
ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿತರಣೆ ಮಾಡುತ್ತಿರುವ ಪಡಿತರ ಆಹಾರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿದ್ದು, ಬಡವರು ತಿನ್ನುವ ಆಹಾರಕ್ಕೆ ಕನ್ನ ಹಾಕಲಾಗುತ್ತಿದೆ,ಎಂದು ಹಾಲೇನಹಳ್ಳಿ ಗ್ರಾಮಸ್ಥರು ತಿಪಟೂರು ತಹಸೀಲ್ದಾರ್ ಹಾಗೂ ಆಹಾರ ಇಲಾಖೆಗೆ ದೂರು ನೀಡಿ ಆಕ್ರೋಶ ವ್ಯಕ್ತಪಡಿಸಿದರು

,
ನಂತರ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಹಾಲೇನಹಳ್ಳಿ ಗ್ರಾಮದ ಬನಶಂಕರ್ ಮಾತನಾಡಿ ಹಾಲ್ಕುರಿಕೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸರ್ಕಾರ ಬಡವರಿಗೆ ನೀಡುವ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತುದ್ದು, ಪಡಿತರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಸಲಾಗುತ್ತಿದೆ,ಪ್ರತಿ ಪಡಿತರ ಚೀಟಿಗೆ 150ಗ್ರಾಮ ಆಹಾರ ಕಡಿತಗೊಳಿಸಿ ಪಡಿತರ ಧಾನ್ಯ ವಿತರಣೆ ಮಾಡುತ್ತಿದ್ದಾರೆ, ತೂಕದ ತಕ್ಕಡಿಗೆ 150ಗ್ರಾ ರಟ್ಟಿನ ಇಡಲಾಗಿದೆ, ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳಿದ್ದು ಪ್ರತಿ ಕಾರ್ಡ್ ಗೆ 150 ಗ್ರಾಂ ನಂತೆ ಆಹಾರಧಾನ್ಯ ಕಡಿತಗೊಳಿಸಿದರೆ,ಪ್ರತಿತಿಂಗಳಲ್ಲಿ 5ರಿಂದ 6ಕ್ವಿಂಟಲ್ ಬಡವರಪಾಲಿನ ಆಹಾರ ಧಾನ್ಯ ಉಳಿತಾಯವಾಗಲಿದ್ದು,ಬಡವರ ಪಾಲಿನ,ಧಾನ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲಾಗುತ್ತಿದ್ದು,ಬಡವರಿಂದ ಸಂಗ್ರಹವಾದ ಧಾನ್ಯವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ, ಎನ್ನುವ ಆರೋಪಗಳಿದ್ದು,ಬಡವರಿಗೆ ಕಡಿಮೆ ಆಹಾರಧಾನ್ಯ ನೀಡುತ್ತಿರುವ ಬಗ್ಗೆ ಯಾರಾದರು ಪ್ರಶ್ನೆ ಮಾಡಿದರೆ, ಅವರ ಪಡಿತರ ಪಾಲಿನ ಆಹಾರಧಾನ್ಯ ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಒಂದು ತಿಂಗಳ ಪಡಿತರ ಧಾನ್ಯ ಪಡೆಯಲು ಕನಿಷ್ಟ ಎರಡರಿಂದ ಮೂರುದಿನ ಕೂಲಿನಾಲಿ ಬಿಟ್ಟುಕಾಯಬೇಕು, ಅವತ್ತು ಟೋಕನ್ ಸಿಗದಿದರೆ, ಮರುದಿನ ಕೂಲಿಬಿಟ್ಟುಕಾಯಬೇಕು, ಇನ್ನೂ ಪಡಿತರ ಧಾನ್ಯ ಪಡೆಯುವ ನಾಗರೀಕರು ಕಡ್ಡಾಯವಾಗಿ ಉಪ್ಪು. ಬಟ್ಟೆಸೋಪು,ಮೈ ಸೋಪು, ಪುಳಿಯೋಗರೇ ಪ್ಯಾಕೇಟ್ ಪಾಮ್ ಆಯಿಲ್,ಕಾರದ ಪುಡಿ ಸೇರಿದಂತೆ ಸೊಸೈಟಿ ಯವರ ಕೊಡುವಂತಹ ವಸ್ತುಗಳನ್ನ ತೆಗೆದುಕೊಳ್ಳಲೇ ಬೇಕು, ಅವರು ನೀಡುವ ವಸ್ತುಗಳನ್ನ ತೆಗೆದುಕೊಳ್ಳದಿದರೆ , ಪಡಿತರ ಧಾನ್ಯ ನೀಡದೆ ವಾಪಾಸ್ ಕಳಿಸುತ್ತಾರೇ , ಆ ತಿಂಗಳು ಬಡವರ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ ಎನ್ನುವಂತ್ತಾಗಿದೆ,ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾರ್ಯಾಲಯದಲ್ಲಿ ನೀಡುವ ಪಡಿತರ ಕೇಂದ್ರದಲ್ಲಿ ಇದೇರೀತಿ ಗೋಲ್ ಮಾಲ್ ನಡೆಯುತ್ತಿದೆ, ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಲೇನಹಳ್ಳಿ ಗ್ರಾಮದಲ್ಲಿ ಹಾಲೇನಹಳ್ಳಿ. ಹಾಲೇನಹಳ್ಳಿ ಬೋವಿಕಾಲೋನಿ.ಗೊಲ್ಲರಹಟ್ಟಿ,ಹೊಸೂರು,ಗ್ರಾಮಗಳಿಗೆ ಅನುಕೂಲವಾಗುವಂತೆ ಪಡಿತರ ವಿತರಣೆ ಮಾಡುವ ಕೇಂದ್ರದಲ್ಲೂ ಇದೇ ರೀತಿ ಅವ್ಯವಹಾರ ನಡೆಯುತ್ತಿದ್ದು,ಹಾಲ್ಕುರಿಕೆ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರ ಪ್ರಶ್ನೆ ಮಾಡಿದರೆ ಅವರನ್ನ ಬೆದರಿಸಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ,ನಾವೂ ಬಡವರಿಗೆ ಆಗುತ್ತಿರುವ ಅನ್ಯಾಯ ದೌರ್ಜನ್ಯ ಸರಿಪಡಿಸುವಂತೆ ತಿಪಟೂರು ತಹಸೀಲ್ದಾರ್ ಹಾಗೂ ಆಹಾರ ನಿರೀಕ್ಷಕರಿಗೆ ದೂರು ನೀಡಿದ್ದೇವೆ, ನಮಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ ಎಂದು ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ರವೀಶ್ ಮಾತನಾಡಿ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಡಿತರ ಧಾನ್ಯ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ನಾಲ್ಕೈದು ಭಾರೀ ಪ್ರಶ್ನೆ ಮಾಡಿದ್ದೇವೆ,ಆದರೆ ಅವರು ನಮ್ಮ ಸಹಕಾರ ಸಂಘದ ಸಿಬ್ಬಂದಿಗೆ ಸಂಬಳ ನೀಡಲು, ಕಚೇರಿ ನಿರ್ವಹಣೆಗೆ ಯಾರು ಹಣಕೊಡುತ್ತಾರೆ, ನಾವು ಕೊಟಷ್ಟು ತೆಗೆದುಕೊಂಡುಹೋಗಿ, ಜಾಸ್ತಿ ಮಾತನಾಡಿದರೆ ಪಡಿತರ ಧಾನ್ಯವನ್ನೇ ಕೊಡೋದಿಲ್ಲ ನೀವು ಯಾರಿಗೆ ಬೇಕಾದರೂ ದೂರು ನೀಡಿ ನಾವು ಎದರೋದಿಲ್ಲ ಎಂದು ಉದ್ಗಟತನದಿಂದ ಮಾತನಾಡಿತ್ತಾರೆ,ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರು ಹಾಲ್ಕುರಿಕೆಯಲ್ಲಿ ಮಾತ್ರ ಇನ್ನೂ ಸ್ವತಂತ್ರ್ಯ ಪೂರ್ವದ ವ್ಯವಸ್ಥೆಯೇ ಇದೆ,ಇಲ್ಲಿ ನಡೆಯುತ್ತಿರುವ ಅವ್ಯವಹಾರ ಅನ್ಯಾಯದ ವಿರುದ್ದ ಸರ್ಕಾರ ಸೂಕ್ತ ಕ್ರಮಕೈಗೊಳ್ಳ ಬೇಕಿದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಆನಂದ್, ರವಿ,ಕಾಂತರಾಜು,ಚೇತನ್ ದಿನೇಶ್,ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ


