
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಿಪಟೂರು ತಾಲ್ಲೋಕಿನ ಬಿದರೆಗುಡಿ ವಲಯದ ಗುಡಿಗೊಂಡನಹಳ್ಳಿ ಪ್ರೌಢ ಶಾಲೆಯ ಆವರಣದಲ್ಲಿ ಎಸ್ಎಸ್ಎಲ್ ಸಿ ಮಕ್ಕಳಿಗೆ ಮೂರು ತಿಂಗಳು ಮನೆಪಾಠ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಉದಯ್ ಚಾಲನೆ ನೀಡಿದರು

ಗುಡಿಗೊಂಡನಹಳ್ಳಿ ಪ್ರೌಡಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಉದಯ್ ಯೋಜನೆಯ ಚಾಲನೆ ನೀಡಿದರು
ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಉದಯ್ ರವರು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಜನಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನ ಹಮ್ಮಿಕೊಂಡಿದು, ಜನಮಂಗಳ, ಸುಜ್ಞಾನ ನಿಧಿ, ಜ್ಞಾನ ದೀಪ ಶಿಕ್ಷಕರ ಆಯ್ಕೆ, ಯೋಜನೆಯಿಂದ ಮಕ್ಕಳಿಗೆ ಪ್ರಯೋಜನವಾಗುತ್ತಿದೆ.
ಪೋಷಕರು ತಮ್ಮ ಮಕ್ಕಳಿಗೆ,ಶಿಕ್ಷಣದ ಜೊತೆ ಸಂಸ್ಕೃತಿ, ಸಂಸ್ಕಾರ, ತಿಳಿಹೇಳಬೇಕು,ನಮ್ಮ ಯೋಜನೆಯ ತಂದೆ, ತಾಯಿಯರು ಪ್ರಗತಿ ನಿಧಿ ಪಡೆದು ಅತ್ತ್ಯುತ್ತಮ ಶಿಕ್ಷಣ ನೀಡುತ್ತಿದಾರೆ, ಯೋಜನೆಯಿಂದ ಎಸ್ಎಸ್ಎಲ್ ಸಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು,ಮೂರು ತಿಂಗಳ ಮನೆಪಾಠ ಕಾರ್ಯಕ್ರಮ ಹಮ್ಮಿಕೊಂಡಿದು,ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಪಡೆಯಿರಿ ಎಂದು ತಿಳಿಸಿದರು
.ಮುಖ್ಯೋಪಾಧ್ಯಾಯರಾದ ನಳಿನ ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದುವ ಬಗ್ಗೆ ತಿಳಿಸಿ ಮಕ್ಕಳಿಗೆ ಛಲ ಇರಬೇಕು. ಹಸಿವು ನಿದ್ರೆ ಬಿಟ್ಟು ಓದಿ ಉತ್ತಮ ಫಲಿತಾಂಶ ಬಂದರೆ ನಾವು ಧರ್ಮಸ್ಥಳಕ್ಕೆ ಮತ್ತು ಪೂಜ್ಯ ದಂಪತಿಗಳಿಗೆ ಅದೇ ನಮ್ಮ ಶಾಲೆಯ ಕೊಡುಗೆ ಆಗಬೇಕು ಎಂದು ತಿಳಿಸಿ
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ, ಚರಣ್, ಚಿದಂಬರ , ಶಿವಪ್ರಸಾದ್ ಚಂದನ್ ಮೈಲಾರಪ್ಪ ಹಾಗೂ ಶಶಿಕಲಾ .ಸಮನ್ವಯಧಿಕಾರಿ ಪದ್ಮಾವತಿ ಎಂ.ಡಿ ಮೇಲ್ವಿಚಾರಕರಾದ ಅನಿತಾ ಸೇವಾಪ್ರತಿನಿಧಿ ವಿನೋದ .ಮುಂತ್ತಾದವರು ಉಪಸ್ಥಿತರಿದರು
ವರದಿ: ಮಂಜುನಾಥ್ ಹಾಲ್ಕುರಿಕೆ