
ತಿಪಟೂರು ತಾಲ್ಲೋಕಿನ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಪವಾಡ ಶಕ್ತಿಪೀಠ ಹಾಗೂ ಶ್ರೀಕಾಳಿರುದ್ರಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ರೇಣುಕಾ ಗುರೂಜಿ ಸ್ವಾಮೀಜಿಗಳು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳುತ್ತಿರುವ ಹಿನ್ನೆಲೆ ಮಠದ ಭಕ್ತ ಸಮೂಹದಿಂದ ಅದ್ದೂರಿಯಾಗಿ ಭೀಳ್ಕೋಡುಗೆ ನೀಡಲಾಯಿತು,

ಶ್ರೀಶ್ರೀ ರೇಣುಕಾ ಗುರೂಜಿ ಸ್ವಾಮೀಜಿ ಮಾತನಾಡಿ ಹಿಂದೂ ಧರ್ಮ ಪವಿತ್ರಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಪ್ರಯಾಗ್ ರಾಜ್ ಮಹಾಕುಂಭಮೇಳದ ಶಾಹಿಸ್ನಾನ ಹಾಗೂ ಪುಣ್ಯ ಸ್ನಾನಗಳಿಗೆ, ವಿಶೇಷ ಸ್ಥಾನಮಾನವಿದ್ದು,ಗಂಗ,ಯಮುನ ಸರಸ್ಪತಿ ನದಿಗಳ ಸಂಗಮ ಭೂಮಿ,ಮಹಾನ್ ಸಾಧು ಸಂತರು,ಪುಣ್ಯಪುರುಷರು ಸಿದ್ದಿಗೈದ ಪುಣ್ಯಭೂಮಿಯಲ್ಲಿ, ಸ್ನಾನಮಾಡುವುದೇ ಪುಣ್ಯದ ಕಾರ್ಯವಾಗಿದ್ದು, ಕಲ್ಪತರು ನಾಡಿನ ಶ್ರೇಯಸ್ಸು ಲಭಿಸಲಿ, ಎಂದು ಭಕ್ತರು ಶ್ರೀಕ್ಷೇತ್ರದೈವ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ. ಆಗ್ನೆಯಂತೆ ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳುತ್ತಿರುವುದ್ದಾಗಿ ತಿಳಿಸಿದರು.ಮಠದ ನೂರಾರು ಭಕ್ತರು ಉಪಸ್ಥಿತರಿದು, ಶ್ರೀ ವೀರಭದ್ರೇಶ್ವರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರಿಗೆ ವಿಶೇಷ ಪೂಜೆಸಲ್ಲಿಸಿ ಶ್ರೀಗಳಿಗೆ ಭೀಳ್ಕೊಡುಗೆ ನೀಡಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ

