





ತುಮಕೂರು: ನಗರದ ವಿದ್ಯೋದಯ ಲಾ ಕಾಲೇಜಿನಲ್ಲಿ ಕೆ.ಎಸ್.ಎಲ್ ಯು ಕಾನೂನು ವಿಶ್ವವಿದ್ಯಾಲಯದಿಂದ ಅಂತರ ಕಾಲೇಜು ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಡಿಸೆಂಬರ್ 04 ರಿಂದ 05 ರವರೆಗೆ 2 ದಿನಗಳ ಕಾಲ ನಡೆಯುತ್ತಿದೆ, ತಿಪಟೂರು ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಸೇರಿದಂತೆ ರಾಜ್ಯದ ಸಂಯೋಜಿತ ಕಾನೂನು ವಿಶ್ವವಿದ್ಯಾಲಯಗಳಿಂದ ಯೋಗ ಪಟುಗಳು ಭಾಗವಹಿಸಿ ಯೋಗ ಪ್ರದರ್ಶನ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಪ್ರದಾನ ಭಾಷಣ ಮಾಡಿದ ಯೋಗ ಎಕ್ಸ್ಪೋನೆಂಟ್ ಡಾ. ಎಂ.ಕೆ ನಾಗರಾಜು ರವರು ಯೋಗ ಎಂಬುದು ಅಭ್ಯಸಿಸಿ ಅನುಭವಿಸಿಬೇಕಾದ ಒಂದು ವಿದ್ಯೆ ಇಂದು ಇದರ ಅನುಕೂಲವನ್ನು ವಿದೇಶದಲ್ಲಿ ಪಡೆದುಕೊಳ್ಳಲಾಗುತ್ತಿದೆ ಆದರೆ ಭಾರತದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಯೋಗದ ಅನುಕೂಲ ಪಡೆಯುತ್ತಿದ್ದೇವೆ ಎಂಬುದರ ಬಗ್ಗೆ ನಾವು ಆತ್ಮಾವಲೋಕನದ ಮಾಡಿಕೂಳ್ಳಬೇಕಿದೆ, ದೇಶದ ಆರ್ಥಿಕತೆಗೆ ವೈದ್ಯಕೀಯ ವೆಚ್ಚವನ್ನು ತಗ್ಗಿಸಲು ಯೋಗವನ್ನು ಅಭ್ಯಸಿಸಬೇಕಾಗಿರುವುದು ನಮ್ಮೆಲ್ಲರ ತುರ್ತು ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಂಸ್ಥೆಯ ಕಾರ್ಯದರ್ಶಿ ಆರ್ ಎ ಸುರೇಶ್ ಕುಮಾರ್, ಯೋಗ ಎಕ್ಸ್ಪೋನೆಂಟ್ ಡಾ ಎಂ ಕೆ ನಾಗರಾಜು, ವಿದ್ಯೋದಯ ಲಾ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ಎಚ್ ಎಸ್ ರಾಜು ಸದರಿ ಕಾಲೇಜಿನ ಕಾರ್ಯ ನಿರ್ವಾಹಕ ಅಧಿಕಾರಿ ಕೆ ಚಂದ್ರಣ್ಣ ಮತ್ತು ಸದರಿ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು ಹಾಗೂ ಸಂಯೋಜಿತ ಕಾನೂನು ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಾದ, ಉಪನ್ಯಾಸಕರು, ದೈಹಿಕ ಶಿಕ್ಷಣ ಉಪನ್ಯಾಸಕರು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ