
ತಿಪಟೂರು – ತಾಲೂಕಿನ ಕರಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭವಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಸಹಕಾರ ಸಂಘದಲ್ಲಿ ಕೇಕ್ ಕತ್ತರಿಸಿ ವಾರ್ಷಿಕೋತ್ಸವದ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಕೆ ಆರ್ ದೇವರಾಜು ಹಾಗೂ ಸದಸ್ಯರುಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದರು,

ಸಂಘದ ಅಧ್ಯಕ್ಷ ಕೆ.ಆರ್ ದೇವರಾಜು ಮಾತನಾಡಿ ನಮ್ಮ ಸಹಕಾರ ಸಂಘ ಹಲವಾರು ಏಳುಬೀಳುಗಳ ನಡುವೆಯೂ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿದೆ,ಎಲ್ಲಾ ಸದಸ್ಯರು ,ಹಾಲು ಪೂರೈಕೆದಾರರ ನೆರವಿನಿಂದ ಒಂದು ವರ್ಷ ಪೂರೈಸಿರುವುದು ಶ್ಲಾಘನೀಯ, ಹಾಲು ಉತ್ಪಾದಕರಿಗೆ ಹಾಲಿನ ದರ 4 ರೂ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಸಹಕಾರ ಸಚಿವರಾದ ಕೆಎನ್ ರಾಜಣ್ಣನವರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷರಾದ ಕೆ.ಜಿ ರಂಗಸ್ವಾಮಿ, ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷರಾದ ನ್ಯಾಕೆನಹಳ್ಳಿ ವೀರಣ್ಣ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ರಾಜಮ್ಮ ಪುಟ್ಟಮಲ್ಲ ಚಾರ್, ಹುಚ್ಚಮ್ಮ ದಿನೇಶರಾಧ್ಯ, ದಯಾನಂದ್, ಉಮೇಶ್ ಸೇರಿದಂತೆ ಹಾಲು ಉತ್ಪಾದಕರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.


