
ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ ಹಂದನಕೆರೆ ಹೋಬಳಿ ಗೋಪಾಲಪುರ ಗ್ರಾಮದ ದಲಿತ ಮಹಿಳೆ ಹೊನ್ನಮ್ಮ ಹತ್ಯೆ ಪ್ರಕರಣ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ ಪ್ರಕರಣ.
ಗೋಪಾಲಪುರ ಗ್ರಾಮದ ದಲಿತ ಮಹಿಳೆ, ಬಿಜೆಪಿ ನಾಯಕಿಯಾಗಿದ ಹೊನ್ನಮ್ಮ ನನ್ನು ಅದೇ ಗ್ರಾಮದ ಸವರ್ಣಿಯರ ಗುಂಪು ಬರ್ಬರವಾಗಿ ಹತ್ಯೆಮಾಡಿದರು

ತುಮಕೂರು : ತುಮಕೂರಿನ 3ನೇ ಅಧಿಕ ಸತ್ರ ನ್ಯಾಯಾಲಯ 17 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 4 ಜನ ಆರೋಪಿಗಳಿಗೆ 2 ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2010ರಲ್ಲಿ ಜುಲೈ 3ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿಯ ಗೋಪಾಲಪುರ ಗ್ರಾಮದ ಡಾಬಾ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಸಾಯಿಸಿದ್ದ ಪ್ರಕರಣದಲ್ಲಿ 27 ಆರೋಪಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು, ಅದರಲ್ಲಿ 6 ಆರೋಪಿಗಳು ಸಾವನ್ನಪ್ಪಿದ್ದಾರೆ.
ಉಳಿದ 21ಆರೋಪಿಗಳ ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ 3ನೇ ಅಧಿಕ ಸತ್ರ ನ್ಯಾಯಾಲಯ 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 4 ಜನರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 13,500 ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರಾದ ಎ.ನಾಗಿರೆಡ್ಡಿ ತೀರ್ಪು ನೀಡಿದ್ದಾರೆ.
ಗೋಪಾಲಪುರ ಗ್ರಾಮದ ಗ್ರಾಮದ ರಂಗನಾಥ ಬಿನ್ ಸುಬ್ಬಣ್ಣ,ಮಂಜುಳ ಬಿನ್ ರಂಗನಾಥ,ತಿಮ್ಮಣ್ಣ ಬಿನ್ ಯಲ್ಲಪ್ಪ, ರಾಜು ಬಿನ್ ಅಪ್ಪಣ್ಣಯ್ಯ,ವೆಂಕಟೇಶ ಬಿನ್ ಮುತ್ಯಾಲಪ್ಪ,ಶ್ರೀನಿವಾಸ ಬಿನ್ ದೊಡ್ಡಮನೆ ರಾಮಯ್ಯ,ಸ್ವಾಮಿ ಬಿನ್ ಗಂಗಜ್ಜ,ವೆಂಕಟಸ್ವಾಮಿ ಬಿನ್ ಗಂಗಪ್ಪ, ಮಾರಗೊಂಡನಹಳ್ಳಿ ವೆಂಕಟೇಶ್,ನಾಗರಾಜು ಬಿನ್ ಸಿದ್ದರಾಮಶೆಟ್ಟಿ,ರಾಜಪ್ಪ ಬಿನ್ ಸಿದ್ದರಾಮಶೆಟ್ಟಿ,ಮೀಸೆ ಹನುಮಂತಯ್ಯ ಬಿನ್ ರಾಮಶೆಟ್ಟಿ, ಗಂಗಣ್ಣ ಬಿನ್ ಸುಬ್ಬಾಶೆಟ್ಟಿ,ನಂಜುಂಡಯ್ಯ ಬಿನ್ ನಂಜಪ್ಪ,ಸತ್ಯಪ್ಪ ಬಿನ್ ನಂಜಪ್ಪ,ರಾಮಯ್ಯ ಬಿನ್ ಕೊಂಡಕಾರಯ್ಯ,ಚಂದ್ರಯ್ಯ ಬಿನ್ ಕುರುಡಗಂಗಪ್ಪ,ರಾಮಯ್ಯ ಬಿನ್ ಯಲ್ಲಪ್ಪ. ರಂಗಣ್ಣ ಬಿನ್ ಸಿದ್ದರಾಮಶೆಟ್ಟಿ, ಉಮೇಶ ಬಿನ್ ರಾಮಯ್ಯ.ದಾಸಪ್ಪ ಬಿನ್ ರಾಮಯ್ಯ, ಬುಳ್ಳಹನುಮಂತಯ್ಯ ಬಿನ್ ಸಿದ್ದರಾಮಯ್ಯ, ಚನ್ನಮ್ಮ ಕೋ ರಂಗಪ್ಪ ಸೇರಿ 27 ಜನರ ಮೇಲೆ ಪ್ರಕರಣ ದಾಖಲಾಗಿತ್ತು ಈ ಪೈಕಿ 4ಜನ ಸಾವನ್ನಪ್ಪಿದ್ದು 21 ಜನ ಆರೋಪಿಗಳ ಗುಂಪು ಹತ್ಯೆಯಲ್ಲಿ ಭಾಗಿಯಾಗಿದರು.
ಮರಕುಂಬಿ ಪ್ರಕರಣ ಮಾಸುವ ಮುನ್ನವೇ ಮತೋಂದು ಪ್ರಕರಣದಲ್ಲಿ 17ಜನರಿಗೆ ನ್ಯಾಯಾಲಯ ಜೀವಾವಧಿಶಿಕ್ಷೆ ನೀಡಿದೆ,ನ್ಯಾಯಾಲಯದ ತೀರ್ಪನ್ನು ದಲಿತಪರ ಸಂಘಟನೆಗಳು ಸ್ವಾಗತಿಸಿದು.ಕೋರ್ಟ್ ತೀರ್ಪಿನಿಂದ ದಲಿತರು,ಶೋಷಿತರಲಿ ದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಶ್ರೀ ಸಾಮಾನ್ಯರಲ್ಲಿ ಬರವಣೆ ಹೆಚ್ಚಾಗಿದೆ,ಎಂದಿದ್ದಾರೆ
ವರದಿ:ಮಂಜುನಾಥ್ ಹಾಲ್ಕುರಿಕೆ