ಕಲ್ಪತರು ನಾಡಿನ ಪ್ರಸಿದ್ದ ನಾಡಹಬ್ಬ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸದ ಅಂಗವಾಗಿ ನಡೆದ ಪಟಾಕಿ,ಮದ್ದುಗುಂಡು ,ಪ್ರದರ್ಶನ ಭಕ್ತಸಮೂಹದ ಮನಸೂರೆಗೊಂಡಿತು.

ತಿಪಟೂರು ಶ್ರೀ ಸತ್ಯಗಣಪತಿ ವಿಸರ್ಜನ ಮಹೋತ್ಸವ ಕನ್ನಡ ನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದು ಎಂದರೆ ತಪ್ಪಲ್ಲ,ಮೈಸೂರು, ದಸರ,ಬೆಂಗಳೂರು ಕರಗದಂತೆ ತಿಪಟೂರು ಶ್ರೀಸತ್ಯಗಣಪತಿ ಜಾತ್ರೆಯೂ ವಿಶೇಷವಾಗಿದೆ. ಈ ಜಾತ್ರೆಯಲ್ಲಿ ಸಂಪ್ರದಾಯಗಳಜೊತೆ ಆಧುನಿಕ ಆಚರಣೆಗಳೂ ಕಮ್ಮಿಇಲ್ಲ,ಪ್ರತಿವರ್ಷದಂತೆ ಡಿಜೆ ಹಾಗೂ ಪಟಾಕಿ ಮದ್ದು ಗುಂಡುಗಳ ಪ್ರದರ್ಶನಕ್ಕೂ ವಿಶೇಷ ಸ್ಥಾನವಿದೆ, ಪಟಾಕಿಯ ಪ್ರದರ್ಶನ ನೋಡಲೇಂದೆ,ರಾಜ್ಯದ ವಿವಿಧ ಭಾಗಗಳಿಂದ ಜನ ಜಾತ್ರೆಗೆ ಬರುತ್ತಾರೆ, ತಿಪಟೂರು ಶ್ರೀಸತ್ಯಗಣಪತಿ ಆಸ್ಥಾನಮಂಟಪದಿಂದ ಹೊರಟ ಮೆರವಣಿಗೆ ದೊಡ್ಡಪೇಟೆ,ಕನ್ನಿಕಾ ಪರಮೇಶ್ವರಿ ದೇವಾಲಯ ರಸ್ತೆ, ಎಲೆ ಆಸರ, ಮೂಲಕ ಸಾಗಿ ಕೋಡಿಸರ್ಕಲ್ ಗೆ ಆಗಮಿಸುತ್ತಿದ್ದಂತೆ,ತಿಪಟೂರು ಅಮಾನೀಕೆರೆ ಎರಿಯ ಮೇಲೆ ಚಿತ್ತಾಕರ್ಷಕವಾದ ಪಟಾಕಿ ಸದ್ದು, ಭಕ್ತಜನ ಸಮೂಹದ, ಮನಸೂರೆಗೊಳ್ಳುವಂತೆ ಮಾಡಿತು.ಸುಮಾರು ಅರ್ಥಗಂಟೆಗಳ ಕಾಲ ಭಾರೀ ಶಬ್ದದ ಪಟಾಕಿ ಭಕ್ತಮನಕ್ಕೆ ಮುದನೀಡಿದರೆ, ಕೇರಳ ಮೂಲದ ಪಟಾಕಿ ತಯಾರಕರು, ತಯಾರಿಸಿದ ,ಬಣ್ಣ,ಬಣ್ಣದ ಚಿತ್ತಾರದ ಪಟಾಕಿ ಬಾನಂಗಳದಲ್ಲಿ ಆರ್ಭಟಿಸಿ ಭಕ್ತ ಸಮೂಹಕ್ಕೆ,ಮುದನೀಡಿದವು,ರಂಗುರಂಗಿನ ಪಟಾಕಿ ಕಲರವ ಕಂಡ ಭಕ್ತ ಸಮೂಹ ಜಯಘೋಷ ಕೂಡಿ ಹರ್ಷ ವ್ಯಕ್ತಪಡಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ