
ತಿಪಟೂರು ವಲಯ ವ್ಯಾಪ್ತಿಯಲ್ಲಿ ವಿವಿದ ಪ್ರಕರಣದಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಸುಮಾರು 2ಲಕ್ಷ ಮೌಲ್ಯದಬಿಯರ್ ಸೇರಿ ವಿವಿಧ ಬ್ರಾಂಡ್ ನ 206.130 ಲೀಟರ್ ಮದ್ಯ ಮತ್ತು 33.260 ಲೀಟರ್
ಬಿಯರ್‌ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು.

ಮದ್ಯ ಮತ್ತು ಬಿಯರ್‌ನ್ನು ಮಾನ್ಯ
ಅಬಕಾರಿ ಉಪ ಆಯುಕ್ತರು ತುಮಕೂರು ರವರಆದೇಶಸಂಖ್ಯೆ:ಇಎಕ್ಸ್ಇ/ಸಿಆರ್ ಎಂ/03/ಭಾಗ-2/2019-20 ದಿನಾಂಕ:02/04/2025 ಈ ಕಛೇರಿಯಸ್ವೀಕೃತ ದಿನಾಂಕ: 04/04/2025 ರ ಆದೇಶದಂತೆ ತಿಪಟೂರು ತಹಶೀಲ್ದಾರ್ ಪವನ್ ಕುಮಾರ್ ಸಮ್ಮುಖದಲ್ಲಿ ಅಬ್ಕಾರಿ ಉಪ ಅಧೀಕ್ಷಕರಾದ ಜಿ.ವಿ ವಿಜಯ್ ಕುಮಾರ್ ,ವೃತ್ತ ನಿರೀಕ್ಷಕರಾದ ಆರ್ ,ಎನ್ ವನಜಾಕ್ಷಿ, ಸರ್ಕಲ್ ಇನ್ಪೆಕ್ಟರ್ ಹೆಚ್.ಎಸ್ ಮಂಜುನಾಥ್,ಟಿ.ಪಿ ನಂಜುಂಡಸ್ವಾಮಿ, ಮತ್ತು ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕರ ಸಮ್ಮುಖದಲ್ಲಿ ಮದ್ಯನಾಶಪಡಿಸಲಾಯಿತು, ಸಿಬ್ಬಂದಿಗಳಾದ ಕೆ.ಮಂಜುನಾಥ್,ಅಬ್ಕಾರಿ ಮುಖ್ಯ ಪೇದೆಗಳಾದ ಪ್ರಸನ್ನ,ಶಿವಶಂಕರಯ್ಯ,ವೀಣಾ ,ರಾಜೇಶ್ವರಿ,ರೇವಣ್ಣ,ಯತೀಶ್,ಮುಸ್ತಾಕ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ


