
ತಿಪಟೂರು ಶಾಸಕ ಕೆ.ಷಡಕ್ಷರಿ ನಮ್ಮ ಪಕ್ಷದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿ ಅನುಭವಿಗಳು, ಯಾವುದೇ ಸಚಿವ ಸ್ಥಾನಮಾನ ನೀಡಿದರೂ ನಿಭಾಯಿಸುವ ಸಾಮರ್ಥ್ಯವಿದೆ,ಪಕ್ಷದ ಹಾಗೂ ವರೀಷ್ಠರೂ ಅವರ ಸಾಮರ್ಥ್ಯದಂತೆ ಸಚಿವ ಸ್ಥಾನ ನೀಡಿದರೆ ನಾನೂ ಖುಷಿಪಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ತಿಪಟೂರು ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ಒಪಿಡಿ ಘಟಕ ಉದ್ಘಾಟನೆ ನೆರವೇರಿಸಿ ನಂತರ ಆಸ್ಪತ್ರೆ ಪರಿಶೀಲನೆ ನಡೆಸಿ ಆಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ ತಿಪಟೂರು ಶಾಸಕ ಕೆ.ಷಡಕ್ಷರಿ ಯವರು ಹಿರಿಯ ರಾಜಕಾರಣಿ,ಸಹಕಾರಿ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ,ಅವರಿಗೆ ಸಚಿವಸ್ಥಾನ ಪಡೆಯುವ,ಎಲ್ಲಾ ಅರ್ಹತೆ ಹಾಗೂ ಸಾಮರ್ಥ್ಯವಿದೆ,ಅವರು ಸಚಿವರಾದರೆ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ,ಪಕ್ಷದ ವರೀಷ್ಟರು ಸಚಿವ ಸ್ಥಾನ ನೀಡಿದರೆ ನಾನು ಖುಷಿಪಡುತ್ತೇನೆ ಎಂದು ತಿಳಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ