
ಸಹಕಾರಿ ಅಂದೋಲನ ಸಾರ್ವಜನಿಕರಿಗೆ ಅತಿಸುಲಭವಾಗಿ ಸೇವೆ ಮಾಡುವ ಕ್ಷೇತ್ರವಾಗಿದೆ ಸಹಕಾರಿ ಆಂದೋಲನದಲ್ಲಿ ಎಲ್ಲಾ ಸಮುದಾಯದ ಜನ ಭಾಗವಹಿಸಬೇಕು ಎನ್ನುವ ದೃಷ್ಠಿಯಿಂದ ಮೀಸಲಾತಿಯನ್ನ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು

ನಗರದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ನಂದಿನಿ ಕ್ಷೀರಭವನ ಉದ್ಘಾಟಿಸಿ, ಸಾರ್ವಜನಿಕ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿ
ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ
ಸಿದ್ದರಾಮಯ್ಯ ನವರ ಸರ್ಕಾರ ಜನಪರವಾಗಿ ಆಡಳಿತ ನಡೆಸುತ್ತಿದೆ,ಎಲ್ಲಾ ಸಮುದಾಯಗಳ ಜನ ಸಹಕಾರಿ ಆಂದೋಲನದಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದ್ದು ಎಸ್.ಸಿ ಎಸ್ ಟಿ ಒಬಿಸಿ ಗಳು ಸಹಕಾರಿ ಆಂದೋಲನದಲ್ಲಿ ಪಾಳ್ಗೊಳಲ್ಲಿ ಎನ್ನುವ ದೃಷ್ಠಿಯಿಂದ ಸದ್ಯದಲ್ಲಿಯೇ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಹಾಗೂ ಹಾಲು ಉತ್ವಾದಕರ ಸಹಕಾರ ಸಂಘಗಳು ಸೇರಿದಂತೆ ಸಹಕಾರಿ ಕ್ಷೇತ್ರಗಳಲ್ಲಿಯೂ ಮೀಸಲು ನಿಗಧಿಗೊಳಿಸಬೇಕು ಹಾಗೂ ಅಲ್ಲಿಯೂ ಸಹ ಅಧ್ಯಕ್ಷರು ಉಪಾಧ್ಯಕ್ಷರು ಮೀಸಲು ಆಧಾರದಲ್ಲಿ ನಿಗಧಿಯಾಗ ಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದು, ಕಳೆದ ವಿಧಾನ ಸಭೆಯಲ್ಲಿ ಹಲವಾರು ಬಿಲ್ ಗಳು,ಪಾಸ್ ಆಗಿವೆ,ಸದ್ಯದಲ್ಲಿಯೇ ಮೀಸಲು ನಿಗದಿ ಮಾಡುತ್ತೇವೆ.ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆಯಲು ಸರ್ಕಾರ ರೈತರ ಸಾಲಕ್ಕೆ ಬಡ್ಡಿ ನೀಡುತ್ತಿದೆ,ಹಾಲು ಉತ್ವಾದಕರಿಗೆ ನೆರವಾಗುವ ದೃಷ್ಠಿಯಿಂದ ಕ್ಷೀರಭಾಗ್ಯ ಯೋಜನೆ ಆರಂಭಿಸಿ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿದೆ,ಹಾಲಿಗೆ 5ರೂಪಾಯಿ ಸಹಾಯಧನ ನೀಡುತ್ತಿದ್ದು,ತುಮಕೂರು ಒಕ್ಕೂಟದಿಂದ ಹೆಚ್ಚುವರಿಯಾಗಿ 2ರೂಪಾಯಿ ಹಣ ನೀಡುವ ಚಿಂತನೆಇದ್ದು, ,ಸರ್ಕಾರ ಗ್ರಹಕರಿಗೆ ಹೊರೆಯಾಗದಂತೆ 5ರೂಪಾಯಿ ಸಹಾಯಧನ ನೀಡುವ ಚಿಂತನೆ ನಡೆಯುತ್ತಿದೆ,ನಂದಿನಿ ಹಾಲು ಒಕ್ಕೂಟ ರೈತರ ಆರ್ಥಿಕ ನೆರವಿಗೆ,ನೆರವಾಗುತ್ತಿದ್ದು ರೈತನ ಉತ್ವಾದನಾ ವೆಚ್ಚಕ್ಕೆ ಸರಿತೂಗುವಂತೆ,ಬೆಲೆ ನೀಡುಬೇಕು, ಸಹಕಾರಿ ಸಂಘಗಳು ರಾಸುಗಳಿಗೆ ನೀಡುತ್ತಿರುವ ಪಶುಆಹಾರ ಕಳಪೆಗುಣಮಟ್ಟದಿಂದ ಕೂಡಿದೆ ಎನ್ನುವ ದೂರುಗಳಿದ್ದು,ಗುಣಮಟ್ಟದ ಆಹಾರ ನೀಡಲು ಸೂಕ್ತಕ್ರಮಕೈಗೊಳ್ಳ ಬೇಕು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಉದೇಶ,ಹಾಲು ಗುಣಮಟ್ಟ ಪರೀಕ್ಷೆಕ್ಕೆ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸಲಾಗಿದೆ ,ಒಂದು ಅಂದಾಜಿನ ಪ್ರಕಾರ ಮುವತ್ತೈದು ಸಾವಿರ ಲೀಟರ್ ನೀರು ಮಿಕ್ಸ್ ಆಗುತ್ತಿದೆ ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ತಿಳಿಸಿದರು

ಕಾರ್ಯಕ್ರಮ ಉದ್ಘಾಟಿಸಿದ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ//ಜಿ ಪರಮೇಶ್ವರ್ ಮಾತನಾಡಿ ರೈತರು ಅಭಿವೃದ್ದಯಾದರೆ ದೇಶದ ಅಭಿವೃದ್ದಿಯಾಗುತ್ತದೆ, ಕೃಷಿಯ ಜೊತೆಗೆ ಹೈನುಗಾರಿಕೆ ಕೈಗೊಂಡರೆ ರೈತ ಆರ್ಥಿಕ ಸಂಕಷ್ಟದಿಂದ ಮೇಲೆ ಬರಬಹುದು, ಸಿಲ್ಕ್ ಹಾಗೂ ಮಿಲ್ಕ್ ರೈತರ ಆಧಾರದ ಮೂಲಗಳು ನಮ್ಮ ಸರ್ಕಾರ ಹೈನುಗಾರಿಕೆ ಅಭಿವೃದ್ದಿಗೆ ಹಲವಾರು ಕ್ರಮಗಳನ್ನ ಕೈಗೊಂಡಿದೆ, ಕ್ಷೀರಕ್ರಾಂತಿಯಲ್ಲಿ ನಮ್ಮ ರಾಜ್ಯ ಉತ್ತಮ ಸಾಧನೆ, ಮಾಡುತ್ತಿದ್ದು ಇನ್ನೂ ಹೆಚ್ಚಿನಸಾಧನೆ ಮಾಡಬೇಕು,ಸರ್ಕಾರ ಕ್ಷೀರಭಾಗ್ಯ ಯೋಜನೆ ಮೂಲಕ ಅನ್ನದಾತರಿಗೆ ನೆರವಾಗಿದೆ 5ರೂಪಾಯಿ ಪ್ರೋತ್ಸಹ ಧನ ನೀಡುವುದರಿಂದ ರೈತರಿಗೆ ಸಹಕಾರವಾಗುತ್ತಿದ್ದು ,ಪ್ರೋತ್ಸಾಹ ಧನ ಹೆಚ್ಚಿಸುವ ಪ್ರಸ್ಥಾವನೆ ಸರ್ಕಾರದ ಮುಂದಿದೆ,ಎಂದ ಅವರು ತಿಪಟೂರು ಜಿಲ್ಲೆ ಮಾಡುವಂತ್ತೆ ಶಾಸಕ ಕೆ.ಷಡಕ್ಷರಿ ಒತ್ತಡ ಮಾಡುತ್ತಿದ್ದಾರೆ,ನಾವೂ ಮಧುಗಿರಿ ಜಿಲ್ಲೆ ಮಾಡುವಂತ್ತೆ ಕೇಳಿದ್ದೇವೆ,ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ನಿಮ್ಮ ಹೋರಾಟಕ್ಕೆ ಶುಭವಾಗಲಿ,ಎಂದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಮ್ಮ ಸರ್ಕಾರ ಸಹಕಾರಿ ಸಂಘಗಳಲ್ಲಿ ಐದು ಲಕ್ಷದ ವರೆಗೆ ಸಾಲ ಸೌಲಭ್ಯ ನೀಡುವ ಯೋಜನೆ ಮಾಡುತ್ತಿದೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ಥಾವನೆ ಸಲ್ಲಿಸಿದ್ದೇವೆ,ಪಿಎಲ್ ಡಿ ಬ್ಯಾಂಕ್ ನಂತೆ ಸಹಕಾರಿ ಬ್ಯಾಂಕ್ ನಲ್ಲೂ ಸಾಲನೀಡಲಾಗುವುದು,ತಿಪಟೂರಿಗೆ ಸಬ್ ಜೈಲ್ ಮುಂಜೂರಾಗಿತ್ತು 8ಕೋಟಿ ಅನುದಾನ ನೀಡಿದರು ಆದರೆ ಹಿಂದಿನ ಶಾಸಕರು ಪರಪ್ಪನ ಅಗ್ರಹಾರಕ್ಕೆ ಅನುದಾನ ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟ ಕಾರಣ ,ತಿಪಟೂರಿಗೆ ಜೈಲ್ ಇಲ್ಲದಾಗಿದ್ದೆ ಗೃಹಸಚಿವರು ಶೀಘ್ರದಲ್ಲೆ ಹಣ ಬಿಡುಗಡೆ ಮಾಡಬೇಕು, ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಇಒ ಪ್ರಭು, ಎಸ್ಪಿ ಅಶೋಕ್,ತುಮುಲ್ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ಕೃಷ್ಣಕುಮಾರ್,ಮಹಾಲಿಂಗಯ್ಯ,ಶಿವಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ