
ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಹೊನಲು ಬೆಳಕಿನ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ರಣರೋಚಕವಾಗಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಕೇರಳ ಪೊಲೀಸ್ ಪುರುಷ ಹಾಗೂ ಮಹಿಳಾ ತಂಡಗಳು ತಿಪಟೂರು ಕಪ್ ಚಾಂಪಿಯನ್ಸ್ ಪಟ್ಟಮುಡಿಗೇರಿಸಿಕೊಂಡಿವೆ.

ತಿಪಟೂರು ಕ್ರೀಡಾಂಗಣದ ನಡೆದ ಮಹಿಳೆಯರ ವಿಭಾಗದ ಫೈನಲ್ ಪಂದ್ಯಾವಳಿಯಲ್ಲಿ ಕೇರಳ ಪೊಲೀಸ್ ಹಾಗೂ ಸೌತ್ ವೆಸ್ಟ್ರನ್ ರೈಲ್ವೇಸ್ ನಡುವೆ ರೋಚಕ ಹಣಹಣಿ ನಡೆದು ಕೇರಳ ಪೊಲೀಸ್ ಮಹಿಳಾ ತಂಡ ಜಯಗಳಿಸುವ ಮೂಲಕ ಟ್ರೋಫಿ ಮುಡಿಗೇರಿಕೊಂಡರೆ, ಸೌತ್ ವೆಸ್ಟ್ರನ್ ರೈಲ್ವೇಸ್ ಮಹಿಳಾ ತಂಡ 2 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ಪುರುಷರ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಸ್ಪಂದನಾ ಕರ್ನಾಟಕ ಹಾಗೂ ಕೇರಳ ಪೊಲೀಸ್ ತಂಡಗಳ ನಡುವೆ ನಡೆದ ರಣರೋಚಕ ಹಣಹಣಿಯಲ್ಲಿ ಕೇರಳ ಪೊಲೀಸ್ ತಂಡ ಜಯಗಳಿಸುವ ಮೂಲಕ ಟ್ರೋಫಿ ಮುಡಿಗೇರಿಕೊಂಡಿತು.ಸ್ಪಂದನಾ ಕರ್ನಾಟಕ 2ನೇ ಸ್ಥಾನ ಪಡೆಯಿತು,
ವಿಜೇತ ತಂಡಗಳಿಗೆ ಕರ್ನಾಟಕ ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಚೇತನ್ ಹಾಗೂ ಶಾಸಕ ಕೆ.ಷಡಕ್ಷರಿ,ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ತಿಪಟೂರಿನಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾರ್ವಜನಿಕರು ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ, ಸ್ಪಂದನಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನ ಉತ್ತಮವಾಗಿ ಆಯೋಜನೆ ಮಾಡಿದೆ,ತಿಪಟೂರಿನಲ್ಲಿ ಇನ್ನೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟಗಳು ನಡೆಯಲಿ ಆ ಮೂಲಕ ನಮ್ಮ ಯುವಕರು ಹಾಗೂ ಮಕ್ಕಳಿಗೆ ಕ್ರೀಡಾಸ್ಪೂರ್ತಿ ದೊರೆಯಲಿ, ತಿಪಟೂರು ಕಲ್ಪತರು ಕ್ರೀಡಾಂಗಣ ದ ಅಭಿವೃದ್ದಿಗೆ ಆಧ್ಯತೆ ನೀಡಬೇಕಿದ್ದು, ಒಳಾಂಗಣ ಕ್ರೀಡಾಗಣಕ್ಕೆ 3ಕೋಟಿ ಹಣ ಮುಂಜೂರಾಗಿದ್ದು ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುವುದು, ನೆನೆಗುದಿಗೆ ಬಿದ್ದಿತುವ ವಾಲಿಬಾಲ್ ,ಕ್ರೀಡಾಂಗಣ,ಸೇರಿದಂತೆ ಇತರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಕರ್ನಾಟಕ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ನಮ್ಮ ಊರಿನವರಾಗಿದ್ದು ತಮ್ಮ ಅಧಿಕಾರ ಅವಧಿಯಲ್ಲಿ ತಿಪಟೂರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿ ಎಂದು ತಿಳಿಸಿದರು
ಕರ್ನಾಟಕ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಮಾತನಾಡಿ ತಿಪಟೂರು ಯಾವಾಗಲೂ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ,ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯಿಂದ ಆಟವಾಡಿ,ನಮ್ಮ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ//ಶ್ರೀಧರ್ ಡಾ//ವಿವೇಚನ್, ಯುವಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ,ಪಲ್ಲೆಂದ ವಿಜಯ್ ಕುಮಾರ್,ಮಾಜಿ ನಗರಸಭಾ ಉಪಾಧ್ಯಕ್ಷ ಶಿವಪ್ರಸಾದ್, ಒಹಿಲಾ ಗಂಗಾಧರ್,ಲಾಯರ್ ನಂದಕುಮಾರ್,ಸೇರಿದಂತೆ ಅನೇಕರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ