
ರಾತ್ರಿವೇಳೆ ರೈತರ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ತಿಪಟೂರು ತೋಟದ ಮನೆ ರೈತರ ಹಿತರಕ್ಷಣಾ ಸಮಿತಿ ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು

ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಬೆಸ್ಕಾಂ ಇಲಾಖೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಮುಖಂಡ ಮಡೇನೂರು ವಿನಯ್ ,ರಾತ್ರಿವೇಳೆ ಬೆಸ್ಕಾಂ ಇಲಾಖೆ ವಿದ್ಯುತ್ ನಿಲುಗಡೆ ಮಾಡುವುದರಿಂದ,ರೈತರ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ,ರಾತ್ರಿವೇಳೆ ಕರೆಂಟ್ ತೆಗೆಯುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ,ಹಳ್ಳಿಗಳಲ್ಲಿ ರಾತ್ರಿವೇಳೆ ಚಿರತೆಕಾಟ ಹೆಚ್ಚಾಗಿದ್ದು ರಾತ್ರಿವೇಳೆ ತೋಟದಮನೆಗಳಲ್ಲಿ ವಾಸಮಾಡುವ ಜನರು ಜೀವಭಯದಲ್ಲಿ ಕಾಲಕಳೆಯಬೇಕು,ಈ ಹಿಂದೆ ತೋಟದ ಮನೆಗಳಿಗೆ ಕರಂಟ್ ನೀಡುತ್ತಿದ್ದಂತೆ ಮುಂದುವರೆಸಬೇಕು ನಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತಮುಖಂಡ ಜಯ ಶರ್ಮ ಮಾತನಾಡಿ ಬೆಸ್ಕಾಂ ಇಲಾಖೆ ರಾತ್ರಿವೇಳೆ ಕರಂಟ್ ತೆಗೆಯುವ ಮೂಲಕ ತೊಂದರೆ ನೀಡುತ್ತಿದೆ ನೂರಾರು ವರ್ಷಗಳಿಂದ ನಮ್ಮ ಹಿರಿಯರು ಬೆಳೆಸಿರುವ, ತೆಂಗಿನ ಮರಗಳು ವಿದ್ಯುತ್ ಸಮಸ್ಯೆಯಿಂದ ನೀರಿನ ಸಮಸ್ಯೆಯಾಗಿ ತೋಟಗಳು ಸೊರಗುತ್ತಿವೆ, ವೋಲ್ಟ್ ಜ್ ಸಮಸ್ಯೆಯ ಕಾರಣಕ್ಕೆ ಲಕ್ಷಾಂತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದಾರೆ,ರಾತ್ರಿವೇಳ ತೋಟದ ಮನೆಗಳಿಗೆ ಕರಂಟ್ ಇಲ್ಲದೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ,ಸರ್ಕಾರ ತೋಟದ ಮನೆಗಳಿಗೆ ವಿದ್ಯುತ್ ಸಮಸ್ಯೆಮಾಡದಂತೆ ನಿರ್ದೇಶನವಿದ್ದರು,ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ಕೂಡಲೇ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು
ಸರ್ಕಾರದ ನಿರ್ದೇಶನದಂತೆ ವಿದ್ಯುತ್ ನೀಡಲು ಅಧಿಕಾರಿಗಳು ಒಪ್ಪಿಗೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ