
ತಿಪಟೂರು:ಶಾಸಕ ಕೆ.ಷಡಕ್ಷರಿ ಸರಳ ಸಜ್ಜನಿಕೆ ವ್ಯಕ್ತಿತ್ವದ ಆತ್ಮೀಯ ಸ್ನೇಹಿತ,ಶಾಸಕ ಕೆ.ಷಡಕ್ಷರಿ ಯವರಿಗೆ ಸಚಿವರಾಗುವ ಎಲ್ಲಾ ಅರ್ಹತೆ ಹಾಗೂ ಸಾಮರ್ಥ್ಯವಿದೆ, ಪಕ್ಷದಲ್ಲಿ ಹಿರಿಯರು ಸಹ ಆಗಿದ್ದಾರೆ, ಕಳೆದ ಭಾರಿ ನಮ್ಮ ಸರ್ಕಾರದಲ್ಲಿ ಸಚಿವ ಸ್ಥಾನದ ಅವಕಾಶ ಕೂದಲೆಳೆ ಅಂತರದಲ್ಲಿ ಕೈ ತಪ್ಪಿತು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯ್ತು, ಈ ಭಾರಿ ಸಚಿವರಾಗಲಿ, ಅವರ ಇಷ್ಟಾರ್ಥಗಳು ಈಡೇರಲ್ಲಿ,ಅವರಿಗೆ ಆರೋಗ್ಯಭಾಗ್ಯ ಸಚಿವ ಸ್ಥಾನ ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಶಾಸಕ ಕೆ.ಷಡಕ್ಷರಿ ರಾಜ್ಯದಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಅನುಭವ ಇರುವಂತ್ತವರು,ಒಬ್ಬ ಶಾಸಕ ತಮ್ಮ ಕ್ಷೇತ್ರದ ಜನತೆ ಕಷ್ಟ ಕಾರ್ಪಣ್ಯಗಳ,ಗಮನಹರಿಸ ಬೇಕು,ನಿಮ್ಮ ಶಾಸಕರು ಸಹ ದೀನ ದಲಿತರು ಬಡವರು ತೊಂದರೆಯಲ್ಲಿರುವ ಜನರಿಗೆ ಸದಾ ಸೇವೆ ಮಾಡುತ್ತಿದ್ದಾರೆ,ಕ್ಷೇತ್ರದ ಅಭಿವೃದ್ದಿ ಬಗ್ಗೆ ಸದಾ ಚಿಂತಿಸುವ ಕೆ.ಷಡಕ್ಷರಿಯರು,ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಪಟ್ಟು ಬಿಡದೆ ಸಾಧಿಸುವ ಚಲ ಉಳ್ಳವರು ಇವರ ಸಾರ್ಮರ್ಥ್ಯಕ್ಕೆ ತಕ್ಕ ಅವಕಾಶ ದೊರೆಯಲಿ ತಿಪಟೂರು ಸೇರಿದಂತೆ ರಾಜ್ಯದಲ್ಲಿ ಜನ ಸೇವೆ ಮಾಡುವ ಅವಕಾಶ ಸಿಗಲಿ ಎಂದು ತಿಳಿಸಿದರು.

ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ, ಕೆರೆಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು,ಸುತ್ತೂರು ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮೀಜಿ ಶಾಸಕ ಕೆ.ಷಡಕ್ಷರಿ ಹುಟ್ಟು ಹಬ್ಬದ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡಿರುವ ಎನ್ ಆರ್ ಸೆಲ್ಟರ್ ಲೋಕಾರ್ಪಣೆಗೊಳಿಸಿದರು
ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬದ ಅಂಗವಾಗಿ ತಿಪಟೂರು ಕಾಂಗ್ರೇಸ್ ಪಕ್ಷದಿಂದ ಬೆಳ್ಳಿ ಗದೆ,ನೀಡಿ ಸನ್ಮಾನಿಸಿದರು, ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ.ಕೃಷ್ಣಯಾದವಾನಂದ ಮಠದ ಶ್ರೀಕೃಷ್ಣಯಾದವಾನಂದ ಮಹಾಸ್ವಾಮೀಜಿ,ಭಗೀರಥ ಉಪ್ಪಾರ ಗುರುಪೀಠದ ಶ್ರೀಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು,ಮಾಜಿ ಸಚಿವ ಟಿ.ಬಿ ಜಯಚಂದ್ರ,ಶಾಸಕರಾದ ಹೆಚ್.ಆರ್ ರಂಗನಾಥ್,ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ.ಜೆಡಿಎಸ್ ವಿರೋಧ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು.ತುಮುಲ್ ಅಧ್ಯಕ್ಷ ವೆಂಕಟೇಶ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ,ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು, ನೂರಾರು ಜನ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹಾರ ತುರಾಯಿ ಹೂಗುಚ್ಚ ಅರ್ಪಿಸಿ ಹುಟ್ಟುಹಬ್ಬದ ಶುಭಕೋರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ


