
ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಫಲಾನುಭವಿಗಳಿಗೆ ಪಂಪು ಮೋಟರ್ ಹಾಗೂ ಪರಿಕರಗಳನ್ನ ಶಾಸಕ ಕೆ.ಷಡಕ್ಷರಿ ವಿತರಣೆ ಮಾಡಿದರು

ಪಂಪ್ ಸೇಟ್ ಪರಿಕರಗಳನ್ನ ವಿತರಣೆ ಮಾಡಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಸರ್ಕಾರ ಹಲವಾರು ಯೋಜನೆಗಳನ್ನ ರೂಪಿಸಿದೆ, ಸರ್ಕಾರದ ಯೋಜನೆಗಳನ್ನ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು,ಸರ್ಕಾರದ ಯೋಜನೆಗಳು ಸದ್ಬಳಕೆಯಾದಾಗ ಮಾತ್ರ, ಸರ್ಕಾರದ ಉದೇಶ ಸಾರ್ಥಕವಾಗುತ್ತದೆ. ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದಿಂದ 2021 -22ನೇ ಸಾಲಿನ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ,ಪ್ರಕರಣ ಕೋರ್ಟ್ ನಲ್ಲಿ ಇದ್ದಕಾರಣಸವಲತ್ತು ವಿತರಣೆ ಸಾಧ್ಯವಾಗಿರಲ್ಲಿಲ್ಲ ಕೋರ್ಟ್ ಪ್ರಕರಣ ವಿತ್ಯಾರ್ಥವಾದ ಕಾರಣ,ಪಂಪು ಮೋಟರ್ ಪರಿಕರಗಳ ವಿತರಣೆ ಮಾಡಲಾಗಿದೆ, ಫಲಾನುಭವಿಗಳ ಯೋಜನೆ ಸದ್ಬಳಕೆ,ಮಾಡಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಫಿಲ್ಡ್ ಆಫಿಸರ್,ರಾಜಶೇಖರ್,ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ,ಡಿಎಸ್ಎಸ್ ಪೆದ್ದಿಹಳ್ಳಿ ನರಸಿಂಹಯ್ಯ,ಹರೀಶ್ ಗೌಡ,ಶಿವಕುಮಾರ್ ರಮೇಶ್ ಸೇರಿದಂತೆ ಯೋಜನೆಫಲಾನುಭವಿಗಳು ಉಪಸ್ಥಿತರು.
ವರದಿ :ಮಂಜುನಾಥ್ ಹಾಲ್ಕುರಿಕೆ