
ತಿಪಟೂರು : ಅನ್ಯ ವರ್ಗದ ಹಾಗೂ ಧರ್ಮದ ಧಾರ್ಮೀಕ ನಂಬಿಕೆಗಳಿಗೆ ಧಕ್ಕೆ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೆ ಮಾಡುತ್ತಿದ್ದು ಅನ್ಯಕೋಮಿನ ವ್ಯಕ್ತಿಯನ್ನು ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ,
ನಗರದ ಗಾಂಧೀನಗರ ನಿವಾಸಿ ಉಮರ್ ಫಾರಕ್ (41) ಲಾರಿ ಚಾಲಕನಾಗಿದ್ದು ಫೇಸ್‌ಬುಕ್‌ನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಲಾಗುತ್ತಿದ್ದು ಹಾಗೂ ವಿಕೃತ್ತಿಯನ್ನು ಮೆರೆದಿದ್ದು ಅನ್ಯ ಧರ್ಮಗಳ ಬಗ್ಗೆ ವಿರೋಧಿ ಗುಂಪುಗಳನ್ನು ರಚನೆ ಮಾಡಿರುವುದನ್ನು ಗಮನಿಸಿದ ಪೋಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಾಲಿಸಿಕೊಂಡು ಬಿಎನ್‌ಎಸ್ ರೀತ್ಯಾ ಕಲಂ 299ರಲ್ಲಿ ಬಂಧಿಸಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ