
ತಿಪಟೂರು ನಗರದ ಹಳೇಪಾಳ್ಯದಿಂದ ಮಾರುಕಟ್ಟೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಕೆ.ಎ 05ಎಜಿ 5713 ಸಂಖ್ಯೆಯ ಮಾರುತಿ ಓಮಿನಿ ಕಾರುಡಿಕ್ಕಿಹೊಡೆದ ಪರಿಣಾಮ, ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೇಪಾಳ್ಯ ಗ್ರಾಮದ ದೀಪಿಕ 18ವರ್ಷ ಅಪಘಾತಕ್ಕೆ ಒಳಗಾದ ವಿದ್ಯಾರ್ಥಿನಿ

ತಿಪಟೂರು ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ದೀಪಿಕ,
ಬೆಳಗ್ಗೆ 8ಗಂಟೆ ಸಮಯದಲ್ಲಿ ಮಾರುಕಟ್ಟೆಗೆ ಹೋಗುವಾಗ ನೊಣವಿನಕೆರೆ ಮೂಲದ ಪಾನಮತ್ತ ವ್ಯಕ್ತಿ ಅತಿವೇಗದಿಂದ ವಾಹನ ಚಾಲಯಿಸಿಕೊಂಡು ಬಂದು ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿನಿಯ ತಲೆ,ಕಾಲು ಭುಜದ ಭಾಗಕ್ಕೆ ತೀವ್ರಪೆಟ್ಟಾಗಿದ್ದು ಸ್ಥಳೀಯರ ನೆರವಿನಿಂದ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು.
ಪಾನಮತ್ತನಾಗಿ ವಿಧ್ಯಾರ್ಥಿಗೆ ಡಿಕ್ಕಿಹೊಡೆದ ಚಾಲಕ ನಂತರ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಹೊಡೆದಿದ್ದು ಕಾರನ್ನು ಸ್ಥಳದಲ್ಲೇ ಬಿಟ್ಟುಪರಾರಿಯಾಗಿದ್ದಾನೆ
ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ