
ತಿಪಟೂರು :ನಗರದ ಹಾಸನ ಸರ್ಕಲ್ ಶಾರದ ನಗರ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಗುದ್ದಲಿಪೂಜೆ ನೆರವೇರಿಸಿದರು

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸಮಗ್ರ ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ,ಜಿಲ್ಲೆ ಅಭಿವೃದ್ದಿಹಾಗೂ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಪೂರ್ಣಗೊಳಿಸಲು ಕೇಂದ್ರ ಸರ್ಕಾರ 2ಸಾವಿರ ಕೋಟಿ ಅನುದಾನ ನೀಡಿದೆ, 2ವರ್ಷದಲ್ಲಿ 90ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ದಿ ಪಡಿಸಿ ನನ್ನ ಆರಾಧ್ಯ ದೈವ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಗುವುದು,ಜಿಲ್ಲೆಯಲ್ಲಿ ತುಮಕೂರು ಹೊರತುಪಡಿಸಿದರೆ ತಿಪಟೂರು ವೇಗವಾಗಿ ಬೆಳೆಯುತ್ತಿರುವ ತಾಲ್ಲೋಕು ತಿಪಟೂರಿನ ಜನ ನನ್ನ ಮೇಲೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅಭಿಮಾನವಿಟ್ಟು ಹೆಚ್ಚುಮತ ನೀಡುವ ಮೂಲಕ ಗೆಲುವು ನೀಡಿದ್ದೀರ ನಿಮ್ಮ ಋಣ ಎಷ್ಟು ಜನ್ಮ ಎತ್ತಿದರು ತೀರಿಸಲು ಸಾಧ್ಯವಿಲ್ಲ, ಶೀಘ್ರವಾಗಿ ಹೊನ್ನವಳ್ಳಿ ರೋಡ್ ಮೆಲ್ಸೆತುವೆ ,ಹಿಂಡಿಸ್ಕೆರೆ ರೈಲ್ವೆ ಕ್ರಾಸಿಂಗ್ ಮೇಲ್ಸೆತುವೆಕಾಮಗಾರಿ ಕೈಗೆತ್ತಿಕೊಂಡು ಕೇವಲ ಒಂದುವರೆ ವರ್ಷದಲ್ಲಿ ಜನರ ಉಪಯೋಗಕ್ಕೆ ನೀಡಲಾಗುವುದು,ತಿಪಟೂರಿಗೆ ಅಗತ್ಯವಿರುವ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಕೈಗಾರಿಕ ಸಚಿವ ಹೆಚ್.ಡಿ ಕುಮಾರಸ್ವಾಮಿಯವರಿಗೆ ಪ್ರಸ್ಥಾವನೆ ಸಲ್ಲಿಸಿ ಕೈಗಾರಿಕೆಗೆಗಳ ಸ್ಥಾಪನೆಗೆ ಕ್ರಮಕೈಗೊಳ್ಳುತ್ತೇವೆ

,ತಿಪಟೂರು -ದುದ್ದ ರೈಲ್ವೆ ಮಾರ್ಗಕ್ಕೆ ಸರ್ವೆಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ,ಬೆಂಗಳೂರು ತುಮಕೂರು ನೆಲಮಂಗಳ ರಸ್ತೆಯಲ್ಲಿ ವರ್ಷೊಂದರಲ್ಲೇ ಸುಮಾರು 290ಜನ ಅಪಘಾತದಲ್ಲಿ ಸಾವನ್ನಪ್ಪಿದರು,ನಾನು ಇದೇ ಹೈವೆಯಲ್ಲಿ ಸಂಚಾರಮಾಡುವಾಗ ಅಪಘಾತದಲ್ಲಿ ದಂಪತಿಗಳು ಸಾವನ್ನಪ್ಪಿದನ್ನ ಕಣ್ಣಾರೆ ಕಂಡು,ತಕ್ಷಣ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿ 6ಪಥದ ರಸ್ತೆ ಮಂಜೂರು ನಾಡಿಸಿದ್ದೇನೆ, ಹಾಸನ ತಿಪಟೂರು ಹಿರಿಯೂರು ಮಾರ್ಗದ ಗ್ರೀನ್ ಕಾರಿಡಾರ್ ಹೈವೆ ಯೋಜನೆ ಮಂಜೂರಾಗಿದ್ದು,ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು,ಹಾಸನ ಅರಸೀಕೆರೆ ತಿಪಟೂರು ಮೆಮೋ ರೈಲು, ಹಾಗೂ ತುಮಕೂರು ತಿಪಟೂರು ಮೆಮೋ ರೈಲು ಓಡಿಸುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಶೀಘ್ರದಲ್ಲಿ ಈ ರೈಲುಗಳು ನಿಮ್ಮ ಸೇವೆಗೆ ಲಭ್ಯವಾಗಲಿವೆ,ತಿಪಟೂರು ಶಾರದ ನಗರ ರೈಲ್ವೆ ಮೇಲ್ಸೆತುವೆ ಕಾಮಗಾರಿ 15ತಿಂಗಳಲ್ಲಿ ಪೂರ್ಣಗೊಳ್ಳಲಿದೆ,ನಮ್ಮ ಸರ್ಕಾರದಲ್ಲಿ ವೆಂಕಟ,ಸೀನನ ಲೆಕ್ಕಗಳಿಗೆ ಅವಕಾಶವಿಲ್ಲ, ಪಾರದರ್ಶಕವಾಗಿ ಯಾರುಗಣಮಟ್ಟದ ಕಾಮಗಾರಿ ನಿರ್ವಹಿಸುತ್ತಾರೊ ಅವರಿಗೆ ಬಿಲ್ ನೀಡುತ್ತೇವೆ ನಾನು ಯಾವಾಗಲೂ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ ಚುನಾವಣೆ ವೇಳೆಯಲ್ಲಿ ಮಾತ್ರ ರಾಜಕೀಯ ನಂತರ ಏನಿದರೂ ಅಭಿವೃದ್ದಿಗೆ ಮಾತ್ರ ಆಧ್ಯತೆ ನೀಡುತ್ತೇವೆ ತಿಪಟೂರು ಶಾಸಕ ಕೆ.ಷಡಕ್ಷರಿಯವರಿ ತಡವಾಗಿ ಆಹ್ವಾನ ತಲುಪಿರುವ ಬಗ್ಗೆ ಮಾಹಿತಿ ಇದ್ದು ಅವರ ಕ್ಷಮೆ ಕೋರುತ್ತೇನೆ ನಾನು ಷಡಕ್ಷರಿ ಸ್ನೆಹಿತರು ರಾಜಕೀಯವೇ ಬೇರೆ ಅಭಿವೃದ್ದಿಯ ವಿಚಾರದಲ್ಲಿ ನಾವೆಲ್ಲ ಒಂದೆಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್, ರೈಲ್ವೆ ಸಿಇಒ ಅಜಯ್ ಶರ್ಮ,ಡಿಆರ್ ಎಂ ಮಿಥಲ್,ದಿಶಾ ಸಮಿತಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ.ಸದಸ್ಯರಾದ ಆಯರಹಳ್ಳಿ ಶಂಕರಪ್ಪ ಬಿಜೆಪಿ ಮುಖಂಡ ಲೋಕೇಶ್ವರ್,ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಜಕ್ಕನಹಳ್ಳಿ ಲಿಂಗರಾಜು,ಗಂಗರಾಜು,ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ

