
ತಿಪಟೂರು: ತಿಪಟೂರು ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನಗರದ ತಿಪಟೂರಿನ ನ್ಯಾಯಾಲಯಗಳು ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಸಮಿತಿಯ ವತಿಯಿಂದ 2025-26ನೇ ಸಾಲಿನ ಪ್ರಥಮ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು. ಲೋಕ ಅದಾಲತ್ ನಲ್ಲಿ 969 ಬಾಕಿ ಪ್ರಕರಣಗಳು, 13,017 ವ್ಯಾಜ್ಯ ಪೂರ್ವ ಪ್ರಕರಣಗಳು, ಒಂದು ವಿಚ್ಛೇದನ ಪ್ರಕರಣ ಯಶಸ್ವಿಯಾಗಿ ಪುನಃ ಒಂದಾಗುವಲ್ಲಿ ಇತ್ಯರ್ಥವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ., ಮಾತನಾಡಿ ಇಂದು ಸಮಾಜದಲ್ಲಿ ವಿಚ್ಛೇದ ಪ್ರಕರಣಗಳು ವಿಪರೀತವಾಗಿವೆ. ಇಂತಹ ಪ್ರಕರಣಗಳನ್ನು ತಡೆಯಲು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕೌಟುಂಬಿಕ ಮೌಲ್ಯಗಳ ಕುರಿತು ಶಾಲಾ-ಕಾಲೇಜು ಪಠ್ಯಕ್ರಮಗಳಲ್ಲಿ ಅಳವಡಿಸಿ ಯುವ ಜನರಲ್ಲಿ ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ. ಗಂಡಹೆಂಡತಿ ಇಬ್ಬರು ಸಮಾನಭಾವದಿಂದ ಹೊಂದಾಣಿಕೆಯಿಂದ ಬದುಕಬೇಕು, ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಬಾರದು. ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಉಂಟಾದರೆ ಅಪರಾಧ ಪ್ರಕರಣ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ಆಗಮಿಸಿದ ತಿಪಟೂರು ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲೋಕ ಅದಾಲತ್ ಕುರಿತು ಸಾಕ್ಷಾಚಿತ್ರ ವೀಕ್ಷಣೆ ಮಾಡಲಾಯಿತು. ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶ್ರೀಮತಿ ಪುಷ್ಪಾವತಿ ವಿ, ರವರು., ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ. ಎಫ.ಸಿ ರವರಾದ ಶ್ರೀ ಮಹಮ್ಮದ್ ಆರಿಫುಲ್ಲ ಸಿ.ಎಫ್. ರವರು ಹಾಗು ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್. ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ಮಧು ಶ್ರೀ ಜಿ. ಎಸ್ ರವರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎನ್ ಅಜಯ್, ವಕೀಲರ ಸಂಘದ ಕಾರ್ಯದರ್ಶಿಗಳಾದ ಬಿ. ಮಲ್ಲಿಕಾರ್ಜುನಯ್ಯ, ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿನೀತ ಪಿ.ಕೆ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಸನ್ನ ಕುಮಾರ್ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪುನೀತ್ ಕುಮಾರ್ ಮುಂತಾದವರು ಉಪಸ್ಥಿತರಿದರು.
ವರದಿ :ಸಂತೋಷ್ ಓಬಳ. ಗುಬ್ಬಿ