
ತುಮಕೂರು: ಪರಿಸರ ಪ್ರತಿಯೊಂದು ಉಚಿತವಾಗಿ ನೀಡಿದೆ ಪ್ರತಿಯೊಂದು ನಾವು ಉಳಿಸಿ ಉಳಿಸಿ ಎಂದು ಹೇಳಲಾಗುತ್ತದೆ ಕಾರಣ ಪರಿಸರ ಮಾನವನ ದುರ್ಬಳಕೆಯಿಂದ ಸ್ಪೋಟವಾಗುತ್ತಿದೆ ಪರಿಸರ ಸಂರಕ್ಷಣೆಯು ಕೇವಲ ಪರಿಸರ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ ಬದಲಾಗಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನಗರದ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ 2025 ನೇ ಸಾಲಿನ ವಿಶ್ವ ಜೌಗು ದಿನದ ಅರಿವು ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಎಂ ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ವಹಿಸಿ ಮಾತನಾಡಿದರು. ಇಂದು ದೂರಸಂಪರ್ಕ ತಂತ್ರಜ್ಞಾನದ ಪರಿಣಾಮದಿಂದ ಪಕ್ಷಿಗಳ ಉಳಿವಿಗೆ ಅಡ್ಡಿಯಾಗಿದೆ ಪರಿಸರ ವಿದ್ಯಾರ್ಥಿಗಳು ಪರಿಸರದ ಸೂಕ್ಷ್ಮತೆಯನ್ನು ಅರಿತು ಜನರಿಗೆ ಪರಿಸರದ ಅರಿವನ್ನು ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್ ಮಾತನಾಡಿ ವಿಶ್ವ ಜೌಗು ದಿನದ ಆಚರಣೆಯ ಹಿನ್ನೆಲೆಯನ್ನು ವಿವರಿಸಿ, ನಾವು ಮೊದಲು ಜೌಗು ದಿನದ ಮಹತ್ವವನ್ನು ಅರಿಯಬೇಕು ಅಂತೆಯೇ ಅದನ್ನು ಸಂರಕ್ಷಿಸಬೇಕು ನಮ್ಮ ತುಮಕೂರು ಪ್ರದೇಶದಲ್ಲಿ ಒಂದು ಸ್ಥಳವನ್ನು ರಾಮ್ಸೆಟ್ ಸೈಟಿಗೆ ಸೇರಿಸುವ ಗುರಿಯನ್ನು ಹೊಂದಬೇಕು, ನಿಮ್ಮ ಜ್ಞಾನಮಟ್ಟವನ್ನ ಹೆಚ್ಚಿಸಿ ಕೊಳ್ಳಬೇಕು ಕೇವಲ ಪದವಿಗಳಿಗೋಸ್ಕರ ವ್ಯಾಸಂಗ ಮಾಡಬಾರದು ಉನ್ನತ ಮಟ್ಟಕ್ಕೆ ಸಮಾಜದಲ್ಲಿ ಬೆಳೆಯಬೇಕು ಎಂದು ಪರಿಸರ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನದ ಸಂಯೋಜಕರು ಮತ್ತು ಮುಖ್ಯಸ್ಥರಾದ ಡಾ. ಪೂರ್ಣಿಮಾ ಡಿ ಮಾತನಾಡಿ ಪರಿಸರ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಭಾಗವು ಪರಿಸರಕ್ಕೆ ಮೀಸಲಾಗಿದೆ, ಇಂದು ನಮ್ಮ ವಿಭಾಗವು ಒಂದು ಮೈಲುಗಲ್ಲಾಗಿದೆ ಕಾರಣ ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರೊಂದಿಗೆ ಸುದ್ದಿಯನ್ನು ಹರಡುವಲ್ಲಿ ಪ್ರಬಲವಾದ ಮಾಧ್ಯಮವಾಗಿದೆ ಈ ಹಿನ್ನೆಲೆಯಲ್ಲಿ ನಮ್ಮ ಪರಿಸರ ವಿದ್ಯಾರ್ಥಿಗಳು ಅಧಿಕೃತವಾಗಿ ವಿಭಾಗದಿಂದ ಜನರಿಗೆ ಪರಿಸರದ ಮಾಹಿತಿಯ ಜ್ಞಾನಾರ್ಜನೆಗೆ ತ್ವರಿತವಾಗಿ ದೊರಕಿಸುವ ಉದ್ದೇಶದಿಂದ ನೂತನ ಯೂಟ್ಯೂಬ್ ಚಾನೆಲ್ (Dept Of Ecology and Evs Tumkur University Official) ಉದ್ಘಾಟನೆ ಮಾಡಲಾಗಿದೆ ಎಂದರು. ವಿಶ್ವ ಜೌಗು ದಿನದ ಅಂಗವಾಗಿ ಜೌಗು ಪ್ರದೇಶದ ಸಂರಕ್ಷಣೆಗೆ ಒತ್ತನ್ನ ಕೊಡಬೇಕು ಹಾಗೂ ಬೇಸಿಗೆಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ಉದ್ಯಾನವನದ ಮರಗಳಲ್ಲಿ ಶೇಖರಣೆ ಮಾಡಲಾಗಿದೆ, ಅಲ್ಲದೆ ಈ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಸಹಕಾರ ಮತ್ತು ಸ್ಪಂದನೆ ನೀಡಿದ ನನ್ನ ಎಲ್ಲಾ ಪರಿಸರ ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಸಿಬ್ಬಂದಿಗಳಿಗೆ ನಾನು ಧನ್ಯವಾದಗಳು ಹೇಳುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲದ ಕುಲಪತಿಗಳಾದ ಎಂ ವೆಂಕಟೇಶ್ವರಲು, ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್, ತುಮಕೂರು ವಿಶ್ವವಿದ್ಯಾನಿಲದ ಪ್ರಾಂಶುಪಾಲರಾದ ಪ್ರೊ ಶೇಟ್ ಪ್ರಕಾಶ್, ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗದ ಸಂಯೋಜಕರು ಮತ್ತು ಮುಖ್ಯಸ್ಥರಾದ ಶ್ರೀಮತಿ ಡಾ. ಪೂರ್ಣಿಮ ಡಿ, ಉಪನ್ಯಾಸಕರುಗಳಾದ ಡಾ. ಪುಟ್ಟರಾಜು, ಸಮ್ರೀನ್ ನಾಝ್, ಶಾಂಭವಿ ಸಿಂಗ್, ರಮ್ಯಾ, ನಚಿಕೇತ, ಪ್ರಿಯಾಂಕ ಪಟೇಲ್, ಮಧು . ಆರ್ ಮತ್ತು ಪರಿಸರ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಇದೇ ಸಂದರ್ಭದಲ್ಲಿ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ತುಮಕೂರು ವಿಶ್ವವಿದ್ಯಾನಿಲಯದ ಉದ್ಯಾನವನದ ಮರಗಳಲ್ಲಿ ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್ ರವರಿಂದ ನೀರನ್ನು ಶೇಖರಿಸಲಾಯಿತು.

ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧಿಕೃತ ನೂತನ ಯೂಟ್ಯೂಬ್ ಚಾನೆಲ್ ಅನ್ನು ಕುಲಪತಿಗಳಾದ ಪ್ರೊ ಎಂ.ವೆಂಕಟೇಶ್ವರಲು ರವರಿಂದ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ 2025 ನೇ ಜೌಗು ದಿನದ ಅಂಗವಾಗಿ ಗಿಡವನ್ನು ನೆಟ್ಟು ಪ್ರೊ ಎಂ.ವೆಂಕಟೇಶ್ವರಲು ರವರಿಂದ ಮತ್ತು ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್ ರವರಿಂದ ಸದರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ವರದಿ: ಸಂತೋಷ್ ಓಬಳ. ಗುಬ್ಬಿ