
ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಖಾಸಗೀ ಕಾರ್ಯಕ್ರಮಗಳಿಗೆ ಮಾಡುವಂತ್ತಿಲ್ಲ, ಎನ್ನುವ ಸ್ಪಷ್ಟವಾದ ನಿಯಮವಿದ್ದರೂ ತಿಪಟೂರು ತಾಲ್ಲೋಕಿನ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಮಾತ್ರ ಕಾನೂನಿಗೆ ಬೆಲೆಇಲ್ಲ ಎನ್ನುವಂತ್ತಾಗಿದೆ.

ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿದ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಬಿ ಬಸವರಾಜು ರಾಷ್ಟ್ರೀಯ ನಾಯಕ ಡಾ//ಬಾಬೂ ಜಗಜೀವನ್ ರಾಮ್ ಹುಟ್ಟುಹಬ್ಬದ ದಿನದಂದೆ ಅದ್ದೂರಿಯಾಗಿ ತಮ್ಮ ಹುಟ್ಟು ಹಬ್ಬವನ್ನ ಆಚರಿಸುವ ಮೂಲಕ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದ್ದಾರೆ.
ಸರ್ಕಾರಿ ಕಚೇರಿ ಕಾನೂನು ಬಾಹಿರವಾಗಿ ದುರುಪಯೋಗವಾಗುತ್ತೊದ್ದರು,ಪಿಡಿಒ ಮಾತ್ರ ಜಾಣಮೌನ ಕಂಡ ಸಾರ್ವಜನಿಕರು, ಸಾರ್ವಜನಿಕ ಕೆಲಸ ಮಾಡಬೇಕಾದ ಕಚೇರಿಯಲ್ಲಿ ಅಧ್ಯಕ್ಷರು ತಮ್ಮ ಅಭಿಮಾನಿಗಳು ಕಾಂಗ್ರೇಸ್ ಕಾರ್ಯಕರ್ತರನ್ನ ಗುಡ್ಡೆಹಾಕಿಕೊಂಡು ಕೇಕ್ ಕತ್ತರಿಸಿ, ಶಾಂಪೇನ್ ,ಹಾರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಅಧ್ಯಕ್ಷರ ಅಧಿಕಾರ ದುರುಪಯೋಗ ಹಾಗೂ ಪಿಡಿಒ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಸರ್ಕಾರ ಕೂಡಲೆ ಕ್ರಮಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ಮಾಧ್ಯಮದೊಂದಿಗೆ ಮಾಹಿತಿ ನೀಡಿದ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ಅಧ್ಯಕ್ಷರು ಹುಟ್ಟು ಹಬ್ಬ ಆಚರಿಸಿಕೊಂಡ ಬಗ್ಗೆ ದೂರುಗಳಿದ್ದು ಈ ಬಗ್ಗೆ ಪಿಡಿಒ ರವರಿಂದ ಮಾಹಿತಿ ಕೇಳಲಾಗಿದೆ, ಮಾಹಿತಿ ಬಂದ ನಂತರ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು
ವರದಿ:ಮಂಜುನಾಥ್ ಹಾಲ್ಕುರಿಕೆ

