
ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘ ಬೇಷರತ್ ಬೆಂಬಲ ಸೂಚಿಸಿದೆ

,ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಮಾತನಾಡಿ ಆಡಳಿತಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು, ಗ್ರಾಮ ಆಡಳಿತಾಧಿಕಾರಿಗಳ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು,ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್
ಗ್ರಾಮಾಡಳಿತಾಧಿಕಾರಿಗಳ ಸಂಘದ ಹೋರಾಟಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬಾಹ್ಯ ಬೆಂಬಲ ನೀಡುತ್ತಿದೆ,ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ನ್ಯಾಯಯುತ ಬೇಡಿಕೆ ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕು,ಎಂದು ತಿಳಿಸಿದರು.

ತಿಪಟೂರು ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ರವಿ ಕುಮಾರ್ ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ರಾಜ್ಯದಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಗುತ್ತಿದ್ದು, ಸೇವಾ ಭದ್ರತೆ, ಹಾಗೂ ಹೆಚ್ಚುವರಿ ಕೆಲಸಗಳಿಂದ ವಿಮುಕ್ತಿ,ಗ್ರಾಮಾಡಳಿತಾಧಿಕಾರಿಗಳ ಜಾಬ್ ಚಾಟ್ ನಿಗದಿ. ಹಾಗೂ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಸೇವಾ ಬಡ್ತಿ ನೀಡಬೇಕು,ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಿಂದ ನಿಗಧಿತ ಸಮಯದಲ್ಲಿ ಕೆಲಸ ನಿರ್ವಹಿಸಲು ಸಮಸ್ಯೆ ಉಂಟಾಗಿದ್ದು, ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು, ಅನುಕಂಪದ ನೇಮಕಾತಿಯಲ್ಲಿ ಪ್ರಥಮದರ್ಜೆ ಸಹಾಯಕರ ನೇಮಕಾತಿಗೆ ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ಪರಿಗಣಿಸಬೇಕು. ಪ್ರಯಾಣಭತ್ಯೆ ಮಾಡಬೇಕು. ಮಾತೃ ಇಲಾಖೆಗೆ ಕೆಲಸಗಳ ಜೊತೆ ಬೆಳೆಸಮೀಕ್ಷೆ ಹಾಗೂ ಪೊಲೀಸ್ ಇಲಾಖೆ ನೀಡುವ ಮಹಜರ್ ಜವಾಬ್ದಾರಿಯನ್ನು ನಿಬಾಯಿಸಬೇಕು.ಇತ್ತಿಚಿನ ದಿನಗಳಲ್ಲಿ ಕಂದಾಯ ಇಲಾಖೆಯ ಬಹುತೇಕ ಜವಾಬ್ದಾರಿ ಗ್ರಾಮಾಡಳಿತಾಧಿಕಾರಿಗಳ ಮೇಲೆ ಇದ್ದು, ಕಾರ್ಯಬಾರದ ಒತ್ತಡ ಹೆಚ್ಚಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಕೆಲಸಮಾಡುವ ಗ್ರಾಮ ಆಡಳಿತಾಧಿಕಾರಿಗಳು ಇತ್ತಿಚಿನ ದಿನಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ನೆಟ್ವರ್ಕ್ ಸಮಸ್ಯೆ ಕಾರಣಕ್ಕೆ ಸೂಕ್ತ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗದೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಶಿಕ್ಷೆ ಅನುಭವಿಸುವ ಸಂದರ್ಭಗಳೆ ಹೆಚ್ಚಾಗಿವೆ, ನಮಗೆ ಸೂಕ್ತವಾಗಿ ತಾಂತ್ರಿಕ ಉಪಕರಣಗಳನ್ನ ಒದಗಿಸಬೇಕು. ಹಾಗೂ ನಿರ್ಧಿಷ್ಟ ಜಾಬ್ ಚಾಟ್ ನೀಡಬೇಕು,ಕಾರ್ಯಬಾರದ ಒತ್ತಡದ ಕಾರಣಕ್ಕೆ ಅನೇಕ ನೌಕರರು ಮಾನಸಿಕ ಕಿನ್ನತೆ ಹಾಗೂ ಅನಾರೋಗ್ಯಕ್ಕೆ ಒಳಗಾಗುತ್ತದ್ದು, ಸರ್ಕಾರ ಹೆಚ್ಚುವರಿ ಆರೋಗ್ಯ ಸೌಲಭ್ಯ ನೀಡಬೇಕು.ನಮಗೆ ಸೇವಾ ಭದ್ರತೆ ಜೊತೆಗೆ ಆಕಸ್ಮಿಕ ಅವಗಡಗಳಲ್ಲಿ ಸಾವು ಸಂಭವಿಸಿದರೆ ಹೆಚ್ವಿನ ಪರಿಹಾರ ನೀಡಬೇಕು. ಪ್ರಯಾಣ ಭತ್ಯೆ ಹಾಗೂ ವರ್ಗಾವಣೆಗೆ ಸೂಕ್ತ ಕಾನೂನು ರೂಪಿಸಿ ವರ್ಗಾವಣೆಗೆ ಚಾಲನೆ ನೀಡಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ಸರ್ಕಾರ ನಮ್ಮ ಮನವಿಗೆ ಯಾವುದೇ ನ್ಯಾಯ ದೊರಕಿಸಿರುವುದಿಲ್ಲ,ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ಖಜಾಂಚಿ ಅಶೋಕ್ ಕೆ.ಎಂ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮುಖಂಡರಾದ ದೀಪಕ್ ಬೂದಾಳ್. ಶಿವರಾಮ್.ಶ್ರೀಹರ್ಷ,ರವಿಶಂಕರ್.ಭವ್ಯ.ರಾಜು.ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ