
ತಿಪಟೂರು :ಮೈಕ್ರೋ ಫೈನಾನ್ಸ್ ಸಾಲಗಾರರ ಕಿರುಕುಳ ತಾಳಲಾರದ ವಿಡಿಯೋ ಮಾಡಿ ,ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ಗಾಂಧೀನಗರ ಬೋವಿ ಕಾಲೊನಿ 13ನೇ ಕ್ರಾಸ್ ನಲ್ಲಿ ನಡೆದಿದೆ,

ಗಾಂಧೀ ನಗರ ಬೋವಿ ಕಾಲೋನಿ ವಾಸಿಯಾದ 42ವರ್ಷ ವಯಸ್ಸಿನ ಸಾಧಿಕ ಬೇಗಂ ಆತ್ಮಹತ್ಯೆಗೊಳಗಾದ ಮೃತ ದುರ್ದೈವಿ
ಮೈಕ್ರೋಫೈನಾನ್ಸ್ ಗಳು ಹಾಗೂ ಸ್ಥಳೀಯವಾಗಿ ಬಡ್ಡಿ ನೀಡುವ ವ್ಯಕ್ತಿಗಳಿಂದ ಸಾಧಿಕ ಬೇಗಂ ಸಾಲ ಮಾಡಿದರು ಎನ್ನಲಾಗಿದ್ದು, ಮೈಕ್ರೋ ಫೈನಾನ್ಸ್ ನವರು ಮನೆ ಬಳಿ ಸಾಲವಸೂಲಿಗೆ ಬಂದು ಕಿರುಕುಳ ನೀಡುದ್ದಾರೆ ಎನ್ನಲಾಗಿದ್ದು.ಮೈಕ್ರೋಫೈನಾನ್ಸ್ ಕಿರುಕುಳಕೊಳಗಾದ ಮಹಿಳೆ ತಮ್ಮ ಪತಿ ಸಯೀದ್ ನಯಾಜ್ ಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು, ಸಾಲಮಾಡಿತಪ್ಪು ಮಾಡಿದ್ದೇನೆ.ಸಾಲಗಾರರ ಕಿರುಕುಳ ಜಾಸ್ತಿಯಾಗಿದೆ ಎಂದು ಅವಲತ್ತುಕೊಂಡಿದ್ದಾಳೆ.
ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಾನು ಊರಿಗೆ ಬರುತ್ತೇನೆ ಸಾಲ ಎಷ್ಟಿದರೂ ತೀರಿಸುತ್ತೇನೆ ಧೈರ್ಯವಾಗಿರು,ಹೆದರ ಬೇಡಎಂದು ಧೈರ್ಯ ಹೇಳಿದರು.ಮಹಿಳೆ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸೋಮವಾರ ಮಹಿಳೆ ಮೈಕ್ರೋಪೈನಾನ್ಸ್ ಗಳು ಹಾಗೂ ಸಾಲಗಾರರಿಂದ ಕಿರುಕಿಳವಾಗುತ್ತಿರುವ ಬಗ್ಗೆ ವಿಡಿಯೋ ಮಾಡಿಟ್ಟು ಮನೆಯಿಂದ ಕಾಣಿಯಾಗಿದ್ದಾರೆ.ಮನೆಗೆ ಬಂದ ಪತಿ ಸಯಿದಾ ನಯಾಜ್ ಪತ್ನಿ ಕಾಣದಿದ್ದಾಗ, ಎಲ್ಲಕಡೆ ಹುಡುಕಲು ಆರಂಭಿಸಿದ್ದು, ಮನೆಪತ್ತೆಯಾಗದ ಕಾರಣ ಬುದವಾರ ತಿಪಟೂರು ನಗರಠಾಣೆಗೆ ಮಹಿಳೆ ಕಾಣಿಯಾದ ಬಗ್ಗೆ ದೂರು ನೀಡಿದ್ದು, ಪತಿಯ ದೂರಿನಂತೆ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣಿಯಾದ ಬಗ್ಗೆ ದೂರು ದಾಖಲಿಸಲಾಗಿದ್ದು.ಇಂದು ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಕಲ್ಲುಶೆಟ್ಟಿಹಳ್ಳಿ ಬಳಿ ಶವ ದೊರೆತ್ತಿದೆ.
ಕೊನೆ ಭಾರೀ ದೇವರಲ್ಲಿ ಕ್ಷಮೆಯಾಚಿಸಿದ ಮಹಿಳೆ:ಮೈಕ್ರೋಪೈನಾನ್ಸ್ ಹಾಗೂ ಸಾಲಗಾರರು ಕಿರುಕುಳದಿಂದ ಮನನೊಂದಿದ್ದೇನೆ ,ನನ್ನ ಪತಿ ಹಾಗೂ ಮಕ್ಕಳು ನನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.ದೇವರೇ ನನನ್ನು ಕ್ಷಮಿಸು ಎಂದು ಕೇಳಿಕೊಂಡಿದ್ದಾಳೆ
ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
ವರದಿ: ಮಂಜುನಾಥ್ ಹಾಲ್ಕುರಿಕೆ





