ತಿಪಟೂರು ನಗರದ ಬಿ.ಹೆಚ್ ರಸ್ತೆ ಗುರುದರ್ಶನ್ ಹೋಟೆಲ್ ಪಕ್ಕದ ಸಿ.ಕೆ ಮೊಬೈಲ್ ಸೇಲ್ಸ್ & ಸರ್ವೀಸ್ ಅಂಗಡಿ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಮೊಬೈಲ್ ಗಳನ್ನ ದೋಚಿ ಪರಾರಿಯಾಗಿದ್ದಾರೆ.
ತಿಪಟೂರು ನಗರದ ಜನ ನಿಬೀಡ ಪ್ರದೇಶವಾದ ಲಿಂಗರಾಜಪ್ಪ ಕಾಂಪ್ಲೆಕ್ಸ್ ನಲ್ಲಿ ಗುರುದರ್ಶನ್ ಹೋಟೆಲ್ ಪಕ್ಕದಲ್ಲೆ ಇರುವ ಕೇಶವ ಮೂರ್ತಿ ಎಂಬುವವರಿಗೆ ಸೇರಿದ ಸಿ.ಕೆ ಮೊಬೈಲ್ಸ್ ಸೇಲ್ಸ್ &ಸರ್ವೀಸ್ ನಲ್ಲಿ ಸುಮಾರು 3.ಗಂಟೆ ಸಮಯದಲ್ಲಿ ಮೊಬೈಲ್ ಅಂಗಡಿ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಅಂಗಡಿಯಲ್ಲಿ ಇದ್ದ ವಿವಿಧ ಕಂಪನಿಗಳ ಲಕ್ಷಾಂತರ ಮೌಲ್ಯದ ಮೊಬೈಲ್ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಇದ್ದ ಹಣ ದೋಚಿದ್ದಾರೆ,
ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸಲಾಗುತ್ತಿದೆ.
ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ.
ವರದಿ :ಮಂಜುನಾಥ್ ಹಾಲ್ಕುರಿಕೆ


