
ತಿಪಟೂರು ತಾಲ್ಲೋಕಿನ ,ಹಾಲೇನಹಳ್ಳಿ,ಗ್ರಾಮಕ್ಕೆ ಸೂಕ್ತ ಬಸ್ ಸೌಲಭ್ಯಕ್ಕಾಗಿ ಹಾಲೇನಹಳ್ಳಿ
ಬೋವಿಕಾಲೋನಿ, ಹೊಸೂರು,ಹಾಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಗಳಿಗೆ ಯಾವುದೇ ಬಸ್ ಸೌಕರ್ಯವಿಲ್ಲದೆ ಜನ ಪರದಾಡುವಂತ್ತಾಗಿದೆ, ಪ್ರತಿದಿನ 5 ಕಿಲೋಮೀಟರ್ ನಡೆದುಕೊಂಡೆ, ಹೊಸೂರು, ಬೋವಿಕಾಲೋನಿ.ಗೊಲ್ಲರಹಟ್ಟಿ ಯ,ವಿದ್ಯಾರ್ಥಿಗಳ, ಕೂಲಿ ಕಾರ್ಮಿಕರು,ಬಸ್ ಗಳಿಗೆ ಬರಬೇಕಿದೆ.ಈ ಗ್ರಾಮಗಳ ಜನ ಬಹುತೇಕ ಬಡವರು.ಕೂಲಿ ಕಾರ್ಮಿಕರು ಮಧ್ಯವ ವರ್ಗದ ಜನರೇ ವಾಸವಾಗಿದ್ದು, ಕೆಲವು ಉಳ್ಳವರು ಮಾತ್ರ ಸ್ವಂತ ವಾಹನ ಹೊಂದಿದರೂ. ಬಹುತೇಕರು ಸರ್ಕಾರಿ ಬಸ್ ಗಳನ್ನ ಆಶ್ರಯಿದಿದ್ದಾರೆ. ವಿದ್ಯಾರ್ಥಿಗಳಂತು, ತಮ್ಮ ಗ್ರಾಮಗಳಿಂದ ನಡೆದುಕೊಂಡು ಹಾಲ್ಕುರಿಕೆ- ತಿಪಟೂರು ಮಾರ್ಗದ ಹಾಲೇನಹಳ್ಳಿ ಗೇಟ್ ಗೆ ಬಂದು ಬಸ್ ಹತ್ತ,ಬೇಕಿದೆ. ವಿದ್ಯಾರ್ಥಿಗಳ 5ಕಿಲೋಮೀಟರ್ ನಡೆದು, ಬಸ್ ಹಿಡಿದು ಶಾಲಾ ಕಾಲೇಜುಗಳಿಗೆ ಹೋಗುವುದರೊಳಗೆ ಶಾಲಾ ಕಾಲೇಜುಗಳೇ, ಪ್ರಾರಂಭವಾಗಿರುತ್ತವೆ, ಪ್ರತಿದಿನ ವಿದ್ಯಾರ್ಥಿಗಳ ಗೋಳು ಕೇಳುವವರೆ ಇಲ್ಲ ಎನ್ನುವಂತ್ತಾಗಿದೆ.
ಗ್ರಾಮದ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ಈ ಹಿಂದೆ ಹಾಲೇನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದ ವೇಳೆ ಸರ್ವಜನಿಕರ ಮನವಿಯಂತೆ ಸರ್ಕಾರ ತಿಪಟೂರು ಹುಳಿಯಾರು ಸಬ್ಬೆನಹಳ್ಳಿ ಮಾರ್ಗವಾಗಿ ಹಾಲೇನಹಳ್ಳಿಗೆ ಬಸ್ ಬರುವ ವ್ಯವಸ್ಥೆ ಕಲ್ಪಿಸಲಾಗಿತು.ಆದರೇ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಕಾರಣಕ್ಕೆ ಸ್ವಲ್ಪದಿನ ಬಂದ ಬಸ್ ನಿಗಧಿತ ಸಮಯಕ್ಕೆ ಭಾರದೆ,ವಾರಕ್ಕೆ ಎರಡು ಮಾತ್ರ ಬಸ್ ಹಾಲೇನಹಳ್ಳಿ ಗ್ರಾಮಕ್ಕೆ ಬರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿ.ಈ ಬಗ್ಗೆ ತುಮಕೂರು ಕೆಎಸ್ಆರ್ಟಿಸಿ ಡಿ.ಸಿ ಯವರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಸರ್ಕಾರ ಕೂಡಲೇ ತಿಪಟೂರು-ಹುಳಿಯಾರು ಹಾಲ್ಕುರಿಕೆ ಮಾರ್ಗದ ಬಸ್ ಗಳು ಹಾಲೇನಹಳ್ಳಿ ಗ್ರಾಮಕ್ಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ವರದಿ:ಮಂಜುನಾಥ್ ಹಾಲ್ಕುರಿಕೆ