
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ವನ್ಯಜೀವಿ ಸಂರಕ್ಷಣಾ ದಿನದಂದೆ ಚಿರತೆ ಅಗ್ನಿಅವಘಡದಲ್ಲಿ ದಾರುಣ ಸಾವನ್ನಪ್ಪಿದು, ಚಿರತೆ ಸಾವಿಗೆ ಅರಣ್ಯ ಇಲಾಖೆಯ ಕರ್ತವ್ಯ ಲೋಪವೇ ಕಾರಣವಾಗಿದೆ, ಸರ್ಕಾರ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನ ಅಮಾನತ್ತಿನಲ್ಲಿ ಇಟ್ಟು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವನ್ಯಜೀವಿ ಹಾಗೂ ಪರಿಸರಹಿತರಕ್ಷಣಾ ಸಂಘಟನೆಗಳ ಮುಖಂಡರು ತಿಪಟೂರು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು

ಮೈತ್ರೆಯ ಪರಿಸರ ಮತ್ತು ಗ್ರಾಮ ಅಧ್ಯಯನ ಕೇಂದ್ರದ ಮುಖ್ಯಸ್ಥ ಮನೋಹರ್ ಪಾಟೇಲ್ ಮಾತನಾಡಿ
ಜೀವವೈವಿಧ್ಯಯ ವ್ಯವಸ್ಥೆಯಲ್ಲಿ ಮನುಷ್ಯ ಉಳಿಯ ಬೇಕು ಎಂದರೆ ಪ್ರತಿಯೊಂದು ಜೀವಿಯು ಉಳಿಯಬೇಕು,ನಮ್ಮ ವ್ಯವಸ್ಥೆಯಲ್ಲಿ ಎಷ್ಟೋ ವನ್ಯಜೀವಿಗಳು ಅಳಿವಿನ ಹಂತತಲುಪಿವೆ, ಈಗ್ಗೆ 15 ವರ್ಷಗಳ ಹಿಂದೆ ನಡೆದ ಸರ್ವೆಯಂತೆ ತಾಲ್ಲೋಕಿನಲ್ಲಿ 35 ಚಿರತೆಗಳು ಇದ್ದವು ಆದರೆ ಇತ್ತಿಚಿನ ದಿನಗಳಲ್ಲಿ ಚಿರತೆಸಂತತಿ ಕಡಿಮೆಯಾಗುತ್ತಿದೆ,ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಸಂರಕ್ಷಣೆ ಮಾಡಲು ವಿಫಲವಾಗಿದ್ದು,ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಪರಿಣಾಮ ಹಲವಾರು ಪ್ರಬೇಧದ ವನ್ಯಜೀವಿಗಳು, ಸಾವನ್ನಪುತ್ತಿವೆ,ತಾಲ್ಲೋಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆಯೊಂದು ಅಗ್ನಿಅವಘಟಕ್ಕೆ ತುತ್ತಾಗಿ, ಧಾರುಣವಾಗಿ ಸಾವನ್ನಪ್ಪಿರುವುದು, ಅರಣ್ಯ ಇಲಾಖೆಯಕಾರ್ಯವೈಖರಿಗೆ ಸಾಕ್ಷಿಯಾಗಿದೆ,ಅರಣ್ಯ ರಕ್ಷಣೆ ಮಾಡಬೇಕಾದ ಅಧಿಕಾರಿಗಳು,ಟಿಂಬರ್ ಮಾಫೀಯಾ ಹಾಗೂ ಗುತ್ತಿಗೆ ಮಾಫಿಯಾಗಳೊಂದಿಗೆ ಶಾಮೀಲಾಗಿ ಅರಣ್ಯ ಭಕ್ಷಣೆಯಲ್ಲಿ ತೊಡಗಿದ್ದಾರೆ,ಚಿರತೆ ಸಾವು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದ್ದು ಸರ್ಕಾರ ತಿಪಟೂರು ಅರಣ್ಯಾಧಿಕಾರಿಗಳ ಕೂಡಲೇ ಅಮಾನತ್ತುಗೊಳಿಸಿ,ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಉಪಸ್ಥಿತರಿದ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮಾತನಾಡಿ ತಿಪಟೂರು ತಾಲ್ಲೋಕಿನಲ್ಲಿ ವನ್ಯಜೀವಿ ಚಿರತೆ ರಾಷ್ಟ್ರೀಯ ವನ್ಯಜೀವಿ ಸಪ್ತಹದ ದಿನವೇ ಸಾವನ್ನಪ್ಪಿರುವುದು, ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ, ಮದ್ಲೇಹಳ್ಳಿ ಪ್ರದೇಶದಲ್ಲಿ ಚಿರತೆ ಸಂಚಾರ ಕಂಡಸ್ಥಳೀಯರ ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್ ಹಿಟ್ಟಿದ್ದಾರೆ, ಆದರೇ ಸರ್ಕಾರದ ವನ್ಯಜೀವಿ ಸಂರಕ್ಷಣೆ ಮಾರ್ಗಸೂಚಿಗಳನ್ನ ಪಾಲಿಸದೆ ಕಾಟಾಚಾರಕ್ಕೆ ಕೆಲಸ ಮಾಡಿ, ಚಿರತೆ ಸಾವಿಗೆ ಅಧಿಕಾರಿಗಳ ಕರ್ತವ್ಯಲೋಪ ಹಾಗೂ ಹೊಣೆಗೇಡಿತನದ ಪರಿಣಾಮ ವನ್ಯಜೀವಿ ಸಾವುಸಂಭವಿಸಿದೆ,ತಿಪಟೂರು ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಸಂರಕ್ಷಣಾಧಿಕಾರಿಗಳು ಜಿಲ್ಲಾ ಅರಣ್ಯ ರಕ್ಷಣಾಧಿಕಾರಿಗಳ ಕರ್ತವ್ಯ ಲೋಪದ ಪರಿಣಾಮ ಚಿರತೆ ಸಾವನ್ನಪಿದೆ, ಚಿರತೆ ಸೆರೆಗೆ ಬೋನ್ ಇಟ್ಟ ಅಧಿಕಾರಿಗಳ ಚಿರತೆ ರಕ್ಷಣೆಕ್ಕೆ ಸೂಕ್ತನಿಯಮ ಹಾಗೂ ಕರ್ತವ್ಯಪಾಲಿಸದ ಪರಿಣಾಮ ಸಂಭವಿಸಿದ್ದು,ಸರ್ಕಾರ ಘಟನೆಗೆ ಕಾರಣರಾದ ಅಧಿಕಾರಿಗಳನ್ನ ಅಮಾನತ್ತಿನಲ್ಲಿ ಇಟ್ಟು ನ್ಯಾಯಂಗ ತನಿಖೆ ನಡೆಸಬೇಕು, ತಿಪಟೂರು ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆಗೆ ಗಮನಕೊಡದೆ,ಟಿಂಬರ್ ಮಾಫಿಯಾ,ಗಣಿ ಮಾಫಿಯಾ ಹಾಗೂ ಅರಣ್ಯ ಗುತ್ತುಗೆದಾರರೊಂದಿಗೆ ಶಾಮಿಲಾಗಿ ಹಣಮಾಡಲು ಹೊರಟಿದ್ದಾರೆ, ಅಧಿಕಾರಿಗಳು ಕರ್ತವ್ಯ ಲೋಪದ ಪರಿಣಾಮವೇ ಚಿರತೆ ಸಾವು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಬೆಳೆಕಾವಲು ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ ಚಿರತೆ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ ,ಚಿರತೆ ಸೆರೆಗೆ ಬೋನ್ ಇಟ್ಟ ಅಧಿಕಾರಿಗಳು ಚಿರತೆ ಚಲನವಲನಗಳ ಬಗ್ಗೆ ಗಮನಹರಿಸಬೇಕು,ಆದರೆ ಚಿರತೆ ಬೋನಿಗೆ ಬಿದ್ದು ದಿನಗಳೆ ಕಳೆದಿವೆ, ಆದರೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಬೇಸಿಗೆ ಕಾಲವಾದ ಕಾರಣ ಬೆಂಕಿಬಿದ್ದಿದ್ದು, ಬೆಂಕಿಯಲ್ಲಿ ಚಿರತೆ ಸಾವನ್ನಪ್ಪಿರುವುದು ಅಮಾನವೀಯ ಕೃತ್ಯವಾಗಿದೆ, ಸರ್ಕಾರ ಕೂಡಲೇ ಹಾಗೂ ಅರಣ್ಯ ಸಚಿವರು ತನಿಖೆಗೆ ಆದೇಶ ನೀಡಿದ್ದಾರೆ, ಆದರೇ ಚಿರತೆ ಸಾವು ಸಂಭವಿಸಿ ವಾರವಾಗುತ್ತ ಬಂದಿದರೂ, ತನಿಖೆಯೇ ಪ್ರರಂಭವಾಗಿಲ್ಲ, ಯಾವ ಅಧಿಕಾರಿ ವಿರುದ್ದ ತನಿಖೆ ಮಾಡಬೇಕೋ ಅಂತಹ ಅಧಿಕಾರಯ ಸಮ್ಮುಖದಲ್ಲಿ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ, ತನಿಖೆಯು ದಿಕ್ಕುತಪ್ಪುವ ಸಾಧ್ಯತೆಯಿದ್ದು,ಸರ್ಕಾರ ಕೂಡಲೇ, ತಿಪಟೂರು ಅರಣ್ಯ ಸಂರಕ್ಷಣಾಧಿಕಾರಿಗಳನ್ನ ಅಮಾನತ್ತಿನಲ್ಲಿ ಇಟ್ಟು ನ್ಯಾಯಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್ ಬಾನುಪ್ರಶಾಂತ್ ಮಾತನಾಡಿ ವನ್ಯಜೀವಿ ಚಿರತೆ ಸಾವು, ಅಮಾನವೀಯ ಘಟನೆಯಾಗಿದೆ,ತಿಪಟೂರು ಅರಣ್ಯ ಇಲಾಖೆ ಅರಣ್ಯ ರಕ್ಷಣೆ ಮಾಡುವ ಬದಲು ಟಿಂಬರ್ ಮಾಫಿಯ,ಗುತ್ತಿಗೆ ಮಾಫಿಯಾಗಳ ಜೊತೆ ಶಾಮೀಲಾಗಿದ್ದಾರೆ, ಪ್ರತಿವರ್ಷ ಸರ್ಕಾರ ಅರಣ್ಯ ಅಭಿವೃದ್ದಿಗೆ ಕೋಟ್ಯಾಂತರ ರೂಪಾಯಿ ಹಣ ವಿನಿಯೋಗಿಸುತ್ತಿದ್ದರೂ, ಅರಣ್ಯ ಅಭಿವೃದ್ದಿಯಾಗದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬುಸೇರುತ್ತದೆ,ಮದ್ಲೇಹಳ್ಳಿಯಲ್ಲಿ ಸಂಭವಿಸಿರುವ ಚಿರತೆ ಸಾವು ಹಲವಾರು ಅನುಮಾನಗಳನ್ನ ಉಂಟುಮಾಡಿದೆ,ನ್ಯಾಯಸಮ್ಮತ ತನಿಖೆಯಿಂದ ಮಾತ್ರ ಅಧಿಕಾರಿಗಳ ಕರ್ತವ್ಯ ಲೋಪ ಹೊರಬರಲು ಸಾಧ್ಯ,ಸರ್ಕಾರ ಕೂಡಲೇ ನ್ಯಾಯಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೈತ್ರೆಯ ಪರಿಸರ ಮತ್ತು ಗ್ರಾಮೀಣ ಅಧ್ಯಯನ ಕೇಂದ್ರ ಮನೋಹರ್ ಪಾಟೇಲ್, ಶ್ರೀಕಾಂತ್ ಕೆಳಹಟ್ಟಿ,ಪರಿಸರಿ ತಜ್ಞ ಗುಂಗರಮಳೆ ಮುರುಳಿಧರ್,ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ,ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್ ಬಾನುಪ್ರಶಾಂತ್,ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ತಿಮ್ಲಾಪುರ ದೇವರಾಜು,ಬಿಳಿಗೆರೆಪಾಳ್ಯ ನಾಗೇಶ್,ಕಿರಣ್ ರಾಜ್ ಹರ್ಚನಹಳ್ಳಿ,ಡಿ.ಎಸ್.ಎಸ್ ಸಂಚಾಲಕ ಹರೀಶ್ ಗೌಡ, ಮುಖಂಡ ಮೋಹನ್ ಬಾಬು,ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ