
ತಿಪಟೂರು : ಚುನಾವಣೆಯ ಮತದಾರದ ಪಟ್ಟಿಯಲ್ಲಿ ಹೆಸರನ್ನು ವಜಾಗೊಳಿಸಿರುವ ಹಿನ್ನಲೆಯಲ್ಲಿ ಷೇರುದಾರರು ಹಾಗೂ ಕಾರ್ಯದರ್ಶಿ ಮಧ್ಯೆ ಗಲಾಟೆ ಗದ್ದಲ ನಡೆದ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಮಡೆನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದಿದೆ.ಸಂಘದ ಆಡಳಿತ ಮಂಡಳಿಯ ಚುನಾವಣೆಗಾಗಿ ಫೆ ೧೩ರಿಂದ ಚುನಾವಣಾ ಪ್ರಕ್ರೀಯೆಯು ನಡೆಯುತ್ತಿದ್ದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ಹೋದ ಸಂದರ್ಭದಲ್ಲಿ ಷೇರುದಾರರಾದ ರಘುವೀರ್, ಸತೀಶ್ ಇನ್ನೂ ಮುಂತಾದವರ ಹೆಸರುಗಳನ್ನು ಚುನಾವಣೆಯ ಮತದಾರ ಪಟ್ಟಿಯಿಂದ ಹೆಸರನ್ನು ಹೊರತೆಗೆದ ಹಿನ್ನಲೆಯಲ್ಲಿ ಕಾರ್ಯದರ್ಶಿ ಹಾಗೂ ಷೇರುದಾರರ ಮಧ್ಯೆ ವಾಗ್ವಾದ, ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಕಾರಣವಾಯಿತು.ಷೇರುದಾರ ರಘುವೀರ್ ಮಾತನಾಡಿ ಸಂಘದಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದು ನಾಲ್ಕು ವಾರ್ಷಿಕ ಸಬೆಗೆ ಸಹಿ ಮಾಡಿರುತ್ತೇನೆ ಆದರೂ ಚುನಾವಣಾ ಮತದಾರ ಪಟ್ಟಿಯಿಂದ ಹೆಸರನ್ನು ತೆಗೆಯಲಾಗಿದೆ. ಇದರಿಂದ ನಾವುಗಳು ಚುನಾವಣಾ ಪ್ರಕ್ರೀಯೆಯಲ್ಲಿ ಭಾಗಿಯಾಗಲು ಸಾದ್ಯವಾಗುತ್ತಿಲ್ಲ ಹಾಗೂ ಮತದಾನ ಮಾಡಲು ಸಾದ್ಯವಾಗುತ್ತಿಲ್ಲ ಇದನ್ನು ಪ್ರಶ್ನಿಸಿದರೆ ನಮ್ಮಲ್ಲಿ ಕಾರ್ಯದರ್ಶಿಯು ಹಾಗೂ ಆಡಳಿತ ಮಂಡಳಿಯ ಸದಸ್ಯರು ದೌರ್ಜನ್ಯ ಮಾಡುತ್ತಿದ್ದಾರೆ ಈಗಾಗಲೇ ನಾವುಗಳು ಸಹಕಾರ ಸಂಘಗಳ ನಿಭಂದಕರಿಗೂ ಸಹ ದೂರು ಸಲ್ಲಿಸಲಾಗಿದೆ ಎಂದರು.ಗ್ರಾಮಸ್ಥ ನವೀನ ಮಾತನಾಡಿ ಕಳೆದ ೧೦ ವರ್ಷಗಳಿಂದ ಸಂಘದ ಸದಸ್ಯತ್ವವನ್ನು ಪಡೆಯಲು ಅಂಗಲಾಚುತ್ತಿದ್ದು ನಮ್ಮಿಂದ ಪಹಣಿ, ಆಧಾರ್ ಕಾರ್ಡ್, ಪೋಟೋಗಳನ್ನು ಮೂರು ಬಾರಿ ನೀಡಿದ್ದು ಸದಸ್ಯತ್ವದ ಹಣವನ್ನು ಸಹ ನೀಡಿದದ್ದರೂ ಇಲ್ಲಿಯವರೆಗೂ ಸಹ ನಮ್ಮ ಸದಸ್ಯತ್ವವನ್ನು ನೀಡಲು ನಿರಾಕರಿಸುತ್ತಿದ್ದಾರೆ ನ್ಯಾಯ ಸಮ್ಮತವಾಗಿ ಕೇಳಿದರೆ ನಾಳೆ ಎಂಬುವ ಮಾತುಗಳನ್ನು ನೀಡುತ್ತಾ ಉದಾಸೀನ ಮಾಡುತ್ತಿದ್ದ ನಾವುಗಳು ರೈತರಾಗಿದ್ದು ಪಹಣಿದಾರರಾಗಿದ್ದರೂ ನಮ್ಮಸಂಘದಲ್ಲಿ ಷೇರು ಪಡೆಯಲು ಸಾಧ್ಯವಾಗದಂತಹ ಸ್ಥಿತಿಯನ್ನು ಉಂಟು ಮಾಡಿದ್ದಾರೆ ಇದೇ ರೀತಿಯಲ್ಲಿ ಇನ್ನೂ ಹಲವಾರು ಗ್ರಾಮಸ್ಥರು ಸಂಘದಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದರು.
ವರದಿ: ಸಂತೋಷ್ ಓಬಳ. ಗುಬ್ಬಿ