣಕ್ಕೆ ಮಾತ್ರ ಸೀಮಿತವಾಗಿದೆ.
ಸರ್ಕಾರ ಹಾಗೂ ಮುಜರಾಯಿ ಇಲಾಖೆ ಹತ್ಯಾಳು ಬೆಟ್ಟದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ, ಕ್ಷೇತ್ರದ ಭಕ್ತರ ಅಗತ್ಯತೆಗಳಿಗೆ ತಕ್ಕಂತೆ ಇನ್ನೂ ಹೆಚ್ಚಿನ ತಳಿಗೆ ಭವನಗಳನಿರ್ಮಾಣವಾಗ ಬೇಕಿದೆ,
ಶ್ರೀಕ್ಷೇತ್ರದ ಪವಿತ್ರತೆಗೆ ತಕ್ಕಂತೆ ಸ್ವಚ್ಚತೆಗೆ ಆಧ್ಯತೆಕೊಡಬೇಕಿದ್ದು, ಕೆಂಚರಾಯ ಸ್ವಾಮಿ ದೇವಾಲಯದ ಸುತ್ತಲು ಸ್ವಚ್ಚತೆ, ತಳಿಗೆ ಮನೆಗಳಲ್ಲಿ ,ಸ್ವಚ್ಚತೆ , ಪ್ಲಾಸ್ಟಿಕ್ ವಿಲೇವಾರಿ ಹಾಗೂ ಊಟದ ಎಲೆಗಳ ಶುದ್ದಿಗೊಳಿಸಲು ಕ್ರಮವಹಿಸಬೇಕಿದೆ, ಲಕ್ಷಾಂತರ ಜನ ಭೇಟಿ ನೀಡುವ ಸ್ಥಳದಲ್ಲಿ ಶುದ್ದ ಕುಡಿಯುವ ನೀರಿನ ಸೌಲಭ್ಯವೇ ಇಲ್ಲವಾಗಿದ್ದು, ಸರ್ಕಾರ ಶುದ್ದ ನೀರು ದೊರಕಿಸಲು ಕ್ರಮವಹಿಸಬೇಕು.
ಸ್ವಚ್ಚತೆಯಲ್ಲಿ ಕಾಪಾಡುವಲಿ ಮಾತ್ರ ಶ್ರೀಕ್ಷೇತ್ರ ಆಡಳಿತ ವ್ಯವಸ್ಥೆ ಮುಜರಾಯಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಉಪವಿಭಾಗಾಧಿಕಾರಿಗಳು ಕೇವಲ ಹುಂಡಿಹಣದ ಮೇಲೆ ಕಣ್ಣಿಡದೆ ಕೆಂಚರಾಯ ಸ್ವಾಮಿದೇವಾಲಯದ ವಾತವರಣ ಹಾಗೂ ಕ್ಷೇತ್ರಕ್ಕೆ ತಳಿಗೆ ಮಾಡಲು ಬರುವ ಭಕ್ತರಿಗೆ ಮೂಲಸೌಕರ್ಯ ಹಾಗೂ ಸ್ವಚ್ಚವಾತವರಣ ನಿರ್ಮಿಸುವ ಕಡೆ ಗಮನಹರಿಸಬೇಕಿದೆ.ಲಕ್ಷಾನು ಲಕ್ಷ ಭಕ್ತರನ್ನು ಹೊಂದಿರುವ ಹತ್ಯಾಳ್ ಬೆಟ್ಟಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಿ ಪ್ರೇಕ್ಷಣೀಯ ಸ್ಥಳವಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮಕೈಗೊಳಬೇಕು ಎನ್ನುದು ಕ್ಷೇತ್ರದ ಭಕ್ತರ ಆಶಯ,
ನರಸಿಂಹಸ್ವಾಮಿ ಅರ್ಚಕರಿಗೂ ಮೂಲಸೌಕರ್ಯವಿಲ್ಲದೆ ಪರದಾಟ: ಶ್ರೀಕ್ಷೇತ್ರ ಹತ್ಯಾಳು ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ತಂಗಲು ವ್ಯವಸ್ಥೆಇಲ್ಲ , ಶೌಚಾಲಯಕ್ಕಾಗಿ ಬೆಟ್ಟದ ತಪ್ಪಲಿನ ತಳಿಗೆ ಮನೆಗೆ ಹೋಗಬೇಕು, ದೇವರಿಗೆ ವೈವೇದ್ಯ ತಯಾರಿಸಲು, ಪರದಾಡುವಂತ್ತಾಗಿದೆ .
.ನೊಂದ ಅರ್ಚಕರು ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯ
ವರದಿ:ಮಂಜುನಾಥ್ ಹಾಲ್ಕುರಿಕೆ