ಗುಬ್ಬಿ: ತಾಲೂಕಿನ ಕಡಬ ಹೋಬಳಿ ಮಾರುಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಅಧ್ಯಕ್ಷ ಸ್ಥಾನ ತೆರುವಾದ ಹಿನ್ನೆಲೆಯಲ್ಲಿ ಮರು ಚುನಾವಣೆ ನಡೆಸಿ ಸಾಮಾನ್ಯ ಮಹಿಳಾ ಮೀಸಲಾತಿ ಸ್ಥಾನದಲ್ಲಿ ಶ್ರೀಮತಿ ಗಂಗಮ್ಮ ನಾಗೇಶ್ ಸದರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ನಾಗೇಶ್ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಮ್ಮ ಗ್ರಾಮ ಪಂಚಾಯಿತಿ ಸರ್ವ ಸದಸ್ಯರಿಗೂ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅಣಿಯಾಗುತ್ತೇನೆ ಅಲ್ಲದೆ ಸಾಮಾನ್ಯವಾಗಿ ಗ್ರಾಮೀಣ ಭಾಗದ ದುರ್ಬಲ ಮಹಿಳೆಯರು ಪುರುಷ ಜನಪ್ರತಿನಿಧಿಗಳಲ್ಲಿ ತಮ್ಮ ಶೋಚನೀಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂಕುಚಿತತೆ ಪಡುತ್ತಾರೆ ಈ ಹಿನ್ನೆಲೆಯಲ್ಲಿ ನಾನು ಒಬ್ಬ ಮಹಿಳೆಯಾಗಿದ್ದು ಸಿಕ್ಕ ಅಧಿಕಾರವನ್ನು ನಮ್ಮ ಪಂಚಾಯಿತಿಯ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆಯ ನೀಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸದರಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ವಿಜಯ ಗಂಗಾಧರ್ ಮಾತನಾಡಿ ನಾನು ಒಬ್ಬ ಮಹಿಳಾ ಸದಸ್ಯೆಯಾಗಿದ್ದು ನನ್ನ ಸಹ ಸದಸ್ಯೆಯಾದ ಶ್ರೀಮತಿ ಗಂಗಮ್ಮ ನಾಗೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿರುವುದು ಮಹಿಳಾ ಅಧಿಕಾರಕ್ಕೆ ಸಿಕ್ಕ ಅವಕಾಶ ಈ ಬೆಳವಣಿಗೆ ನಮ್ಮಲ್ಲಿ ಮಹಿಳೆಯ ಸಮಸ್ಯೆಗಳಿಗೆ ಸ್ಪಂದಿಸಲು ನಮಗೆ ಮತ್ತಷ್ಟು ಬಲ ತಂದಿದೆ ಎಂದರು.
ಸದರಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀ ಮುನೇಶ್ ಮಾತನಾಡಿ ನಮ್ಮ ಬ್ಲಾಕ್ ಸದಸ್ಯರೇ ಆದ ಶ್ರೀಮತಿ ಗಂಗಮ್ಮ ನಾಗೇಶ್ ರವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಯ್ಕೆಯಾಗಿರುವುದಕ್ಕೆ ನಮ್ಮ ಬ್ಲಾಕ್ ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಈ ಹಿಂದೆ ನಮ್ಮ ಗ್ರಾಮ ಪಂಚಾಯಿತಿಗೆ H.A.L. ಇಂದ ಹಣ ಬರಬೇಕಾಗಿತ್ತು ಆದರೆ ವಿಳಂಬವಾಗಿದೆ ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸದರಿ ಹಣ ತರಲು ಒತ್ತಡ ಹಾಕುತ್ತೇವೆ ಗ್ರಾಮಗಳ ಎಲ್ಲಾ ಮೂಲಭೂತ ಸಮಸ್ಯೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸದರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ನಾಗೇಶ್, ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ, ಸದಸ್ಯರು ಹಾಗೂ ಗ್ರಾಮ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಶ್ರೀ ಮುನೇಶ್, ಶ್ರೀ ನಾಗೇಶ್ , ಸದಸ್ಯರುಗಳಾದ ತಿಮ್ಮರಾಜು, ಶ್ರೀ ಬಸವರಾಜು, ಶ್ರೀಮತಿ ರಾಧಾ ನಟರಾಜು, ಶ್ರೀಮತಿ ವಿಜಯ ಗಂಗಾಧರ್, ಶ್ರೀಮತಿ ಯೋಗಿತಾ ಶಿವಕುಮಾರ್, ಶ್ರೀ ಚಂದ್ರಯ್ಯ, ಶ್ರೀ ಸಿದ್ದರಾಮೇಗೌಡ ಪಾಲ್ಗೊಂಡಿದ್ದರು ಮತ್ತು ಸದರಿ ಗ್ರಾಮ ಪಂಚಾಯಿತಿ ಪಿ.ಡಿ.ಒ ಶ್ರೀಮತಿ ತನಜಾ ಬೆನಕಟ್ಟಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಾಗಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ













Leave a Reply