
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಪ್ರಸಿದ್ದ ಕ್ಷೇತ್ರ ಗಂಗನಘಟ್ಟ ಬಾರೇ ಮೇಲೆ ನೆಲೆದಿರುವ ಶ್ರೀ ರಂಗನಾಥಸ್ವಾಮಿ ಪುರಾತನ ಇತಹಾಸ ಹೊಂದಿರುವ ಕ್ಷೇತ್ರವಾಗಿದ್ದು,ಸಾವಿರಾರು ವರ್ಷಗಳ ಹಿಂದೆ ನೆಲೆನಿಂತಿರುವ ಶ್ರೀರಂಗನಾಥ ಸ್ವಾಮಿಯನ್ನ ಗಂಗನಘಟ್ಟ ಗ್ರಾಮಸ್ಥರು ಶ್ರೀ ಮೂಲಸ್ಥಾನದ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನ ಪೂಜಿಸುತ್ತಾ ಬಂದಿದ್ದು,ಗಂಗನಘಟ್ಟ ಸಾಸಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಒಕ್ಕಲುಗಳು,ಬಯಸಿದ್ದಾಗ ಅವರ ಮನೆ ಪೂಜೆ ಪುನಸ್ಕಾರಗಳಿಗೆ ಕಳಿಸುವ ವಾಡಿಕೆ, ಅನುಚಾನವಾಗಿ ನಡೆದುಕೊಂಡು ಬಂದಿದೆ, ಸಾಸಲಹಳ್ಳಿ ಗ್ರಾಮದ ಶ್ರೀವೈಷ್ಣವ ಜನಾಂಗದ ಅರ್ಚಕರು ಪೂಜಾಕೈಂಕರ್ಯ ನಡೆಸುತ್ತಾ ಬಂದಿದ್ದಾರೆ. ಆದರೆ ಸಾಸಲಹಳ್ಳಿ ಗ್ರಾಮದ ಅರ್ಚಕರು ಅನಾಗತ್ಯ ಗಲಾಟೆ ಮಾಡಿ, ಗಂಗನಘಟ್ಟ ಗ್ರಾಮದ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನ ಸಾಸಲಹಳ್ಳಿ ಗ್ರಾಮದ ದೇವರು ಎಂಬುದಾಗಿ ಬಿಂಬಿಸಿ ದೂರು ನೀಡಿದ್ದು. ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಎರಡು ಗ್ರಾಮಗಳ ಸಭೆ ನಡೆಸಿ,ಯಥಾಸ್ಥಿತಿ ಕಾಪಾಡಿಕೊಂಡು ಸಾಸಲಹಳ್ಳಿ ಗ್ರಾಮಕ್ಕೆ ತದ್ರೂಪಿ ವಿಗ್ರಹಮಾಡಿಸಿಕೊಡುವುದು,ಮೂಲವಿಗ್ರಹವನ್ನ ಗಂಗನಘಟ್ಟ ಗ್ರಾಮಸ್ಥರು ಪೂಜಿಸಿಕೊಂಡುಹೋಗುವುದು ಎಂದು,ತಿಳಿಸಿದ್ದರು,ಆದರೇ ಜಿಲ್ಲಾಧಿಕಾರಿಗಳು ಯಾವುದೇ ಸಹಜನ್ಯಾಯ ಪರಿಶೀಲನೆ ಮಾಡದೆ,ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಸಭೆಯ ನಿರ್ಣಯಗಳನ್ನ ಪರಿಶೀಲನೆ ಮಾಡದೆ, ಶ್ರೀರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನ ಮೂಲಸ್ಥಾನದಿಂದ ಸಾಸಲಹಳ್ಳಿ ಗ್ರಾಮಕ್ಕೆ ನೀಡಲು ಆದೇಶ ನೀಡಿರುವುದು,ಹಲವಾರು ಅನುಮಾನ ಹಾಗೂ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದ್ದು,ಜಿಲ್ಲಾಧಿಕಾರಿಗಳು ತಮ್ಮ ಆದೇಶ ಪುನರ್ ಪರಿಶೀಲನೆ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

ತಿಪಟೂರು ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಡಾ// ಜಿ.ಬಿ ವಿವೇಚನ್ ಮಾತನಾಡಿ ಶ್ರೀರಂಗನಾಥಸ್ವಾಮಿ ಸಾವಿರಾರು ವರ್ಷಗಳಿಂದ ಗಂಗನಘಟ್ಟ ಗ್ರಾಮದ ಜನ ಪೂಜಿಸುತ್ತಾ ಬಂದಿದ್ದಾರೆ,ಗಂಗನಘಟ್ಟ ಗ್ರಾಮದಲ್ಲಿ ಶ್ರೀ ವೈಷ್ಣವ ಅರ್ಚಕರು ಇಲ್ಲದ ಕಾರಣ,ಸಾಸಲಹಳ್ಳಿ ಗ್ರಾಮದ ಅರ್ಚಕರು ಪೂಜೆನಡೆಸುತ್ತಾ ಬಂದಿದ್ದಾರೆ, ಆದರೆ ಅರ್ಚಕರು ಅನಾಗತ್ಯ ವಿವಾದ ಸೃಷ್ಠಿಮಾಡಿ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿ ಸಾಸಲಹಳ್ಳಿಗ್ರಾಮಕ್ಕೆ ಸೇರಿದೆ ಎಂಬುದಾಗಿ ದೂರು ನೀಡಿದ್ದಾರೆ, ದೂರಿನ ಪೂರ್ವಾಪರ ವಿಚಾರಿಸದೆ, ಜಿಲ್ಲಾಧಿಕಾರಿಗಳು ಸಹಜ ನ್ಯಾಯಬದಿಗೊತ್ತಿ ಉತ್ಸವ ಮೂರ್ತಿ ಸಾಸಲಹಳ್ಳಿಗೆ ಸೇರಿದೆ,ಎಂದು ಆದೇಶ ನೀಡಿದ್ದಾರೆ,ನಮ್ಮ ಹಿಂದೂ ಪರಂಪರೆಯಲ್ಲಿ ಮೂಲವಿಗ್ರಹ ಹಾಗೂ ಉತ್ಸವಮೂರ್ತಿಗಳು ಒಂದೆಡೆ ಇರುತ್ತವೆ ಆದರೆ ಗಂಗನಘಟ್ಟದಲ್ಲಿ ಇರುವಂತಹ ವಿಗ್ರಹವನ್ನ ಸಾಸಲಹಳ್ಳಿ ಗ್ರಾಮಕ್ಕೆ ಸೇರಿದೆ ಎಂಬುದಾಗಿ ಜಿಲ್ಲಾಧಿಕಾರಿಗಳ ಆದೇಶ ಆತಂಕ ಉಂಟುಮಾಡಿದೆ, ಗಂಗನಘಟ್ಟ ಹಾಗೂ ಸಾಸಲಹಳ್ಳಿ ಗ್ರಾಮಸ್ಥರು ಅನ್ಯೂನ್ಯವಾಗಿದೇವೆ, ಈ ಘಟನೆಯಿಂದ ಎರಡು ಗ್ರಾಮಗಳ ನಡುವೆ ವೈಷಮ್ಯ ಉಂಟಾಗುವುದು ಬೇಡ,ಆದರಿಂದ ಜಿಲ್ಲಾಧಿಕಾರಿಗಳು ತಮ್ಮ ಆದೇಶ ಪುನರ್ ಪರಿಶೀಲನೆ ಮಾಡಿ ಸಾವಿರಾರು ವರ್ಷಗಳಿಂದ ಗಂಗನಘಟ್ಟ ಗ್ರಾಮಸ್ಥರು ಸಾವಿರು ವರ್ಷಗಳಿಂದ ಪೂಜಿಸುತ್ತಾ ಬಂದಿರುವ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿ ಗಂಗನಘಟ್ಟ ಗ್ರಾಮದಲ್ಲೇ ಉಳಿಯುವಂತೆ ಮಾಡಬೇಕು ಎಂದು ತಿಳಿಸಿದರು

ಗ್ರಾಮದ ಮುಖಂಡ ಗೋವಿಂದಸ್ವಾಮಿ ಮಾತನಾಡಿ ಗಂಗನಘಟ್ಟ ಶ್ರೀರಂಗನಾಥಸ್ವಾಮಿ ನಮ್ಮ ಒಕ್ಕಲು ದೈವ,ಸಾವಿರಾರು ಕುಟುಂಬಗಳು ಪೂಜಿಸುತ್ತಾಬಂದಿದ್ದು ನಮ್ಮ ಜೀವಕೊಟ್ಟಾದರೂ ಶ್ರೀ ರಂಗನಾಥಸ್ವಾಮಿ ಉತ್ಸವಮೂರ್ತಿ ತೆಗೆದುಕೊಂಡುಹೋಗಲು ಬಿಡುವುದಿಲ್ಲ,ಜಿಲ್ಲಾಧಿಕಾರಿಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡ ಸಂಪ್ರದಾಯ ಹಾಗೂ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳ ನಡೆಸಿದ ಎರಡು ಗ್ರಾಮಗಳ ಸೌಹಾರ್ದ ಸಭೆ ನಡೆವಳಿ ಪರಿಶೀಲಿಸ ಬೇಕು.ಈ ಹಿಂದೆ ಸಾಸಲಹಳ್ಳಿ ಗ್ರಾಮಸ್ಥರು ತದ್ರಪಿ ಉತ್ಸವ ಮೂರ್ತಿ ಮಾಡಿಸಿಕೊಡಲು ಒಪ್ಪಿರುತ್ತಾರೆ,ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಪರಿಶೀಲನೆ ಮಾಡಿ,ಶ್ರೀರಂಗನಾಥಸ್ವಾಮಿ ಉತ್ಸವಮೂರ್ತಿ ಗಂಗನಘಟ್ಟ ಗ್ರಾಮದಲ್ಲೇ ಉಳಿಯುವಂತ್ತೆ ಮಾಡಬೇಕು,ಈ ಬಗ್ಗೆ ಸರ್ಕಾರ ಹಾಗೂ ತಹಸೀಲ್ದಾರ್ ಗೂ ಮನವಿ ಸಲ್ಲಿಸಿದ್ದು ಹೈಕೋರ್ಟ್ ಮೊರೆಹೋಗಲಾಗಿದೆ,ಆದರೂಜನರ ಭಾವನೆಗಳಿಗೆ ವಿರುದ್ದವಾಗಿ ಉತ್ಸವ ಮೂರ್ತಿ ತೆಗೆದುಕೊಂಡು ಹೋಗಲು ಬಂದರೆ ನಮ್ಮ ಪ್ರಾಣವನ್ನಕೊಟ್ಟರು ದೇವರನ್ನತೆಗೆದುಕೊಂಡುಹೋಗಲು ಬಿಡುವುದಿಲ್ಲ,ಎಂದು ತಿಳಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯ ಧರ್ಮದರ್ಶಿ ರಂಗಸ್ವಾಮಿ.ನಂಜಪ್ಪ.ಗೋವಿಂದರಾಜು.ಹೇಮಾಚಲ.ರಂಜಿತ್.ರಾಜು.ಹೇಮಂತ್ ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ