

ತಿಪಟೂರು : ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ, ಸಾಂಸ್ಕೃತಿಕ ಉಡುಗೆ ಹಾಗೂ ಹೊಸ ವರ್ಷಚಾರಣೆ ಕಾರ್ಯಕ್ರಮವನ್ನು ಕಾಲೇಜಿನ ಸಾವಿತ್ರಿ ಬಾಯಿಫುಲೆ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ವಿದ್ಯಾರ್ಥೀಗಳಿಗೆ ಬಹುಮಾನ ವಿತರಣೆ ಮಾತನಾಡಿ ಮಕ್ಕಳು ಪಠ್ಯ ವಿಷಯಗಳ ಜೊತೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವಿಕೆಯಿಂದ ಏಕಾಗ್ರತೆಯಿಂದ, ನಾಯಕತ್ವ ಗುಣಗಳು, ಪರೋಪಕಾರದ ಗುಣಗಳು ಆಳವಾಗಿ ಮೂಡುತ್ತವೆ, ವಿದ್ಯಾರ್ಥಿಗಳಿಗೆ ಅಂಕಕ್ಕೆ ಸೀಮಿತವಾಗಿ ಜ್ಞಾನಾರ್ಜನೆ ಮಾಡಬಾರದು, ಸಮಾಜದ ವಿದ್ಯಾಮಾನಗಳನ್ನು ತಿಳಿಯುತ್ತಾ ವ್ಯಾಸಂಗ ಮಾಡಬೇಕು. ಪಿಯು ಹಂತದಲ್ಲಿ ಮಕ್ಕಳ ಮನಸ್ಸು ಚಂಚಲತೆಯಿAದ ಇದ್ದು ಈ ಸಮಯದಲ್ಲಿ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಲು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಪಿ.ಜೆ. ರಾಮಮೋಹನ್ ಮಾತನಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ. ಎಲ್ಲರೂ ಸಮಯದ ಪರಿಮಿತಿಯಲ್ಲಿ ತಮ್ಮ ಕೆಲಸಗಳನ್ನು ಪೂರೈಸಿ, ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು, ಹಾಗೂ ಗುರು ಹಿರಿಯರಿಗೆ ತಂದೆ ತಾಯಿಗೆ ಗೌರವ ನೀಡುವುದು ರೂಢಿಸಿಕೊಳ್ಳಬೇಕು ಎಂದರು. ಎಸ್ಎಸ್ ಪದವಿ ಪೂರ್ವ ಕಾಲೇಜು ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಾ ಸುತ್ತಮುತ್ತಲಿನ ವಿದ್ಯಾರ್ಥಿಗಳ ಮತ್ತು ಪೋಷಕರ ವಿಶ್ವಾಸವನ್ನು ಗಳಿಸಿದೆ ಎಂದರು.
ಸAಸ್ಥೆಯ ಕಾರ್ಯದರ್ಶಿ ಯಮುನ.ಎ.ಆರ್. ಮಾತನಾಡಿ ಕಾಲೇಜಿನಲ್ಲಿ ಕಲಿತ ಜ್ಞಾನವನ್ನು ರಚನಾತ್ಮಕ ಉದ್ದೇಶಗಳಿಗಾಗಿ ಮತ್ತು ಮತ್ತೊಬ್ಬರ ಕಲ್ಯಾಣಕ್ಕಾಗಿ ಬಳಸಬೇಕು ಹಾಗೂ ಯಾರಿಗೂ ತೊಂದರೆ ಮಾಡುವಂತಹ ಜ್ಞಾನವನ್ನು ಪಡೆಯಬಾರದು. ವಿದ್ಯೆಯು ಎಂದಿಗೂ ತನ್ನ ಅನುಕೂಲದ ಜೊತೆಗೆ ದೇಶದ ಅಭ್ಯುದಯಕ್ಕೆ ಬಳಕೆಯಾಗಬೇಕು ನಮ್ಮ ಶಿಕ್ಷಣವು ತನ್ನ ಮತ್ತು ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಸದುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳಾಗಬೇಕು.
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥ ಡಾ.ಎ.ಎಂ.ಶಿವಣ್ಣ, ಆಡಳಿತ ಮಂಡಳಿ ಸದಸ್ಯ ಎ.ಬಿ.ರಾಜಶೇಖರ್, ಪ್ರಾಂಶುಪಾಲೆ ವೀಣಾ.ಡಿ. ಭಾಗವಹಿಸಿದ್ದರು.
ಪೋಟೋ : ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ.
ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್, ಉದ್ಘಾಟಿಸಿದರು.