
ಕೊಲೆಪ್ರಕರಣದಲ್ಲಿ ಯುವಕನ ತಾಯಿಯನ್ನ ಪೊಲೀಸ್ ವಿಚಾರಣೆಗೆ ಒಳಪಡಿಸಿದ ಕಾರಣ ಗಾಬರಿಗೊಳ್ಳಗಾದ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಹಟ್ನ ಗ್ರಾಮದ ರೇಣುಕಯ್ಯ 42 ವರ್ಷ ಮೃತ ದುರ್ದೈವಿ.ಕಳೆದ ಅಕ್ಟೋಬರ್ ನಲ್ಲಿ ಹಟ್ನ ಗ್ರಾಮದ ಗೌರಮ್ಮ ಎಂಬ ಮಹಿಳೆಯ ಕೊಲೆ ನಡೆದ್ದಿತ್ತು, ಎನ್ನಲಾಗಿದ್ದು,ಮೃತ ಗೌರಮ್ಮನ ಕೊಲೆ ವಿಚಾರವಾಗಿ ಹಟ್ನ ಗ್ರಾಮದ ಜಯಮ್ಮ ಎಂಬುವವರನ್ನ ಕೆ.ಬಿ ಕ್ರಾಸ್ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ,ತಾಯಿ ಜಯಮ್ಮ ನನ್ನ ತನಿಖೆಗೆ ಒಳಪಡಿಸಿದ ಕಾರಣ,ಗಾಬರಿಗೊಳಗಾದ ಜಯಮ್ಮ ಮಗ ರೇಣುಕಯ್ಯ ಮನೆ ಪಕ್ಕದ ಶೇಡ್ ನಲ್ಲಿ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸ್ಥಳಕ್ಕೆ ಕೆ.ಬಿ.ಕ್ರಾಸ್ ಪೊಲೀಸ್ ಸಬ್ ಇನ್ಪೆಕ್ಟರ್ ಮಹೇಶ್ ಮೌಳಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದಚಂದ್ರಶೇಖರ್,ಕುಣಿಗಲ್ ಡಿವೈಎಸ್ಪಿ ಓಂ ಪ್ರಕಾಶ್ ಪರಿಶೀಲನೆ ನಡೆಸಿದ್ದು, ಕೆ.ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ