
ತಿಪಟೂರು ಮಾರನಗೆರೆ ಸಮುದಾಯ ಭವನ ವಿಸ್ತರಣೆ ಹಾಗೂ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುತ್ತಿರುವ ಶಾಸಕ.ಕೆ.ಷಡಕ್ಷರಿ ಹಾಗೂ ನಗರಸಭಾ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್,
ತಿಪಟೂರು ನಗರದ ವಾರ್ಡ್ ನಂಬರ್ 3 ರ ಚಿಕ್ಕಮಾರ್ಕೇಟ್ ನಿಂದ ಕಾರೋನೆಷನ್ ರಸ್ತೆ ವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ,ವಾರ್ಡ್ ನಂಬರ್ 7ರಲ್ಲಿ 3ಮತ್ತು 4 ರಸ್ತೆ ಅಭಿವೃದ್ದಿ ಕಾಮಗಾರಿ,ವಾರ್ಡ್ ನಂಬರ್ 13ರಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ.ವಾರ್ಡದ ನಂಬರ್ 14 ರಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ,ಕಂಚಾಘಟ್ಟ ವಾರ್ಡ್ ನಂಬರ್15ರಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ಅಗ್ನಿಶಾಮಕ ಠಾಣೆ ಮುಂಬಾಗದ ಪೊಲೀಸ್ ಕ್ವಾಟ್ರಸ್ ರಸ್ತೆ ಅಭಿವೃದ್ದಿ,ವಾರ್ಡ್ ನಂಬರ್ 17 ರ ರಸ್ತೆ ಅಭಿವೃದ್ದಿ,ವಿನಾಯಕನಗರ ಬಡಾವಣೆ ರಸ್ತೆ ಅಭಿವೃದ್ದಿ,ವಾರ್ಡ್ ನಂಬರ್ 16ರ ಮಾರನನಗೆರೆ ಕಾಲೋನಿ ಸಮುದಾಯ ಭವನ ವಿಸ್ತರಣೆ ಕಾಮಗಾರಿ,ವಾರ್ಡ್ ನಂಬರ್ 18ರ ಇಂದಿರಾನಗರ ಎಂ.ಆರ್ ರಾಮಣ್ಣ ಲೇಔಟ್ ರಸ್ತೆ ಅಭಿವೃದ್ದಿ,ಇಂದಿರಾ ನಗರ ಮುಖ್ಯರಸ್ತೆ ಅಭಿವೃದ್ದಿ,ವಾರ್ಡ್ ನಂಬರ್ 21ರ ಗಾಂಧೀನಗರ 3 ಮತ್ತು 4 ಅಡ್ಡರಸ್ತೆ ಅಭಿವೃದ್ದಿ.ವಾರ್ಡ್ ನಂಬರ್ 23 ರ ಆಲ್ ಅಮೀನ್ ನಗರ ಚರಂಡಿ ನಿರ್ಮಾಣ.ವಾರ್ಡ್ ನಂಬರ್ 27ರ ವಿವೇಕಾನಂದ ನಗರ 1ನೇ ಕ್ರಾಸ್ ನಿಂದ 5ನೇ ಕ್ರಾಸ್ ವರೆಗೆ ಇಂಟರ್ ಲಾಕ್ ಕಾಮಗಾರಿ.ಡಬ್ಲ್ಯೂ ಟಿವಿ ಕಾಂಪೋಡ್ ಕಾಮಗಾರಿ,ನಗರಸಭೆ ವ್ಯಾಪ್ತಿಯಲ್ಲಿ ಬಸ್ ಶಲ್ಟರ್ ನಿರ್ಮಾಣ,35 ಲಕ್ಷ ವೆಚ್ಚದ 24×7 ಕುಡಿಯುವ ನೀರಿನಯೋಜನೆಯಲ್ಲಿ ಬಿಟ್ಟುಹೋಗಿರುವ ವಾರ್ಡ್ ಗಳಿಗೆ ನೀರುಪೂರೈಕೆ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿದರು

ಕಾಮಗಾರಿಗೆ ಚಾಲನೆ ನೀಡಿಮಾತನಾಡಿದ ಶಾಸಕ ಕೆ.ಷಡಕ್ಷರಿ ತಿಪಟೂರು ನಗರದಲ್ಲಿ ಸುಮಾರು 2ಕೋಟಿ 50ಲಕ್ಷದ ವಿವಿಧ ಕಾಮಗಾರಿಗಳಿಗೆ ಶಾಸಕರ ವಿಶೇಷ ಅನುದಾನದಲ್ಲಿ ನೀಡಿದ್ದೇನೆ,ನಗರಸಭೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳಿಗೆ ಆಧ್ಯತೆ ನೀಡುತ್ತಿದ್ದು, ಅಗತ್ಯವಿರುವ ಕಡೆ,ರಸ್ತೆ ನಿರ್ಮಾಣ ಹಾಗೂ ಸಿಮೆಂಟ್ ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಗುದ್ದಲಿಪೂಜೆ ನೆರವೇರಿಸಿದ್ದೇವೆ. ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ,ಅಲ್ಲದೆ ನಗರಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ,24×7ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯಿಂದ ಬಿಟ್ಟು ಹೋಗಿರುವ ಬಡಾವಣೆಗಳಿಗೆ ನೀರುಪೂರೈಸುವ,ಯೋಜನೆ ಸೇರ್ಪಡೆಗೆ ಹಣ ನೀಡಲಾಗಿದೆ, ಜನರಿಗೆ ಅಗತ್ಯವಿರುವ ಕೆಲಸಗಳಿಗೆ ಅನುದಾನ ನೀಡುತ್ತೇನೆ ಎಂದು ತಿಳಿಸಿದರು
ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಮಾತನಾಡಿ ತಿಪಟೂರು ನಗರದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರ ಅನುದಾನದಲ್ಲಿ ಹಣ ನೀಡಲಾಗಿದೆ, ನಗರದ ಅಭಿವೃದ್ದಿಗೆ ಶಾಸಕರು ಹೆಚ್ಚಿನ ಒತ್ತುನೀಡಿದ್ದಾರೆ, ಶಾಸಕರ ಸಹಕಾರದಿಂದ ನಗರಸಭೆ ಅಭಿವೃದ್ದಿಗೆ ಹೆಚ್ಚು ಒತ್ತುನೀಡಲಾಗುವುದು, ನಗರದಲ್ಲಿ ಜನರಿಗೆ ತೊಂದರೆಯಾಗದಂತೆ ಜನರಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ನಗರದ ಮೂಲಸೌಕರ್ಯಗಳ ಅಭಿವೃದ್ದಿಗೆ ಆಧ್ಯತೆ ನೀಡುವುದಾಗಿ ತಿಳಿಸಿದರು,
ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಆರ್.ಡಿ ಬಾಬು, ಸದಸ್ಯರಾದ ಮಹೇಶ್ ಸಂಜೀವಯ್ಯ,ಪದ್ಮಶಿವಣ್ಣ,ಯೋಗೇಶ್ ಮುಖಂಡರಾದ ,ಧರಣೇಶ್,ಲೋಕನಾಥ್ ಸಿಂಗ್,ಗಾರೆ ಶಿವಣ್ಣ, ಶಿವಲಿಂಗಯ್ಯ ಸುಜಿತ್ ಭೂಷಣ್ ಚನ್ನರಾಜು.ಮಧುಸೂಧನ್.ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ