
ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಹಾಗೂ ಯಶಸ್ವಿನಿ ವೃದ್ದಾಶ್ರಮ ಮತ್ತು ಶ್ರೀ ಶಾರದ ವೃದ್ದಾಶ್ರಮದ ವೃದ್ದರಿಗೆ ಹಾಲು ಹಣ್ಣು ಹಾಗೂ ಬ್ರೇಡ್ ವಿತರಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು
ಸಾರ್ವಜನಿಕ ಆಸ್ಪತ್ರೆ ಆವರಣ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ಸಂತ ಸೇವಾಲಾಲ್ ಮಹಾರಾಜರು ಕಡುಬಡತನದಲ್ಲಿ ಇದ್ದ ಲಂಬಾಣಿ ಸಮಾಜಕ್ಕೆ ಸನ್ಮಾರ್ಗದ ದಾರಿ ತೋರಿದ ಮಹಾಗುರು, ದೇಶದ ಹಲವಾರು ಭಾಗಗಳಲ್ಲಿ ಹಂಚಿಹೋಗಿರುವ ಲಂಬಾಣಿ ಜನಾಂಗ ಶಿಕ್ಷಣದ ಮಾರ್ಗನೀಡಿದರು, ಡಾ//ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿಪ್ರತಿಯೊಂದು ಜನಾಂಗಕ್ಕೂ ಸಮಾನವಾಗಿ ಬದುಕುವ ಹಕ್ಕು ನೀಡಿದ್ದಾರೆ,ಎಲ್ಲಾರೂ ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು ಎಂದು ತಿಳಿಸಿದರು

ನಿವೃತ್ತ ಶಿಕ್ಷಕರಾದ ಸೋಮಶೇಖರ್ ಮಡೇನೂರು ಮಾತನಾಡಿ ಸಂತಸೇವಾಲಾಲ್ ದೇವಮಾನವರಾಗಿ ಸಮಾಜಕ್ಕೆ ದಾರಿ ತೋರಿದ್ದಾರೆ,ಗುರಿಇಲ್ಲದ ಜನಾಂಗಕ್ಕೆ ಗುರುವಾಗಿ ದಾರಿತೋರಿದರು ತಮ್ಮ ತತ್ವ ಚಿಂತನೆ ಸರ್ವ ಸಮಾಜದ ಅಭ್ಯದಯಕ್ಕೆ ದಾರಿಯಾಗಿದ್ದು, ಲಂಬಾಣಿ ಸಮಾಜ ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿಯಲ್ಲಿ ಬದುಕಬೇಕು ಎಂದು ತಿಳಿಸಿದರು
ತಾಲ್ಲೋಕು ಲಂಬಾಣಿ ಸಮಾಜದ ಅಧ್ಯಕ್ಷ ಬಿ.ಟಿ ಕುಮಾರ್ ಮಾತನಾಡಿ ಲಂಬಾಣಿ ಸಮಾಜದ ಗುರುಗಳಾದ ಸಂತ ಸೇವಾಲಾಲ್ ಮಹಾರಾಜರು ತಮ್ಮ ಚಿಕ್ಕ ವಯಸ್ಸಿನಲ್ಲಿ ದೇಶಪರ್ಯಟನೆ ಮಾಡಿ ಸಮಾಜ ಉಪದೇಶ ನೀಡಿ ಸಮಾಜದ ಸನ್ಮಾರ್ಗಕ್ಕೆ ದಾರಿಯಾಗಿದ್ದಾರೆ ಎಲ್ಲರೂ ಸೇವಾಲಾಲ್ ಜೀ ರವರ ದಾರಿಯಲ್ಲಿ ನಡೆಯೋಣ ಸಮಾಜವನ್ನ ಕಟ್ಟಿಬೆಳೆಸೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾಗರಾಜು. ಡಿಎಸ್ಎಸ್ ಮುಖಂಡರಾದ ಹರೀಶ್ ಗೌಡ ರಾಜುಬೆಣ್ಣೆನಹಳ್ಳಿ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಸ್ವಾಮಿ.ಡಾ//ರಕ್ಷಿತ್ ಗೌಡ.ಡ//ಶಂಕರಪ್ಪ ಬಳೆಕಟ್ಟೆ,ಜೇಮ್ಸ್ ಫೌಡೇಷನ್ ಅಧ್ಯಕ್ಷ ತರಕಾರಿ ಗಂಗಾಧರ್ ಮುಂತ್ತಾದವರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ