
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಗೂ ಜಿಲ್ಲಾಡಳಿತ ತುಮಕೂರು, ಜಿಲ್ಲಾಪಂಚಾಯ್ತಿ ತುಮಕೂರು ಮಹಾನಗರಪಾಲಿಕೆ ತುಮಕೂರು,ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ’ದ ಅಂಗವಾಗಿ ತುಮಕೂರು ನಗರದ ಮಹತ್ಮಗಾಂಧೀ ಕ್ರೀಡಾಂಗಣದಲ್ಲಿ ‘ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ’ ಆಯೋಜಿಸಿದ್ದು, ಕ್ರೀಡಾಕೂಟದ ಅಂಗವಾಗಿ ತುಮಕೂರಿನಿಂದ ಪ್ರರಂಭವಾದ “ಕ್ರೀಡಾಜ್ಯೋತಿಯನ್ನು ತಿಪಟೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು

ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಶಾಸಕ ಕೆ.ಷಡಕ್ಷರಿ, ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್. ಕ್ರೀಡಾಜ್ಯೋತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.
ಕ್ರೀಡಾಜ್ಯೋತಿ ಸ್ವಾಗತಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಕ್ರೀಡೆ ಮನುಷ್ಯನ ಆರೋಗ್ಯ ವೃದ್ದಿಗೆ ಸಹಕಾರಿ ಸದಾ ಒತ್ತಡದಲ್ಲಿರುವ ಪತ್ರಕರ್ತರು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಂಡು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು,
ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿರುವುದು ಸಂತೋಷದ ವಿಷಯ ಎಲ್ಲರೂ ಒಗ್ಗಟಿನಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ತಿಳಿಸಿದರು
ತಹಸೀಲ್ದಾರ್ ಪವನ್ ಕುಮಾರ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಅಶೋಕ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಟಿ.ಇ ರಘುರಾಮ್, ಕ್ರೀಡಾ ಸಮಿತಿ ಅಧ್ಯಕ್ಷ ಎನ್.ಡಿ ರಂಗರಾಜು. ಹಿರಿಯಪತ್ರಕರ್ತರಾದ ಸುರೇಶ್, ಎನ್ ಬಾನುಪ್ರಶಾಂತ್,ಟಿ.ಸಿ ಎಸ್ ಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ ಪ್ರಧಾನ ಕಾರ್ಯದರ್ಶಿ ಡಿ.ಕುಮಾರ್,ಉಪಾಧ್ಯಕ್ಷ ರವೀಂದ್ರ ಕುಮಾರ್ ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್ ಹಾಲ್ಕುರಿಕೆ,ಕಾರ್ಯದರ್ಶಿ ಸಿದ್ದೇಶ್ವರ್, ಖಜಾಂಚಿ ಎ.ಆರ್ ಕುಮಾರಸ್ವಾಮಿ ,ನಿರ್ದೇಶಕರಾದ ಆನಂದ್. ರಂಗನಾಥ್ ಪಿ. ನಂದಿನಿ. ಕಲ್ಲೇಶ್ ಶೆಟ್ಟಿಹಳ್ಳಿ ಮನೋಹರ್ .ಟಿ.ಎಸ್ ದಯಾನಂದ್ ಸೋಮನಾಥ್ ಬಿ.ಟಿ ಕುಮಾರ್ .ಕಿರಣ್ , ಮಿಥುನ್,ಪ್ರಕಾಶ್.ನಾಗರಾಜು,ರವಿ ಮುಂತ್ತಾದವರು ಉಪಸ್ಥಿತರಿದರು.
ವರದಿ: ಮಂಜುನಾಥ್ ಹಾಲ್ಕುರಿಕೆ