
ತುರುವೇಕೆರೆ: ತಾಲ್ಲೂಕಿನಾದ್ಯಂತ ವೆಂಕಟೇಶ್ವರ ಮತ್ತು ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಶುಕ್ರವಾರ ಜರುಗಿದವು.ತಾಲ್ಲೂಕಿನ ದಂಡಿನಶಿವರ ಹೋಬಳಿ ಸಂಪಿಗೆ ಗ್ರಾಮದ ಎರಡನೇ ತಿರುಪತಿ ಎಂದೇ ಖ್ಯಾತರಾಗಿರುವ ಶ್ರೀನಿವಾಸ, ದೇವಾಲಯದಲ್ಲಿ ಭಕ್ತರು ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿ ಆಚರಿಸಿದರು.ಸಂಪಿಗೆಯ ಶ್ರೀನಿವಾಸ ದೇವಾಲಯದಲ್ಲಿ ಮುಂಜಾನೆ ಸಾಲು ಸಾಲಾಗಿ ಅಪಾರ ಸಂಖ್ಯೆಯ ಭಕ್ತಾಧಿಗಳು ದೇವರ ದರ್ಶನಕ್ಕೆ ಕಾದು ನಿಂತಿದ್ದರು. ಭಕ್ತರಿಗೆ ಬೃಹತ್ ಶಾಮಿಯಾನ ಹಾಕಿ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗೋವುಗಳನ್ನು ಪ್ರವೇಶ ಮಾಡಿಸುವ ಮೂಲಕ ವೈಕುಂಠ ದ್ವಾರ ತೆರೆಯಲಾಯಿತು.ರಾತ್ರಿ ವೇಳೆಗೆ 50 ಸಾವಿರಕ್ಕೂ ಹೆಚ್ಚು ಭಕ್ತರು ಸಂಪಿಗೆ ಶ್ರೀನಿವಾಸ ದೇವಾಲಯಕ್ಕೆ ಆಗಮಿಸಿದ್ದರು ಭಕ್ತರಿಗೆ ಲಘು ಉಪಹಾರ ವ್ಯವಸ್ಥೆ ಸಹ ಮಾಡಲಾಗಿತ್ತು.