
ತಿಪಟೂರು: ರಾಜ್ಯಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಯಲ್ಲಿ ಕೆಲ ಲೋಪಗಳು ಆಗಿರುವ ಬಗ್ಗೆ ವಕ್ಕಲಿಗ ಸಮಾಜಕ್ಕೆ ಆತಂಕವಿದೆ, ಈ ವಿಚಾರವಾಗಿ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕುಣಿಗಲ್ ಶಾಸಕ ಕೆ.ಹೆಚ್ ರಂಗನಾಥ್ ತಿಳಿಸಿದರು
ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿಯವರ ಹುಟ್ಟುಹಬ್ಬದ ತಿಪಟೂರು ಭೇಟಿನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನೂ ಸಹ ವಕ್ಕಲಿಗ ಸಮುದಾಯದ ಶಾಸಕನಾಗಿ ನನ್ನ ಸಮುದಾಯದ ಹಕ್ಕುಗಳ ರಕ್ಷಣೆ ಮಾಡುವುದು,ನನ್ನ ಕರ್ತವ್ಯವಾಗಿದೆ,ಜಾತಿಗಣತಿ ವರದಿಯ ಪ್ರತಿಗಳನ್ನ ಎಲ್ಲರಿಗೂ ನೀಡಲಾಗಿದ್ದು, ವರದಿಯನ್ನ ಸಂಪೂರ್ಣವಾಗಿ ಓದಿ ,ಅಧ್ಯಯನ ಮಾಡಿ, ಸಾಧಕ ಬಾದಕಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ.ಹತ್ತು ವರ್ಷಗಳ ಹಿಂದೆ ನಡೆದ ಗಣತಿವೇಳೆ ಅನೇಕ ಲೋಪವಿದೆ ಎನ್ನಲಾಗಿದ್ದು ಹೊಸದಾಗಿ ವೈಜ್ಞಾನಿಕವಾಗಿ ಗಣತಿಮಾಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ,ಆದರೆ ಜಾತ್ಯಾತೀತ ಮನೋಭಾವದ ಸಿದ್ದರಾಮಯ್ಯ ನವರು ವರದಿಬಗ್ಗೆ ಯಾವಕ್ರಮಕೈಗೊಳ್ಳುತ್ತಾರೆ ಎಂಬುದನ ವರದಿ ನೋಡಿದ ನಂತರ ತಿಳಿಸುತ್ತೇವೆ ಎಂದು ತಿಳಿಸಿದರು