
: ತಾಲ್ಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಮೂರು ದಿನಗಳ ಕಾಲ ನಡೆದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿಹಾಗೂ ಕರಿಬಸವ ಸ್ವಾಮಿಗಳ 232 ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳವರ 17 ನೇ ವರ್ಷದ ಪುಣ್ಯಾರಾಧನೆ, ಕಾಡಸಿದ್ದೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ, ಕಾಡಸಿದ್ದೇಶ್ವರ ಸ್ವಾಮಿಯ ರಥೋತ್ಸವ ಮಕ್ಕಳ ವಿದ್ಯಾಯಜ್ಞ ಸಂಕಲ್ಪ ಕಾರ್ಯಕ್ರಮ, ಲಿಂಗದೀಕ್ಷೆ, ವೈಭವದಿಂದ ಅದ್ದೂರಿಯಾಗಿ ನಡೆದವು,

ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸದ ಭಾನುವಾರ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮನುಷ್ಯ ಜೀವನ ಸಾಕ್ಷಾತ್ಕಾರಕ್ಕೆ ಗುರಿ ಗುರುವಿನ ಮಾರ್ಗದರ್ಶನ ಮುಖ್ಯ,ಗುರುತೋರಿದ ದಾರಿಯಲ್ಲಿ ನಡೆದರೆ,ಜೀವನ ಸುಖಮಯವಾಗುತ್ತದೆ,ಭ್ರಮೆಯಲ್ಲಿ ಬದುಕುವ ಮನುಷ್ಯ,ನಾವು ಎಷ್ಟು ಆಸ್ತಿ ಮಾಡುತ್ತಿದ್ದೇವೆ ಎಂದು ಲೆಕ್ಕ ಹಾಕುತ್ತಿದ್ದರೆ ದೇವರು ನಮ್ಮ ಆಯಸ್ಸು ಎಷ್ಟು ಕಡಿಮೆಯಾಯಿತು ಎಂದು ಲೆಕ್ಕ ಹಾಕುತ್ತಿರುತ್ತಾನೆ ಯಾವಗಲೂ ಭಗವಂತ ಕೆಟ್ಟವರಿಗೆ ಅನುಗ್ರಹಿಸುವುದಿಲ್ಲ. ಆದ್ದರಿಂದ ನಾವು ಯಾವಾಗಲೂ ಒಳ್ಳೆಯದನ್ನೇ ಮಾಡಬೇಕು. ನಂಬಿದ ದೇವರು ನಮಗೆ ಯಾವುದೇ ರೂಪದಲ್ಲಿಯಾದರೂ ಸಹಾಯ ಮಾಡುತ್ತಾನೆ,ಅಜ್ಜಯ್ಯನ ಕೃಪೆ ದೊರೆತರೆ ಭಕ್ತರ ಜೀವನ ಸುಖಮಯವಾಗುತ್ತದೆ,ನನ್ನ ಜೀವನ ಪ್ರತಿ ತಿರುವಿನಲ್ಲೂ ಅಜ್ಜಯ್ಯನ ಕೃಪೆಯಿದೆ
ನಾವು ಇಲ್ಲಿಗೆ ಸಂಸದರಾಗಿ ಶಾಸಕರಾಗಿ ಬಂದಿಲ್ಲ. ಮಠದ ಭಕ್ತರಾಗಿ ಬಂದಿದ್ದೇವೆ. ಗುರುಗಳ ಹಾಗೂ ದೇವರ ಅನುಗ್ರಹದಿಂದ ನಾವು ಸಾಧನೆ ಮಾಡಿದ್ದೇವೆ ಅಷ್ಟೆ. ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಮೂಲಕ ನನಗೆ ಮಠದ ಪರಿಚಯವಾಯಿತು. ಮಠದ ಭಕ್ತನಾಗಿ ಸಂಪೂರ್ಣವಾಗಿ ಅಜ್ಜೇಯನಿಗೆ ಶರಣಾದ ಮೇಲೆಯೇ ನನಗೆ ಒಳ್ಳೆಯದಾಗಿದೆ. ಎರಡು ಬಾರಿ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾದೆ. ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ನನಗೆ ಒಳ್ಳೆಯದೇ ಆಯಿತು ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ ಶ್ರೀಕ್ಷೇತ್ರ ಇಷ್ಟು ವಿಶಾಲವಾಗಿ ಬೆಳೆಯುತ್ತದೆ ಎಂದು ಎಣಿಸಿರಲಿಲ್ಲ. ಅಜ್ಜಯ್ಯನ ಶಕ್ತಿ ಅಪಾರ. ನನಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಯಿತು. ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆದು ಬಂದದ್ದರಿದ ಕಾಯಕಶಕ್ತಿಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಬಾರಿ ನನ್ನ ಕ್ಷೇತ್ರಕ್ಕೆ ಜಿಲ್ಲೆಯಾಗಲು ಬೇಕಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಸಂಕಲ್ಪ ಹಾಗೂ ಗುರಿಯಾಗಿದೆ.ಅಜ್ಜಯ್ಯ ಕೃಪೆನನ್ನ ಮೇಲೆ ಇನ್ನೂ ಆಗಿಲ್ಲ,ಕಳೆದ ಭಾರೀ ಶಾಸಕನಾಗಿದ್ದ ಅವಧಿಯಲ್ಲಿ ಸಚಿವನಾಗುವ ಅವಕಾಶ ಸ್ಪಲ್ಪದರಲ್ಲಿ ವಂಚಿತನಾದೆ,ಈ ಭಾರೀ ಅಜ್ಜಯ್ಯ ಕೃಪೆಮಾಡಿದರೆ ಸಚಿವನಾಗುತ್ತೇನೆ ಎಂದ ಅವರು ಇಡೀ ತಾಲೂಕಿನ ಪ್ರತಿ ಮನೆಗೂ ಕುಡಿಯುವ ನೀರನ್ನು ಕೊಡುವ ಯೋಜನೆ ಮಾಡಿದ್ದೇನೆ ಗ್ರಾಮೀಣ ಪ್ರದೇಶಕ್ಕೆ ಗನೀಘಡದಿಂದ ನೀರು ತರಲು ಯೋಜನೆ ರೂಪಿಸಿದ್ದೇನೆ,ತಿಪಟೂರು ನಗರಕ್ಕೆ ನೀರಿನ ತೀವ್ರತೊಂದರೆಯಾಗಿದೆ,ಯಾವುದ್ದಾದರೂ ಶಾಶ್ವತ ನೀರಿನ ಮೂಲದಿಂದ ನೀರು ಕೊಡಲು ಯೋಜನೆ ರೂಪಿಸಿದ್ದು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು
ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರಸ್ವಾಮಿಗಳು ಮಾತನಾಡಿ ಮಠಕ್ಕೆ 800 ವರ್ಷಗಳ ಇತಿಹಾಸವಿದೆ. ಆಗಿನಿಂದ ಈವರೆಗೆ 19ಪೂಜ್ಯರ ತಪಸ್ಸಿನ ಫಲ ಹಾಗೂ ಈಗಿನ ಶ್ರೀಗಳ ಮಾರ್ಗದರ್ಶನದಿಂದ ನಮ್ಮ ಮಠ ಬೆಳೆದಿದೆ. ಶ್ರೀಮಠವು ಅನ್ನ-ಅರಿವು-ಅಭಯದಾನ ಆರೋಗ್ಯದ ಸತ್ಸಂಕಲ್ಪ ಹಾಗೂ ಶ್ರೀಗಳ ಆಶೀರ್ವಾದದ ಬಲದಿಂದ ನಡೆಯುತ್ತಿದ್ದು ಎಲ್ಲ ಜಾತಿ, ಧರ್ಮದವರೂ ಇಲ್ಲಿ ಬಂದು ಸೇವೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಾವು ಆಚಾರ-ವಿಚಾರ-ಸಂಸ್ಕಾರಗಳನ್ನು ಪಾಲಿಸಿದರೆ ಮಕ್ಕಳು ಅದನ್ನು ಕಲಿಯುತ್ತಾರೆ. ಮಕ್ಕಳಿಗೆ ತಿಳಿಹೇಳಬೇಕೆಂದರೆ ನಾವು ಮೊದಲು ಸರಿಯಾಗಿರಬೇಕು ಎಂದರು.

ಮಹಾರಾಷ್ಟçದ ಪಾನಮಂಗಳೂರು ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಾನು ಕಾಡಸಿದ್ದೇಶ್ವರಮಠದಲ್ಲಿ 18ವರ್ಷ ಸೇವೆ ಸಲ್ಲಿಸಿ ನಂತರ ಮಹಾರಾಷ್ಟçಕ್ಕೆ ಹೋಗಿದ್ದೇನೆ. ಇಲ್ಲಿಯ ಶ್ರೀಗಳ ಪವಾಡಗಳನ್ನು ಎಣಿಸಲಾಗಲ್ಲ. ಶ್ರೀಗಳು 101ದಿನದ ಅನುಷ್ಠಾನದ ಕಠಿಣವ್ರತ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿಯ ಶ್ರೀಗಳ ಮಂತ್ರಾಕ್ಷತೆಯ ಫಲ ಹಾಗೂ ಅನುಗ್ರಹದಿಂದ ನಮ್ಮ ಮಠ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಡಸಿದ್ದೇಶ್ವರ ಮಠದಲ್ಲಿ ಸಾಕ್ಷಾತ್ ಮಾತನಾಡುವ ಅಜ್ಜೇಯನ ಸ್ವರೂಪವಾಗಿ ಶ್ರೀಗಳು ಇದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಜನರಿಗೆ ಸನ್ಮಾರ್ಗ ತೋರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಬದುಕಿನ ಜ್ಞಾನ ನಮಗಿಲ್ಲಿ ದೊರೆಯುತ್ತದೆ. ಶರೀರ, ಸಂಪತ್ತು ಶಾಶ್ವತವಲ್ಲ. ದಿನಕಳೆದಂತೆಲ್ಲಾ ಮೃತ್ಯು ನಮಗೆ ಹತ್ತಿರವಾಗುತ್ತಿರುತ್ತಾನೆ. ಆದ್ದರಿಂದ ನಾವು ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂದರು.
ಕಾರ್ಯಕ್ರಮವು ಮಠದ ಪೀಠಾಧ್ಯಕ್ಷರಾದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೇರವೇರಿತು. ತೆವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಅರಸೀಕೆರೆ ತಾ ಬೂದಿಹಾಳ್ ಮಠದ ಶಶಿಶೇಖರ ಸಿದ್ದಬಸವ ಮಹಾಸ್ವಾಮಿ, ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮಿಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ತುರುವೇಕೆರೆ ಶಾಖಾಮಠದ ಗುರುಚನ್ನಬಸವಯ್ಯ, ಡಾ.ಹಿರೇಮಠ್, ವಿಶ್ವ ಕಲ್ಯಾಣ ಟ್ರಸ್ಟ್ನ ಜಯಣ್ಣ, ಶಂಭುಗೌಡರು, ಶ್ರೀಮಠದ ಮೇನೇಜರ್ ಶಂಭು, ಉಮೇಶಣ್ಣ, ಲೋಕೇಶ್ ಸೇರಿದಂತೆ ಹಲವಾರು ಸ್ವಾಮೀಜಿ, ರಾಜಕಾರಣಿಗಳು ಅಧಿಕಾರಿಗಳು ಭೇಟಿ ನೀಡಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ