
ತಿಪಟೂರು:ಭಾರತಕಂಡ ಶ್ರೇಷ್ಠ ಸಮಾನತಾವಾದಿ ವಿಶ್ವಜ್ಞಾನಿ ಡಾ// ಬಿ.ಆರ್ ಅಂಬೇಡ್ಕರ್ ರವರು ತಮ್ಮ ಅಗಾಧವಾದ ಅಧ್ಯಯನದ ಮೂಲಕ ವಿಶ್ವಶ್ರೇಷ್ಟ ಸಂವಿಧಾನ ನೀಡಿದ್ದಾರೆ,ಬಹುಸಂಸ್ಕೃತಿಯ ಭಾರತದಲ್ಲಿ ಸರ್ವ ಸಮಾಜಗಳು ಒಟ್ಟಿಗೆ ಬಾಳ್ವೆಮಾಡಲು ಸಂವಿಧಾನದಲ್ಲಿ ಅಡಕವಾಗಿರು ಚಿಂತನೆಗಳೆ ಕಾರಣ ಎಂದು ತಿಳಿಸಿದರು .

ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಗೆಳೆಯರ ಬಳಗ ಮತ್ತು ತಿಪಟೂರು ವಾಯ್ಸ್ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ ನಮ್ಮೂರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನವದೆಹಲಿ ರಂಗಾಯಣದ ರಂಗಕರ್ಮಿ, ಶೃತಿ ಇಂದಿರಾ ಮಾತನಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ಸರ್ವಜನರಿಗೂ,ಸಮಾನ ಅವಕಾಶ ನೀಡಿದೆ,ಸಂವಿಧಾನಿಕ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವಂತ್ತಾಗ ಬೇಕು,ನಮ್ಮ ಸರ್ಕಾರಗಳು ಶಿಕ್ಷಣಕ್ಷೇತ್ರಕ್ಕೆ ಹೆಚ್ಚಿನ ಅವಕಾಶ ನೀಡಿದೆ, ಸಾಮಾನ್ಯ ಕುಟುಂಬದಲ್ಲಿ ಬೆಳೆದ,ನಾನೂ ಸಹ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಶಿಕ್ಷಣ ಪಡೆದಿದ್ದೇನೆ,ರಂಗಭೂಮಿಯಲ್ಲಿ ಸೇವೆ ಮಾಡುತ್ತಿದ್ದೇನೆ,ಸಾಮಾಜಿಕ ಬದಲಾವಣೆಗೆ ಶಿಕ್ಷಣವೇ ಕೀಲಿಕೈ ಉತ್ತಮ ಶಿಕ್ಷಣ ಪಡೆದು ಸಾಮಾಜಿಕ ಬದಲಾವಣೆಯಲ್ಲಿ ಕೈ ಜೋಡಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಬೆಸ್ಕಾಂ ಇಂಜಿನಿಯರ್ ನರಸಿಂಹಮೂರ್ತಿ ಯಗಚೀಕಟ್ಟೆ ಮಾತನಾಡಿ ಭಾರತದ ಸಂವಿಧಾನ ವಿಶ್ವಶ್ರೇಷ್ಠ ಸಂವಿಧಾನವಾಗಿದ್ದು ಸಮಾಸಮಾಜ ನಿರ್ಮಾಣ ಹಾಗೂ ಸಮಾನತೆಯ ಬದುಕಿಗೆ ದಾರಿ ದೀಪವಾಗಿದೆ,ನಮಗೆ ಹಕ್ಕು ಹಾಗೂ ಸ್ವತಂತ್ರ್ಯದ ಜೊತೆಗೆ ದೇಶಕ್ಕಾಗಿ ನಾವು ಹೊಂದಿರಬೇಕಾದ ಜವಾಬ್ದಾರಿಗಳ ಬಗ್ಗೆಯೂ ಸಹ ತಿಳಿಸಿದ್ದು,ಭಾರತದ ಭವಿಷ್ಯಕ್ಕೆ ಬುದ್ದ ಬಸವ ಅಂಬೇಡ್ಕರ್ ಚಿಂತನೆಗಳೆ ಆಧಾರವಾಗಿದ್ದು ಶಾಂತಿ ಸಹಬಾಳ್ವೆಯಿಂದ ಕೆಲಸ ಮಾಡೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯ ನಿಜಗುಣ,ಉಪತಹಸೀಲ್ದಾರ್ ರಶ್ಮಿ,ಉಪನ್ಯಾಸಕರಾದ ಎಲ್.ಎಂ ವೆಂಕಟೇಶ್,ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ,ತಿಪಟೂರು ವಾಯ್ಸ್ ಹಾಗೂ ತಿಪಟೂರು ಗೆಳೆಯರ ಬಳದಗ ಮುಖ್ಯಸ್ಥ ಎಂ.ಎನ್ ನವೀನ್ ಕುಮಾರ್ ಸಾಹಿತಿ ಡಾ//ಎಸ್.ಕೆ ಮಂಜುನಾಥ್, ಕವಿ ಬಳ್ಳೆಕಟ್ಟೆ ಶಂಕರಪ್ಪ,ಕೇರಾ ಗೌರವಾಧ್ಯಕ್ಷ ಬಾಸ್ಕರ್, ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು,ಡಿಎಸ್ಎಸ್ ಮುಖಂಡ ರಾಜು ಬೆಣ್ಣೆನಹಳ್ಳಿ,ಸೇರಿದಂತೆ ಅನೇಕರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ