
ತಿಪಟೂರು: ದೇಶ, ರಾಜ್ಯದಲ್ಲಿ ಚುನಾವಣೆಗಳು ಆರಂಭವಾಗುತ್ತಿದ್ದಂತೆ ಜನರಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ಸರ್ವೆ ಸಮಾನ್ಯ, ಕ್ಷೇತ್ರ ಇತಿಹಾಸ, ಅಭ್ಯರ್ಥಿ, ಪಕ್ಷ, ಜಾತಿ ಹೀಗೆ ಒಬ್ಬೊಬ್ಬರು ಒಂದೊಂದು ವಿಚಾರಗಳನ್ನ ಮುಂದಿಟ್ಟುಕೊಂಡು ತಮ್ಮದೇ ಆದ ರೀತಿಯಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ವಿಶ್ಲೇಷಣೆ ಮಾಡುತ್ತಾರೆ.
ಅಭಿಮಾನಿಗಳು ಪಕ್ಷದ ಕಾರ್ಯಕರ್ತರುಗಳು ತಮ್ಮ ನಾಯಕನ ಗೆಲುವಿಗಾಗಿ ದೇವರ ಮೊರೆ ಹೋಗುವುದು, ಪೂಜೆ ಪುನಸ್ಕಾರಗಳನ್ನ ಮಾಡುವುದು ನಡೆಯುತ್ತಿದೆ. ಇದರ ಜೊತೆಗೆ ಜ್ಯೋತಿಷಿಗಳು ಚುನಾವಣೆಯ ಫಲಿತಾಂಶಗಳನ್ನ ಮೊದಲೇ ಭವಿಷ್ಯ ಹೇಳುವ ಪರಿಪಾಠ ಈ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ.
ರಾಜ್ಯದಲ್ಲಿ ನಡೆದ ಶಿಗ್ಗಾವಿ. ಸಂಡೂರು.ಹಾಗೂ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಭಾರಿ ಸದ್ದು ಮಾಡಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ನ.23 ರಂದು ತೆರೆಬೀಳಲಿದೆ. ಈ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ರಾಜ್ಯದ ಜನರು ಕಾತರದಿಂದ ಕಾಯುತ್ತಿದ್ದಾರೆ. ಎನ್ ಡಿಎ ಮೈತ್ರಿ ಪಕ್ಷದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಒಂದು ಕಡೆಯಾದರೆ ಮತ್ತೊಂದೆಡೆ ಬಿಜೆಪಿಯಿಂದ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸ್ಪರ್ಧೆ ಭಾರಿ ಕುತೂಹಲ ಕೆರಳಿಸಿದೆ. ಇಡೀ ರಾಜ್ಯದ ಜನ ಚನ್ನಪಟ್ಟಣ ಉಪಚುನಾಣೆ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಭದ್ರಕಾಳಿ ಅಮ್ಮನ ಮೊರೆ ಹೋಗಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಬೆನಾಯ್ಕನಹಳ್ಳಿ ಗೇಟ್ ಬಳಿ ಇರುವ ಶಕ್ತಿ ದೇವತೆ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮ ನವರ ಬಳಿ ಬರವಣಿಗೆ ಶಾಸ್ತ್ರ ಹಾಗೂ ಶ್ರೀ ಕಾಳಿ ರುದ್ರಪೀಠದ ಶ್ರೀ ರೇಣುಕಾ ಗುರೂಜಿ ಬಳಿ ಜೆಡಿಎಸ್ ಕಾರ್ಯಕರ್ತರು ಪ್ರಾಚೀನ ತಾಳೆಗರಿ ಶಾಸ್ತ್ರ, ರಂಗೋಲಿ ಮೇಲೆ ಭದ್ರಕಾಳಿ ಅಮ್ಮನವರು ಭರವಣಿಗೆಯ ಮೂಲಕ ಹೇಳುವ ಶಾಸ್ತ್ರ ಕೇಳಿದ್ದಾರೆ.
ದೇವಿ ಬರವಣಿಗೆ ಶಾಸ್ತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ ಎಂದು ರಂಗೋಲಿ ಮೇಲೆ ಬರೆಯುವ ಮೂಲಕ ಅಭಯ ನೀಡಿದ್ದಾಳಂತೆ.
ತಾಳೇಗರಿ ಶಾಸ್ತ್ರದಲ್ಲಿಯೂ ಸಹ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಪ್ರಪ್ತಿಯಾಗಲಿದೆ, ತಾಂಬೂಲದೊಂದಿಗೆ , ಶ್ವೇತವರ್ಣದಾರಿಯಾಗಿ ರಾಜಗದ್ದುಗೆ ಏರಲಿದ್ದಾನೆ ಎಂಬುದಾಗಿ ಬರೆಯಲಾಗಿದೆ,
ಆಗಾಗಿ ತಾಳೇಗರಿ ಶಾಸ್ತ್ರದ ಪ್ರಕಾರ ರಾಜಗದ್ದುಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಾಪ್ತಿಯಾಗಲಿದೆ, ಈ ಚುನಾವಣೆಯಲ್ಲಿ ಅವರು ಗೆದ್ದೆಗೆಲ್ಲುತ್ತಾರೆ. ನಿಖಿಲ್ ಕುಮಾರಸ್ವಾಮಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ದೊರೆಯಲಿದೆ ಎಂದು ಶ್ರೀರೇಣುಕಾ ಗುರೂಜಿ ತಿಳಿಸಿದ್ದಾರೆ.
ಶ್ರೀ ಭದ್ರಕಾಳಿ ಅಮ್ಮನವರೂ ಮತದಾನದ ಪೂರ್ವದಲ್ಲೇ ನುಡಿದ ಭವಿಷ್ಯದಿಂದ ಜೆಡಿಎಸ್ ಮುಖಂಡರು ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಸಲ್ಲಿಸಿದ್ದಾರೆ. ನಾಳೆ ಮತ ಎಣೆಕೆ ನಡೆಯಲಿದ್ದು ಪಕ್ಷದ ಕಾರ್ಯಕರ್ತರು, ಜನರ ಕುತೂಹಲಕ್ಕೆಅಂತಿಮ ತೆರೆ ಬೀಳಲಿದೆ.

ವರದಿ : ಮಂಜುನಾಥ್ ಹಾಲ್ಕುರಿಕೆ