ತುಮಕೂರಿನಲ್ಲಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

Spread the love

ತುಮಕೂರು: ನಗರದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಯ ಕಟ್ಟಡದ ಮುಂಭಾಗ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಅಂದಹಾಗೆ ಈ ಹಿಂದೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನ ಈಡೇರಿಸಲು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ವಿಫಲವಾದ ಪರಿಣಾಮ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ) ಮತ್ತೊಮ್ಮೆ ಪ್ರತಿಭಟನೆಗೆ ಮುಂದಾಗಿದೆ ಅಂದ ಹಾಗೆ ಮನೆ ಮನೆಗೆ ಆರೋಗ್ಯ ಸೇವೆಗೆ ಆಸರೆಯಾಗುವ ಆಶಾ ಕಾರ್ಯಕರ್ತೆಯ ಬೇಡಿಕೆಗಳಾದರೂ ಏನೇನು ಎಂದರೆ ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವದರ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ 10,000 ಗ್ಯಾರಂಟಿಯನ್ನು ಈ ಏಪ್ರಿಲ್ ಇಂದ ಅನ್ವಯ ಆಗುವಂತೆ ಆದೇಶ ಹೊರಡಿಸಬೇಕು, 2025 ಮಾರ್ಚ್ ರಾಜ್ಯ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಊಟ ಕಾರ್ಯಕರ್ತರಿಗೆ 1000 ಪ್ರೋತ್ಸಾಹ ಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆರಿಗೂ ಸಹ ಹೆಚ್ಚಳ ಮಾಡಬೇಕು, ತರ್ಕಬದ್ದಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನ ಕೈಬಿಡಿ ಈ ಹೆಸರಿನಲ್ಲಿ ಯಾವುದೇ ಆಶಾ ಕಾರ್ಯಕರ್ತರನ್ನು ಕೆಲಸದಿಂದ ತೆಗೆಯಬಾರದು, ಅವೈಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು, ಆಶಾ ಸುಗಮಕಾರರನ್ನ ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು, ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಘಂಟು ನೀಡಬೇಕು, ನಗರ ಆಶಾಗಳಿಗೆ ರೂ 2000 ಗೌರವದನ ಹೆಚ್ಚಿಸಬೇಕು, 2025 ಜೂನ್ ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಇತ್ಯಾದಿ ಇಂತಹ ಬೇಡಿಕೆಗಳಿಂದ ಆಶಾ ಅಕ್ಕಂದಿರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ ವಿವಿಧ ಭಾಗ್ಯಗಳನ್ನು ನೀಡುವ ರಾಜ್ಯ ಸರ್ಕಾರ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಗೆ ಬೆನ್ನೆಲುಬಾಗುವಲ್ಲಿ ಆಶಾ ಅಕ್ಕಂದಿರ ಸೇವೆ ಮತ್ತು ಬದುಕಿಗೆ ಆಸರೆಯಾಗಬೇಕಾಗಿದೆ.

ವರದಿ: ಸಂತೋಷ್ ಓಬಳ. ಗುಬ್ಬಿ

Leave a Reply

Your email address will not be published. Required fields are marked *

error: Content is protected !!