
ತಿಪಟೂರು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನ ತಿಪಟೂರು ಉಪವಿಭಾಗಾಧಿಕಾರಿಶ್ರೀಮತಿ ಸಪ್ತಶ್ರೀ ವಹಿಸಿದರು

ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಬಿ.ಆರ್ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಒಕ್ಕೊರಲಿನಿಂದ ಎಲ್ಲಾ ಸಂಘಟನೆಗಳ ಮುಖಂಡರು ಒತ್ತಾಯಿಸಿದರು
ಜಿಲ್ಲಾ ಸಂಘಟನಾ ಸಂಚಾಲಕ ನಾಗ್ತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ತಿಪಟೂರಿನಲ್ಲಿ ಸಂವಿಧಾನ ಶಿಲ್ಪಿ ಡಾ// ಬಿ.ಆರ್ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು ಎಂದು ಕಳೆದ ಹಲವಾರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಹೋರಾಟದ ಫಲವಾಗಿ ಪ್ರವಾಸಿ ಮಂದಿರ ವೃತ್ತಕ್ಕೆ ಡಾ//ಬಿ.ಆರ್ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲಾಗಿದೆ , ಪುತ್ಥಳಿ ನಿರ್ಮಾಣಕ್ಕೆ 10ಲಕ್ಷ ಹಣ ಮೀಸಲಿರಿಸಿದೆ, ಆದರೂ ಪುತ್ಥಳಿ ನಿರ್ಮಾಣ ಕಾರ್ಯನೆನೆಗುದಿಗೆ ಬಿದ್ದಿದೆ, ಕೂಡಲೇ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗ ಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪೆದ್ದಿಹಳ್ಳಿ ನರಸಿಂಹಯ್ಯ ಮತನಾಡಿ ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ಪೊಲೀಸ್ ಇಲಾಖೆಯಲ್ಲಿಯಿಂದ ದೌರ್ಜನ್ಯ ಮಾಡಿದ ವ್ಯಕ್ತಿಗಳಿಂದಲ್ಲೇ,ಕಂಪ್ಲೇಟ್ ಪಡೆದು ಪ್ರತಿದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ,ಪೊಲೀಸ್ ಇಲಾಖೆ ದಲಿತರ ಮೇಲೆ ದೌರ್ಜನ್ಯಗಳಾದಾಗ ಪ್ರತಿದೂರು ದಾಖಲಿಸದೆ ದೌರ್ಜನ್ಯಕೊಳಗಾದ ವ್ಯಕ್ತಿಗಳಿಗೆ ರಕ್ಷಣೆ ನೀಡಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು
ವರದಿ:ಮಂಜುನಾಥ್ ಹಾಲ್ಕುರಿಕೆ